Govt Job 2023: ISRO ದಿಂದ BPSCವರೆಗೆ ಭರ್ಜರಿ ಉದ್ಯೋಗವಕಾಶ, ವಿವಿಧ ಖಾಲಿ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ
ಬೆಂಗಳೂರು, ಜುಲೈ 17: ಸದ್ಯದ ಸ್ಪರ್ಧಾತ್ಮಕ ಯುಗದಲ್ಲಿ ಸರ್ಕಾರಿ ಉದ್ಯೋಗಾವಕಾಶಗಳು ತಮ್ಮ ಸ್ಥಿರತೆ, ಸವಲತ್ತುಗಳು ಮತ್ತು ಸಾರ್ವಜನಿಕ ಸೇವೆಯಿಂದ ಸಾಕಷ್ಟು ಆಕಾಂಕ್ಷಿಗಳನ್ನು ಆಕರ್ಷಿಸುತ್ತವೆ. ಸರ್ಕಾರಿ ಉದ್ಯೋಗ ಸೇರಬಯಸುವವರಿಗೆ ಈ ವಾರವು ವಿವಿಧ ಸರ್ಕಾರಿ ಸಂಸ್ಥೆಗಳು ಅನೇಕ ಉದ್ಯಾಗವಕಾಶ ಒದಗಿಸುತ್ತಿವೆ.
ಪ್ರತಿಷ್ಠಿತ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ನಿಂದ ಬಿಹಾರ ಸಾರ್ವಜನಿಕ ಸೇವಾ ಆಯೋಗದ (BPSC) ವರೆಗೆ ಲಭ್ಯವಿರುವ ಸರ್ಕಾರಿ ಉದ್ಯೋಗದ ಪಟ್ಟಿ ಇಲ್ಲಿದೆ. ನಿಮ್ಮ ಅರ್ಹತೆಗೆ ತಕ್ಕ ಖಾಲಿ ಹುದ್ದೆಗಳನ್ನು ಆಯ್ಕೆ ಮಾಡಿ ಅರ್ಜಿ ಸಲ್ಲಿಸಬಹುದು. ಯಾವ ಹುದ್ದೆಗಳು, ಖಾಲಿ ಇವೆ, ಅರ್ಜಿ ಸಲ್ಲಿಕೆ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

61 ವಿಜ್ಞಾನಿಗಳಿಗೆ ISRO VSSC ನೇಮಕಾತಿ 2023
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ISRO) ವಿಭಾಗವಾದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರ (VSSC), ವಿಜ್ಞಾನಿ/ಎಂಜಿನಿಯರ್-ಎಸ್‌ಡಿ ಹಾಗೂ ವಿಜ್ಞಾನಿ/ಎಂಜಿನಿಯರ್-ಎಸ್‌ಸಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗಿದೆ.
ಆಸಕ್ತ ಅರ್ಹರು ಇಸ್ರೋ ಅಧಿಕೃತ ವೆಬ್‌ಸೈಟ್ vssc.gov.in ಗೆ ಭೇಟಿ ನೀಡಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಬಹುದು. ISRO VSSC ನೇಮಕಾತಿಗೆ ಅರ್ಜಿ ಕೊನೆ ದಿನಾಂಕ ಜುಲೈ 21. ಒಟ್ಟು 61 ಹುದ್ದೆಗಳು ಖಾಲಿ ಇವೆ. ಅರ್ಜಿದಾರರು ತಮ್ಮ ಅರ್ಜಿಗಳನ್ನು ISRO ಲೈವ್ ರಿಜಿಸ್ಟರ್ ಪೋರ್ಟಲ್ ಮೂಲಕ ಪ್ರತ್ಯೇಕವಾಗಿ ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.
