ಯಾದಗಿರಿ ಜಿಲ್ಲಾ ಕೋರ್ಟ್ ನಲ್ಲಿ ವಿವಿಧ ಹುದ್ದೆಗಳ ನೇಮಕಾತಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 07 : ಯಾದಗಿರಿ ಜಿಲ್ಲಾ ನ್ಯಾಯಾಲಯದಲ್ಲಿ ಖಾಲಿ ಇರುವ ಆದೇಶ- ಜಾರಿಕಾರರ ಹಾಗೂ ಸಿಪಾಯಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಉಡುಪಿ ಜಿಲ್ಲಾ ಕೋರ್ಟಿನಲ್ಲಿ ವಿವಿಧ ಹುದ್ದೆಗಳಿವೆ, ಅರ್ಜಿಹಾಕಿ

05 ಆದೇಶ ಜಾರಿಕಾರರು ಹಾಗೂ 26 ಸಿಪಾಯಿ ಹುದ್ದೆಗಳು ಖಾಲಿ ಇದ್ದು, ನಿಗದಿತ ದಿನಾಂಕ ಆಗಸ್ಟ್ 30, 2017ರೊಳಗೆ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಕೋರಲಾಗಿದೆ.

District Sessions Judge,Yadgir Recruitment 2017 Apply Online

ಹುದ್ದೆಗಳ ವಿವರ
1. ಆದೇಶ ಜಾರಿಕಾರರು-05 (Process Server)
* ವೇತನ ಶ್ರೇಣಿ: 11000 ರಿಂದ 19000 ರು. ತಿಂಗಳಿಗೆ.
* ವಿದ್ಯಾರ್ಹತೆ: ಎಸ್ ಎಸ್ ಎಲ್ ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಕನ್ನಡ ಭಾಷೆಯನ್ನು ಓದಲು ಮತ್ತು ಬರೆಯಲು ತಿಳಿದಿರುಬೇಕು ಭಾರಿ ವಾಹನ ಚಾಲನಾ ಪರವಾನಿಗೆ ಹೊಂದಿರುವ ಅಭ್ಯರ್ಥಿಗಳಿಗೆ ಆಧ್ಯತೆ ನೀಡಲಾಗುವುದು.
* ಆಯ್ಕೆಯ ವಿಧಾನ: ಎಸ್ ಎಸ್ ಎಲ್ ಸಿ ಪರೀಕ್ಷೆಯ ಗರಿಷ್ಠ ಅಂಕಗಳನ್ನು ಆಧಾರಿಸಿ 1 ಹುದ್ದೆಗೆ 25 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

2. ಸಿಪಾಯಿ (ಜವಾನರು)-26 (Peon)
*ವೇತನ ಶ್ರೇಣಿ: 9600 ರಿಂದ 14550 ರು. ತಿಂಗಳಿಗೆ.
* ವಿದ್ಯಾರ್ಹತೆ: ಏಳನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರಬೇಕು ಹಾಗೂ ಕನ್ನಡ ಓದಲು ಮತ್ತು ಬರೆಯಲು ಬರಬೇಕು ಎಲೆಕ್ಟ್ರಿಕಲ್ ಮತ್ತು ಕಾರ್ಪೆಂಟರ್ ಕೆಲಸಗಳಲ್ಲಿ ಅನುಭವ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ ನೀಡಲಾಗುವುದು.
* ಆಯ್ಕೆ ವಿಧಾನ: ಏಳನೇ ತರಗತಿಯಲ್ಲಿನ ಗರಿಷ್ಠ ಅಂಕಗಳನ್ನು ಆಧರಿಸಿ 1 ಹುದ್ದೆಗೆ 10 ಅಭ್ಯರ್ಥಿಗಳನ್ನು ಮಾತ್ರ ಸಂದರ್ಶನಕ್ಕೆ ಕರೆಯಲಾಗುವುದು.

* ವಯೋಮಿತಿ : ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 35 2A, 2B, 3A, 3B ಅಭ್ಯರ್ಥಿಗಳಿಗೆ 18 ರಿಂದ 38 ಎಸ್ಸಿ ಮತ್ತು ಎಸ್ಟಿ ವರ್ಗದ ಅಭ್ಯರ್ಥಿಗಳಿಗೆ 18 ರಿಂದ 40 ವರ್ಷ ಸರ್ಕಾರಿ ಸೇವೆಯಲ್ಲಿರುವವರಿಗೆ, ವಿಧವೆಯರಿಗೆ,ಮಾಜಿ ಸೈನಿಕರಿಗೆ ಹಾಗೂ ಅಂಗವಿಕಲರಿಗೆ ನಿಯಮಾನುಸಾರ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

* ಅರ್ಜಿ ಸಲ್ಲಿಸುವ ವಿಳಾಸ:
ಭರ್ತಿ ಮಾಡಿದ ಅರ್ಜಿಗಳನ್ನು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರವರ ನ್ಯಾಯಾಲಯ, ಯಾದಗಿರಿ ಜಿಲ್ಲೆ, ಯಾದಗಿರಿ ಈ ವಿಳಾಸಕ್ಕೆ ಕಳುಹಿಸತಕ್ಕದ್ದು.

ಅಭ್ಯರ್ಥಿಯು ಅರ್ಜಿಯ ಜೊತೆಯಲ್ಲಿ 5 ರು,ಗಳ ಅಂಚೆ ಚೀಟಿ ಲಗತ್ತಿಸಿರುವ ಸ್ವವಿಳಾಸವಿರುವ ಲಕೋಟೆಯನ್ನು ಲಗತ್ತಿಸತಕ್ಕದ್ದು. ಹಾಗೂ ಯಾವ ಹುದ್ದೆಗೆ ಅರ್ಜಿಯನ್ನು ಸಲ್ಲಿಸಲಾಗುತ್ತಿದೆ ಎನ್ನುವುದನ್ನು ದಪ್ಪ ಅಕ್ಷರದಲ್ಲಿ ಲಕೋಟೆ ಮೇಲೆ ನಮೂದಿಸತಕ್ಕದ್ದು.

Snake Hidden In The Bike | Oneindia Kannada

ಇನ್ನು ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಬೇಕಿದ್ದಲ್ಲಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
District Sessions Judge, Yadgir released new notification on their official website for the recruitment of total 31 (thirty one) jobs. Job seekers should apply on or before 30th August 2017.
Please Wait while comments are loading...