ಸಿಹಿಸುದ್ದಿ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ನಿಗದಿ
ಬೆಂಗಳೂರು, ಜೂನ್ 15: ಕರ್ನಾಟಕ ಸರ್ಕಾರ ತರಬೇತಿ ಹೊಂದಿದ ಶಿಕ್ಷಕರು, ತರಬೇತಿ ಹೊಂದದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೇತನ ಶ್ರೇಣಿ ನಿಗದಿಗೊಳಿಸಿ ಆದೇಶ ಹೊರಡಿಸಿದೆ.
ಈ ಕುರಿತು ಬಿ. ಬಿ. ಕಾವೇರಿ, ಶಾಲಾ ಶಿಕ್ಷಣ ಇಲಾಖೆ, ಆಯುಕ್ತರು ಜ್ಞಾಪನಾ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ. ಈ ಪತ್ರ ತರಬೇತಿ ಹೊಂದದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಿಗೆ, ತರಬೇತಿ ಹೊಂದಿದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ವೇತನ ಶ್ರೇಣಿಯನ್ನು ನಿಗದಿಪಡಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ.

ಸರ್ಕಾರಿ ಪ್ರಾಥಮಿಕ ಶಾಲಾ ತರಬೇತಿ ರಹಿತ ಶಿಕ್ಷಕರ ಪಿಂಚಣಿಯನ್ನು ನಿಯಮಾನುಸಾರ ನಿರ್ಧರಿಸಿರುವುದನ್ನು ಹಂತ ಹಂತವಾಗಿ ವಿವರಿಸಲಾಗಿರುತ್ತದೆ. ಸೂಚನೆಗಳನ್ವಯ ಸರ್ಕಾರಿ ಪ್ರಾಥಮಿಕ ಶಾಲಾ ತರಬೇತಿ ರಹಿತ ಶಿಕ್ಷಕರ ಪಿಂಚಣಿಯನ್ನು ನಿಯಮಾನುಸಾರ ಸರಿಯಾಗಿ ನಿರ್ಧರಿಸಿ ಮಹಾಲೇಖಪಾಲರಿಗೆ ಕೂಡಲೇ ಪರಿಷ್ಕೃತ ಪುಸ್ತಾವನೆ ಸಲ್ಲಿಸಲು ಪಿಂಚಣಿ ಪ್ರಾಧಿಕಾರಿಯಾದ ಎಲ್ಲಾ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.
Accordingly, it is also requested that a MODEL PAY FIXATION MAY BE ISSUED TO ALL THE BLOCK EDUCATION OFFICERS clearly detailing the step-by-step procedure/methodology to fix the pay in the light of the Government oders issued from time to time, duly endorseing a copy to this office ಎಂಬುದಾಗಿ ಮಹಾಲೇಖಪಾಲರು ಕೋರಿರುತ್ತಾರೆ.
ಈ ಸಂಬಂಧ ಸರ್ಕಾರದ ಪತ್ರದಲ್ಲಿ ಮಹಾಲೇಖಪಾಲರು ಕೋರಿರುವಂತೆ ಪಿಂಚಣಿ ಪ್ರಾಧಿಕಾರಿಯಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮೇಲ್ಕಂಡ ಪ್ರಕರಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ತರಬೇತಿ ರಹಿತ ಶಿಕ್ಷಕರ ಪಿಂಚಣಿಯನ್ನು ನಿಯಮಾನುಸಾರ ಸರಿಯಾಗಿ ನಿರ್ಧರಿಸಿ ಕ್ರಮವಹಿಸಲು ಸೂಚನೆ ನೀಡಲು ತಿಳಿಸಲಾಗಿದೆ ಎಂದು ಪತ್ರ ಹೇಳಿದೆ.