ರಾಜಸ್ತಾನ್ ಸಫಾಯಿ ಕರಮಚಾರಿ 13,184 ಹುದ್ದೆ ನೇಮಕಾತಿ
ರಾಜ್ಯಾದ್ಯಂತ 176 ನಗರ ಸಂಸ್ಥೆಗಳಲ್ಲಿ ರಾಜಸ್ಥಾನ ಸಫಾಯಿ ಕರ್ಮಚಾರಿಗಳ ಹುದ್ದೆ ಅರ್ಜಿ ಆಹ್ವಾನಿಸಲಾಗಿದೆ. ಒಟ್ಟು 13,184 ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭವಾಗಿದೆ. ಮೊದಲು ಜುಲೈ 19ಕ್ಕೆ ನಿಗದಿಪಡಿಸಲಾಗಿದ್ದ ಅರ್ಜಿ ಸಲ್ಲಿಕೆ ಕೊನೆ ದಿನಾಂಕವನ್ನು ಆಗಸ್ಟ್ 4ರವರೆಗೆ ವಿಸ್ತರಿಸಲಾಗಿದೆ. ಅಭ್ಯರ್ಥಿಗಳು recruitment.rajasthan.gov.in/ rajasthan.gov.in. ಎರಡು ವೆಬ್‌ಸೈಟ್‌ಗಳ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ ಅಭ್ಯರ್ಥಿಗಳು 18 ರಿಂದ 40 ವರ್ಷ ವಯಸ್ಸು ಆಗಿರಬೇಕು. ಅಭ್ಯರ್ಥಿಗಳಿಗೆ ವಯಸ್ಸಿನ ಸಡಿಲಿಕೆ ಇರಲಿದೆ. ಸಫಾಯಿ ಕರ್ಮಚಾರಿಗಳ ವೇತನ ಶ್ರೇಣಿಯನ್ನು 7ನೇ ವೇತನ ಆಯೋಗದ ಪ್ರಕಾರ ನಿರ್ಧರಿಸಲಾಗುವುದು ಎಂದು ತಿಳಿಸಿದೆ.
ಬ್ಯಾಂಕ್ ಆಫ್ ಮಹಾರಾಷ್ಟ್ರ (BOM) ನೇಮಕಾತಿ 2023: 400 ಹುದ್ದೆ
ಬ್ಯಾಂಕ್ ಆಫ್ ಮಹಾರಾಷ್ಟ್ರ ಪ್ರಸ್ತುತ ಆಫೀಸರ್ ಸ್ಕೇಲ್ II ಹಾಗೂ III ಹುದ್ದೆಗಳಿಗೆ ಆನ್‌ಲೈನ್ ಮೂಲಕ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು BOM ಅಧಿಕೃತ ವೆಬ್‌ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು. ಆಫೀಸರ್ ಸ್ಕೇಲ್ II ಗೆ 300 ಹುದ್ದೆ ಮತ್ತು ಆಫೀಸರ್ ಸ್ಕೇಲ್ III ಗೆ 100 ಹುದ್ದೆ ಸೇರಿ ಒಟ್ಟು 400 ಖಾಲಿ ಹುದ್ದೆಗಳು ಇವೆ.
ಅಭ್ಯರ್ಥಿಗಳು ಕನಿಷ್ಠ ಶೇಕಡಾ 60ರಷ್ಟು ಅಂಕ ಸಹಿತ ಸ್ನಾತಕೋತ್ತರ ಪದವಿಯನ್ನು ಪಡೆದಿರಬೇಕು. ಅಭ್ಯರ್ಥಿಗಳು JAIIB ಮತ್ತು CAIIB ಪರೀಕ್ಷೆಗಳನ್ನು ಪೂರ್ಣಗೊಳಿಸಿದ್ದರೆ ಇಲ್ಲವೇ CA, CMA ಮತ್ತು CFA ನಂತಹ ವೃತ್ತಿಪರ ಅರ್ಹತೆ ಪಡೆದವರಿಗೆ ಆದ್ಯತೆ ನೀಡಲಾಗುವುದು. ಅಭ್ಯರ್ಥಿಗಳಿಗೆ ಕನಿಷ್ಠ 25 ಮತ್ತು 38 ವರ್ಷ ವಯಸ್ಸಿನವರು ಅರ್ಜಿ ಸಲ್ಲಿಸಬಹುದು.
BPSC ಶಿಕ್ಷಕರ ನೇಮಕಾತಿ 2023: 17,0461 ಹುದ್ದೆಗೆ ಆಹ್ವಾನ
ಬಿಹಾರ ಪಬ್ಲಿಕ್ ಸರ್ವಿಸ್ ಕಮಿಷನ್ (BPSC) BPSC ಶಿಕ್ಷಕರ ನೇಮಕಾತಿ 2023ರ ನೋಂದಣಿ ಗಡುವನ್ನು ಜುಲೈ 12ರಿಂದ ಜುಲೈ 15 ಕ್ಕೆ ವಿಸ್ತರಿಸಲಾಗಿದೆ. ಅರ್ಹತಾ ಮಾನದಂಡಗಳನ್ನು ಪೂರೈಸುವ ಆಸಕ್ತ ವ್ಯಕ್ತಿಗಳು ತಮ್ಮ ಅರ್ಜಿಗಳನ್ನು BPSC ಯ ಅಧಿಕೃತ ವೆಬ್‌ಸೈಟ್ ಮೂಲಕ ಸಲ್ಲಿಸಬಹುದು.
