Government Recruitment: ಧಾರವಾಡ ಕೃಷಿ ವಿಶ್ವವಿದ್ಯಾಲಯ ನೇಮಕಾತಿ, ಅ.13ಕ್ಕೆ ಸಂದರ್ಶನ
ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇಲ್ಲೊಂದು ಉತ್ತಮ ಅವಕಾಶ ಇದೆ. ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯವು ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಬೆಳಗಾವಿ, ಹಾವೇರಿ, ವಿಜಯಪುರ, ಗದಗ ಜಿಲ್ಲೆಗಳಲ್ಲಿ ಸರ್ಕಾರಿ ಉದ್ಯೋಗ ಹುಡುಕುವವರಿಗೆ ಈ ಆಹ್ವಾನವನ್ನು ಸದುಪಯೋಗ ಮಾಡಿಕೊಳ್ಳಬಹುದು. ಆಸ್ಕತರು ಅಕ್ಟೋಬರ್ 13 ರಂದು ನಡೆಯುವ ಸಂದರ್ಶನಕ್ಕೆ ಹಾಜರಾಗಬೇಕು.
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅಧಿಸೂಚನೆ ಪ್ರಕಾರ, ಇಲ್ಲಿ ಯೋಜನಾ ಸಹಾಯಕ, ಸಹಾಯಕ ಹುದ್ದೆಗಳು ಖಾಲಿ ಇವೆ. ಒಟ್ಟು ಮೂರು ಹುದ್ದೆಗಳು ಖಾಲಿ ಇವೆ. ಆಯ್ಕೆ ಆಗುವವರಿಗೆ ಆಕರ್ಷಕ ವೇತನ ಸಿಗಲಿದೆ. ಆಸಕ್ತ ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಮೇತ ಇಂಟರ್‌ವ್ಯೂವ್ ಗೆ ಹಾಜರಾಗಬಹುದು. ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪೂರ್ಣ ವಿವರ
ನೇಮಕಾತಿ ಸಂಸ್ಥೆ: ಧಾರವಾಡ ವಿಜ್ಞಾನ ಕೃಷಿ ವಿವಿ
ಹುದ್ದೆಗಳು: ಯೋಜನಾ ಸಹಾಯಕ, ಸಹಾಯಕ
ಒಟ್ಟು ಹುದ್ದೆಗಳ ಸಂಖ್ಯೆ: 03
ಪೋಸ್ಟಿಂಗ್ ಸ್ಥಳ: ಬೆಳಗಾವಿ, ಹಾವೇರಿ, ವಿಜಯಪುರ, ಗದಗ
ಮಾಸಿಕ ವೇತನ: 15000-30000 ರೂಪಾಯಿ
ವಿದ್ಯಾರ್ಹತೆ ಏನಿರಬೇಕು
ಧಾರವಾಡ ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಅಧಿಸೂಚನೆ ಹೇಳುವಂತೆ ಈ ಹುದ್ದೆಗಳ ಪೈಕಿ ಯೋಜನಾ ಸಹಾಯಕ ಒಂದು ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎಸ್ಸಿ, ಬಿ.ಟೆಕ್ ಉತ್ತೀರ್ಣಗೊಂಡಿರಬೇಕು. ಇನ್ನೂ ಎರಡು ಖಾಲಿ ಹುದ್ದೆಗಳಾದ ಸಹಾಯಕ ಹುದ್ದೆಗೆ ಅರ್ಜಿ ಸಲ್ಲಿಸುವವರು 10 ನೇ ತರಗತಿ ಪಾಸಾಗಿರಬೇಕು.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ತಮ್ಮ ಅಗತ್ಯ ದಾಖಲೆಗಳ ಜೊತೆಗೆ ಅಕ್ಟೋಬರ್ 13ರಂದು 'ವಾಕ್-ಇನ್-ಇಂಟರ್ವ್ಯೂಗೆ ತೆರಳಬೇಕು. ಚೇಂಬರ್ ಆಫ್ ಅಸೋಸಿಯೇಟ್ ಡೈರೆಕ್ಟರ್ ಆಫ್ ರಿಸರ್ಚ್, ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ-580005 ಇಲ್ಲಿಗೆ ಬೆಳಗ್ಗೆ ತೆರಳಬೇಕು.












Click it and Unblock the Notifications