ಪತ್ರದ ವಿವರಗಳು: ಸರ್ಕಾರದ ಪತ್ರದಲ್ಲಿ ನೀಡಿರುವ ನಿರ್ದೇಶನದಂತೆ ತರಬೇತಿ ರಹಿತ ಶಿಕ್ಷಕರ ಪಿಂಚಣಿ ಪ್ರಸ್ತಾವನೆಯನ್ನು ತ್ವರಿತವಾಗಿ ಇತ್ಯರ್ಥಪಡಿಸುವ ಸಂಬಂಧ ಪಿಂಚಣಿ ಸಕ್ಷಮ ಪ್ರಾಧಿಕಾರಿಗಳಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ತರಬೇತಿ ರಹಿತ ಶಿಕ್ಷಕರ ವೇತನ ಶ್ರೇಣಿಯನ್ನು ತರಬೇತಿ ಹೊಂದಿದ ಶಿಕ್ಷಕರ ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸಿ ಮಾನ್ಯ ಮಹಾಲೇಖಪಾಲರು ಕೋರಿರುವಂತೆ MODEL PAY FIXATION ನೀಡಲಾಗಿದೆ.
ಉದಾಹರಣೆಗೆ X ಎಂಬ ಶಿಕ್ಷಕ 03-11-1979 ರಲ್ಲಿ ನೇಮಕಾತಿ ಹೊಂದಿರುವುದಾಗಿ ಭಾವಿಸಿ ತರಬೇತಿ ಹೊಂದಿದ ಶಿಕ್ಷಕರ ವೇತನ/ ವೇತನ ಶ್ರೇಣಿ ಕಾಲಂ (A) ನಲ್ಲಿ ಮತ್ತು ತರಬೇತಿ ರಹಿತ ಶಿಕ್ಷಕರ ವೇತನ/ ವೇತನ ಶ್ರೇಣಿಯನ್ನು ಕಾಲಂ (B) ನಲ್ಲಿ ನಿಯಮ 43 ರಡಿಯಲ್ಲಿ ಸರ್ಕಾರದ ಆದೇಶ ದಿನಾಂಕ: 20-1-2011 ರಂತೆ ನಿಗದಿಪಡಿಸಿದೆ ಎಂದು ಹೇಳಿದೆ.
ತರಬೇತಿ ರಹಿತ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರುಗಳಿಗೆ ದಿನಾಂಕ 20-01-2011ರ ಸರ್ಕಾರಿ ಆದೇಶದ ಅನುಸಾರ ವಿವರಿಸಿದಂತೆ ತರಬೇತಿ ರಹಿತ ಶಿಕ್ಷಕರ ವೇತನ ಶ್ರೇಣಿ ರೂ. 7275-13350ರ ಬದಲಾಗಿ ಕೆ.ಸಿ.ಎಸ್.ಆರ್. ನಿಯಮ 43ರ ಅನ್ವಯ ತರಬೇತಿ ಹೊಂದಿದ ಶಿಕ್ಷಕರ ವೇತನ ಶ್ರೇಣಿಯಾದ ರೂ. 8000-14800 ರಲ್ಲಿ ಉದಾಹರಣೆ ರೂಪದಲ್ಲಿ ವೇತನ ನಿಗದಿಪಡಿಸಿದೆ.
ಪ್ರತಿ ಶಿಕ್ಷಕರ ವೇತನ ನಿಗದಿಪಡಿಸುವಾಗ ಸದರಿ ಶಿಕ್ಷಕರುಗಳಿಗೆ ಕನ್ನಡ ಭಾಷಾ ಪರೀಕ್ಷೆಯ ಒಂದು ಹೆಚ್ಚುವರಿ ವೇತನ ಬಡ್ತಿಗೆ ನಿಯಮಾನುಸಾರ ಅರ್ಹರಾಗಿರುವುದನ್ನು ಖಚಿತಪಡಿಸಿಕೊಳ್ಳುವ ಜವಾಬ್ದಾರಿ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿಗಳದೇ ಆಗಿರುತ್ತದೆಂಬುದನ್ನು ಸ್ಪಷ್ಟಪಡಿಸಲಾಗಿದೆ.
ದಿನಾಂಕ 01-11-2011ರ ನಂತರ ಸಂಬಂಧಿಸಿದ ಶಿಕ್ಷಕರುಗಳಿಗೆ ನಿವೃತ್ತಿ ಹೊಂದುವವರೆಗೆ ಅಥವಾ ಈ ದಿನಾಂಕದವರೆಗೆ ಸಂದರ್ಭಾನುಸಾರ ಕಾಲಾನುಕಾಲಕ್ಕೆ ಸರ್ಕಾರದಿಂದ ಹೊರಡಿಸಲಾದ ಆದೇಶಗಳಿಗೆ ಅನುಗುಣವಾಗಿ ವಾರ್ಷಿಕ ವೇತನ ಬಡ್ತಿಗಳನ್ನು ಪುನರ್ ನಿಗದಿಪಡಿಸಿ ಶಿಕ್ಷಕರು ನಿವೃತ್ತಿ ಹೂಂದಿದ ನಂತರ ಪಿಂಚಣಿ ಪ್ರಸ್ತಾವನೆಯನ್ನು ಮಾನ್ಯ ಮಹಾಲೇಖಪಾಲರಿಗೆ ಸಲ್ಲಿಸಲು ತಿಳಿಸಿದೆ.
