ಸರಕು ಸಾಗಣೆ ನಿಗಮದಲ್ಲಿ ನೇಮಕಾತಿ, 1072 ಹುದ್ದೆಗಳಿವೆ
ನವದೆಹಲಿ, ಏಪ್ರಿಲ್ 26: ಸರಕು ಸಾಗಣೆ ನಿಗಮದಲ್ಲಿ ನೇಮಕಾತಿ ಆರಂಭಿಸಲಾಗಿದ್ದು, ಈ ಕುರಿತಂತೆ ಅಧಿಕೃತ ಪ್ರಕಟಣೆ ಹೊರಡಿಸಲಾಗಿದೆ. ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಹ, ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ನಲ್ಲಿ ಮೇ 23ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: Dedicated Freight Corridor Corporation of India (DFCCIL).
ಹುದ್ದೆ ಹೆಸರು: ಎಕ್ಸಿಕ್ಯೂಟಿವ್, ಮ್ಯಾನೇಜರ್
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಹುದ್ದೆಗಳ ಸಂಖ್ಯೆ: 1072
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಮೇ 23, 2021
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ ಪಾಸಾಗಿರಬೇಕು. ಪದವಿ, ಎಂಬಿಎ, ಪಿಜಿಡಿಬಿಎ, ಪಿಜಿಡಿಎಂ.

ಅರ್ಜಿ ಶುಲ್ಕ:
ಜ್ಯೂನಿಯರ್ ಮ್ಯಾನೇಜರ್ (UR/OBC-NCL/EWS): 1000ರು
ಎಕ್ಸಿಕ್ಯೂಟಿವ್ (UR/OBC-NCL/EWS): 900ರು
ಎಸ್ ಸಿ/ ಎಸ್ಟಿ/ ಮಾಜಿ ಯೋಧ, ದಿವ್ಯಾಂಗ: ಯಾವುದೇ ಶುಲ್ಕವಿಲ್ಲ.
ವಯೋಮಿತಿ: 18 ರಿಂದ 30 ವರ್ಷ
ಒಬಿಸಿ ಅಭ್ಯರ್ಥಿ: 3 ವರ್ಷ
ಎಸ್ ಸಿ, ಎಸ್ಟಿ ಅಭ್ಯರ್ಥಿ: 5
ದಿವ್ಯಾಂಗ ಅಭ್ಯರ್ಥಿಗಳಿಗೆ 10 ವರ್ಷ ವಿನಾಯಿತಿ.
ನೇಮಕಾತಿ ಪ್ರಕ್ರಿಯೆ: ಕಂಪ್ಯೂಟರ್ ಆಧಾರಿತ ಪರೀಕ್ಷೆ, ದಾಖಲೆ ಪರಿಶೀಲನೆ, ಸಂದರ್ಶನ, ವೈದ್ಯಕೀಯ ಪರೀಕ್ಷೆ.
ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 24-04-2021
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 23-05-2021
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ.












Click it and Unblock the Notifications