ಪ್ರಾಥಮಿಕ, ಮಾಧ್ಯಮಿಕ ಮತ್ತು ಸ್ನಾತಕೋತ್ತರ ಶಿಕ್ಷಕರ ಹುದ್ದೆಗಳು ಸೇರಿದಂತೆ ಒಟ್ಟು 1,70,461 ಶಿಕ್ಷಕರ ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹತಾ ಮಾನದಂಡಗಳು ಮತ್ತು ಗರಿಷ್ಠ ವಯಸ್ಸಿನ ಮಿತಿಯು ಬೋಧನಾ ಪತ್ರವನ್ನು ಆಧರಿಸಿ ಬದಲಾಗುತ್ತದೆ ಎಂದು ಅಧಿಸೂಚನೆ ಹೊರಡಿಸಿದೆ.
RPSC ನೇಮಕಾತಿ 2023: 140 ಖಾಲಿ ಹುದ್ದೆಗಳು
ರಾಜಸ್ತಾನ್ ಪಬ್ಲಿಕ್ ಸರ್ವಿಸ್ ಕಮಿಷನ್ (RPSC) ಲಭ್ಯವಿರುವ 140 ಖಾಲಿ ಹುದ್ದೆಗಳಿಗೆ ಜೂನಿಯರ್ ಲೀಗಲ್ ಆಫೀಸರ್ಸ್ (JLO) ನೇಮಕಾತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತರು ವೆಬ್‌ಸೈಟ್ recruitment.rajasthan.gov.in ಗೆ ಮೂಲಕ ಆಗಸ್ಟ್ 9ರೊಳಗೆ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಅಭ್ಯರ್ಥಿಗಳು ಮಾನ್ಯತೆ ಪಡೆದ ಭಾರತೀಯ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಅಥವಾ ಅದಕ್ಕೆ ಸಮಾನವಾದ ಪದವಿಯನ್ನು ಹೊಂದಿರಬೇಕು. ಪ್ರಾವೀಣ್ಯತೆ ಪದವಿ. ಹುದ್ದೆಗಳಿಗೆ ವಯಸ್ಸಿನ ಅವಶ್ಯಕತೆಯು 21 ರಿಂದ 40 ವರ್ಷ ಇರುತ್ತದೆ. ವಯೋಮಿತಿಯಲ್ಲಿ ಕೆಲವು ಸಡಿಲಿಕೆ ಇರಲಿದೆ. ಕೂಡಲೇ ಅರ್ಜಿ ಸಲ್ಲಿಸಬಹುದು.
ಮಧ್ಯಪ್ರದೇಶ ಸರ್ಕಾರ ನೇಮಕಾತಿ 2023: 1200 ಹುದ್ದೆಗೆ ಆಹ್ವಾನ
ಮಧ್ಯಪ್ರದೇಶ ಸರ್ಕಾರವು ತನ್ನಲ್ಲಿ ಖಾಲಿ ಇರುವ 1,200 ಖಾಲಿ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಜುಲೈ 16ರ ಮೊದಲು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಗುತ್ತಿಗೆ ಆಧಾರದ ಮೇಲೆ ನೇಮಕಾತಿ ನಡೆಯಲಿದೆ. ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ನಡೆಯಲಿದೆ.
ಅರ್ಜಿದಾರರು ಜೀವಶಾಸ್ತ್ರ, ರಸಾಯನಶಾಸ್ತ್ರ ಮತ್ತು ಭೌತಶಾಸ್ತ್ರ ವಿಷಯದ ಮೇಲೆ ಪಿಯುಸಿ, ಡಿಪ್ಲೊಮಾ ಪದವಿ ಮುಗಿಸಿರಬೇಕು. ಆಯ್ಕೆಯಾಗುವವರಿಗೆ ಸಹಾಯಕ ನರ್ಸಿಂಗ್ ಮಿಡ್‌ವೈಫ್‌ನಲ್ಲಿ 2 ವರ್ಷಗಳ ತರಬೇತಿ ಕೋರ್ಸ್ ಕಡ್ಡಾಯಗೊಳಿಸಲಾಗಿದೆ. ಅಭ್ಯರ್ಥಿಗಳಿಗೆ ಮಾಸಿಕ 12,000 ರೂ. ವೇತನ ನಿಗದಿ ಮಾಡಲಾಗಿದೆ.












Click it and Unblock the Notifications