-
ಪೆಟ್ರೋಲ್ ಬದಲು ಎಥೆನಾಲ್ ಬ್ಲೆಂಡಿಂಗ್ ಮ್ಯಾಜಿಕ್; ಸಂಕಷ್ಟದಲ್ಲಿ ಭಾರತಕ್ಕೆ ನೆರವಾದ ಮೋದಿ ಮಾಸ್ಟರ್ ಪ್ಲ್ಯಾನ್: ಕೃಷ್ಣ ಭಟ್ ಬರಹ -
Jowar Price Today: ಕರ್ನಾಟಕದಲ್ಲಿ ಕ್ವಿಂಟಾಲ್ ಜೋಳದ ಬೆಲೆ ಎಷ್ಟಿದೆ, ಮಾರುಕಟ್ಟೆವಾರು ಪಟ್ಟಿ ಇಲ್ಲಿದೆ. -
SSLC ಗಣಿತ ಪರೀಕ್ಷೆ ವಿಶ್ಲೇಷಣೆ : ಬ್ಲೂಪ್ರಿಂಟ್ನಂತೆಯೇ ಬಂತು ಪ್ರಶ್ನೆಪತ್ರಿಕೆ, ಔಟ್ ಆಫ್ ಔಟ್ ನಿರೀಕ್ಷೆಯಲ್ಲಿ ವಿದ್ಯಾರ್ಥಿಗಳು -
ಬೆಂಗಳೂರು-ಅರಸೀಕೆರೆ ನಡುವೆ ನೂತನ ಮೆಮು ರೈಲು ಸೇವೆ: ಈಡೇರಿತು ಪ್ರಯಾಣಿಕರ ಬಹುದಿನದ ಬೇಡಿಕೆ -
Karnataka Weather: ರಾಜ್ಯದ 14 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ ಹವಾಮಾನ ಇಲಾಖೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
Gold Rate : ಆಭರಣ ಪ್ರಿಯರ ಗಮನಕ್ಕೆ: ಮಾರುಕಟ್ಟೆಯಲ್ಲಿ ಇಂದಿನ ಚಿನ್ನ-ಬೆಳ್ಳಿ ಬೆಲೆ ಇಷ್ಟಿದೆ? ಇಲ್ಲಿದೆ ಮಾಹಿತಿ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ -
ನಮ್ಮ ಮೆಟ್ರೋ-ಬಾಗ್ಮನೆ ಗ್ರೂಪ್ ಮಧ್ಯೆ ₹40 ಕೋಟಿ ಒಪ್ಪಂದ: ಮೆಟ್ರೋ ನಿಲ್ದಾಣಕ್ಕೆ 'ಬಾಗ್ಮನೆ' ಹೆಸರು -
IPL ಐಪಿಎಲ್ ಫ್ರೀ ಟಿಕೆಟ್ ವಿವಾದ: ವೆಂಕಟೇಶ್ ಪ್ರಸಾದ್ – ಸಿದ್ದರಾಮಯ್ಯ ಭೇಟಿ ಫೋಟೋಗೆ ತೇಜಸ್ವಿ ಸೂರ್ಯ ಕೆಂಡ -
Pratham: ನಟ ಪ್ರಥಮ್ ಬೆಂಗಳೂರು ತೊರೆಯಲು ದರ್ಶನ್ ಅಭಿಮಾನಿಗಳ ಗಲಾಟೆ ಕಾರಣವೇ? ಅಸಲಿ ಕಾರಣ ಬಿಚ್ಚಿಟ್ಟ ಒಳ್ಳೆ ಹುಡುಗ












Click it and Unblock the Notifications