2954 ಸಿಅರ್ ಪಿಎಫ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ

Written By: Ramesh
Subscribe to Oneindia Kannada

ಬೆಂಗಳೂರು, ಜನವರಿ. 25 : ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಅರ್ ಪಿಎಫ್) ಭಾರತದಾದ್ಯಂತ 2954 ಕಾನ್ಸ್ ಟೇಬಲ್ ಹುದ್ದೆಗಳಿಗೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ನಿಗದಿತ ಕೊನೆ ದಿನಾಂಕ ಮಾರ್ಚ್ 01ರೊಳಗೆ ಅರ್ಜಿ ಸಲ್ಲಿಸಬಹುದು. ಎಸ್ ಬಿಐ ಬ್ಯಾಂಕ್ ನಲ್ಲಿ ಚಲನ್ ತುಂಬಲು ಫೆಬ್ರವರಿ 20, 2017 ಕೊನೆ ದಿನವಾಗಿರುತ್ತದೆ.

ಇತರೆ ಹಲವು ಹುದ್ದೆಗಳಿಗೆ ಅರ್ಜಿಗಳನ್ನು ಸಲ್ಲಿಸದ ಬಳಿಕ ಚಲನ್ ತುಂಬಲಾಗುತ್ತದೆ. ಆದರೆ, ಈ ಹುದ್ದೆಗೆ ಅರ್ಜಿ ಸಲ್ಲಿಸುವ ಮುನ್ನ ಚಲನ್ ತುಂಬಬೇಕು.

CRPF recruitment 2017 Notification Constable 2945 vacancies

ಹುದ್ದೆ: ಕಾನ್ಸ್ ಟೇಬಲ್
ಒಟ್ಟು ಹುದ್ದೆಗಳು: 2954(ಭಾರತದಾದ್ಯಂತ)
ವೇತನ ಶ್ರೇಣಿ: 5200 ರಿಂದ 20200(ತಿಂಗಳಿಗೆ)

ವಿದ್ಯಾರ್ಹತೆ: ಕೇಂದ್ರ ಅಥವಾ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ 10 ತರಗತಿ(ಎಸ್ ಎಸ್ ಎಲ್ ಸಿ) ತೇರ್ಗಡೆಯಾಗಿರಬೇಕು.

ವಯೋಮಿತಿ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 21 ವರ್ಷಕ್ಕಿಂತ ಕೆಳಗೆ ಮತ್ತು 23ಕ್ಕಿಂತ ಮೇಲಿರಬಾರದು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನಗಳ ಮೂಲಕ ಅಭ್ಯರ್ಥಿಗಳನ್ನು ಈ ಹುದ್ದೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ.

ವಿಶೇಷ ಸೂಚನೆ : ಅರ್ಜಿ ಸಲ್ಲಿಸುವ ಕೊನೆ ದಿನಾಂಕ ಮಾರ್ಚ್ 1, 2017. ಎಸ್ ಬಿಐ ಬ್ಯಾಂಕ್ ನಲ್ಲಿ ಚಲನ್ ತುಂಬಲು ಫೆಬ್ರವರಿ 20, 2017 ಕೊನೆ ದಿನವಾಗಿರುತ್ತದೆ.

ಈ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸಲು ಮತ್ತು ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Central Reserve Police Force (CRPF) North Eastern Zone invites application for the position of 2945 Constables (Technical and tradesman) vacancies. Apply online before 1st March 2017.
Please Wait while comments are loading...