ಚಿಕ್ಕಮಗಳೂರಿನಲ್ಲಿ ಉದ್ಯೋಗ: ಜಿಲ್ಲಾ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅರ್ಜಿ ಸಲ್ಲಿಸಿ

ಚಿಕ್ಕಮಗಳೂರು, ಜುಲೈ 16: ಚಿಕ್ಕಗಳೂರಿನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದಲ್ಲಿ ಖಾಲಿಯಿರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಮಾನವ ಸಂಪನ್ಮೂಲ ಸಂಸ್ಥೆಯ ಮೂಲಕ ಹೊರಗುತ್ತಿಗೆ ಆಧಾರದಲ್ಲಿ ಉದ್ಯೋಗಕ್ಕೆ ನೇಮಕಾತಿ ಪ್ರಕ್ರಿಯೆ ಅನ್ನು ನಡೆಸಲಾಗುತ್ತಿದೆ. ಜುಲೈ 14 ರಿಂದಲೇ ಅರ್ಜಿ ಸ್ವೀಕರಿಸಲಾಗುತ್ತಿದ್ದು, ಜುಲೈ 21ರವರೆಗೂ ಅರ್ಜಿಗಳನ್ನು ಸ್ವೀಕರಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.

ಜಿಲ್ಲಾ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವುದು ಹೇಗೆ?, ಈ ಹುದ್ದೆಯ ನೇಮಕಾತಿ ಪ್ರಕ್ರಿಯೆ ಯಾವ ರೀತಿಯಾಗಿ ಇರುತ್ತದೆ?, ಆಯ್ಕೆ ಪ್ರಕ್ರಿಯೆ ಮತ್ತು ಕಾರ್ಯವಿಧಾನ ಸೇರಿದಂತೆ ಷರತ್ತುಗಳನ್ನು ಸರ್ಕಾರದ ಅಧಿಸೂಚನೆಯಲ್ಲಿ ಉಲ್ಲೇಖಿಸಲಾಗಿದೆ. ಅದರ ಕುರಿತು ಮುಂದಿನ ಪಟ್ಟಿಯಲ್ಲಿ ತಿಳಿದುಕೊಳ್ಳೋಣ.

Chikkamagaluru Rural Drinking Water & Sanitation Division recruitment for District Project Manager

ಅರ್ಜಿ ಸಲ್ಲಿಸುವುದು ಹೇಗೆ?:

* ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ: 14.7.2022

* ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: 21.07.2022

* ಬೆಳಿಗ್ಗೆ 10:00 ಗಂಟೆಯಿಂದ ಸಂಜೆ 05:30 ಗಂಟೆಯವರೆಗೆ ಸರ್ಕಾರಿ ಕೆಲಸದ ಅವಧಿಯಲ್ಲಿ ಮಾತ್ರ ಆನ್‌ಲೈನ್ ಅರ್ಜಿಗಳನ್ನು ಸಲ್ಲಿಸತಕ್ಕದ್ದು

* ಸರ್ಕಾರಿ ರಜೆಯ ದಿನ ಆನ್‌ಲೈನ್ ಅರ್ಜಿಗಳನ್ನು ಸ್ವೀಕರಿಸುವುದಿಲ್ಲ

* https://chikkamagaluru.nic.in ವೆಬ್ಸೈಟ್‌ನ ಮುಖಾಂತರ ಅರ್ಜಿ ಸಲ್ಲಿಸುವುದು

ಆಯ್ಕೆ ವಿಧಾನ ಹಾಗೂ ಷರತ್ತುಗಳು:

* ಆಯ್ಕೆಯಾದ ಅಭ್ಯರ್ಥಿಯನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲಾಗುವುದು.

* ನಿಗದಿಪಡಿಸಿದ ಹುದ್ದೆಗಳಿಗೆ ಅನುಗುಣವಾಗಿ ವಿದ್ಯಾರ್ಹತೆ ಹೊಂದಿರಬೇಕು.

* ನೇಮಕಾತಿ ಅವಧಿಯು 11 ತಿಂಗಳಾಗಿದ್ದು, ಇವರ ಕಾರ್ಯಕ್ಷಮತೆ ಪರಿಶೀಲಿಸಿ ಮುಂದುವರೆಸುವ ಬಗ್ಗೆ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾಪಂಚಾಯಿತಿ, ಚಿಕ್ಕಮಗಳೂರು ರವರು ತೀರ್ಮಾನ ಕೈಗೊಳ್ಳುವರು.

* ದಾಖಲಾತಿ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲು ನಿಗಧಿಪಡಿಸಿದ ವಿದ್ಯಾರ್ಹತೆ ಮತ್ತು ಅನುಭವವನ್ನು ಪರಿಗಣಿಸಿ ಈ ಕೆಳಕಂಡ ಮಾನದಂಡಗಳಲ್ಲಿ ಮೆರಿಟ್ಟಟ್ಟಿ ತಯಾರಿಸುವುದು.

* ಒಂದು ವೇಳೆಮೆರಿಟ್ ಆಧಾರದ ಮೇರೆಗೆ ಆಯ್ಕೆಯಾದ ಅಭ್ಯರ್ಥಿಗಳು ಕರ್ತವ್ಯಕ್ಕೆ ಹಾಜರಾಗದಿದ್ದಲ್ಲಿ, ಅಂತಹ ಅಭ್ಯರ್ಥಿಗಳ ಆಯ್ಕೆಯನ್ನು ರದ್ದುಗೊಳಿಸುವುದು ಮತ್ತುಮೆರಿಟ್ ಆಧಾರದಲ್ಲಿ ನಂತರದ ಜೇಷ್ಠತೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ಆಯ್ಕೆಗೆ ಪರಿಗಣಿಸುವುದು.

* ಜಲಜೀವನ್ ಮಿಷನ್ ಯೋಜನೆಯಡಿ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದರೆ ಆದ್ಯತೆ ನೀಡಲಾಗುವುದು. ಅರ್ಜಿ ಆಹ್ವಾನಿಸಿದ ಹುದ್ದೆಗಳಿಗೆ ಈ ಮೇಲಿನ ಕೋಷ್ಠಕದಲ್ಲಿ ವಿವರಿಸಿರುವ ಕನಿಷ್ಠ ವಿದ್ಯಾರ್ಹತೆ, ಅನುಭವ ಮತ್ತು ಅರ್ಹತೆಗಳನ್ನು ಕಡ್ಡಾಯವಾಗಿ ಹೊಂದಿರಬೇಕು.

* ಕರ್ನಾಟಕ ಸರ್ಕಾರದ ನಿಯಮಗಳನ್ವಯ, ಪಾರದರ್ಶಕ ಆಯ್ಕೆ ವಿಧಾನ ಅಳವಡಿಸಲಾಗಿದ್ದು, ಯಾವುದೇ ಅಭ್ಯರ್ಥಿಯು ಈ ಮೇಲೆ ವಿವರಿಸಿರುವ ಷರತ್ತುಗಳನ್ನು ಹಾಗೂ ನಿಬಂಧನೆಗಳನ್ನು ಪಾಲಿಸದಿದ್ದಲ್ಲಿ ಸದರಿ ಅಭ್ಯರ್ಥಿಯ ಅರ್ಜಿಯನ್ನು ತಿರಸ್ಕರಿಸಲಾಗುವುದು.

* ಗುತ್ತಿಗೆಯ ಅಥವಾ ಹೊರಗುತ್ತಿಗೆಯ ಅವಧಿ: ಮೇಲಿನ ಹುದ್ದೆ ಸಂಪೂರ್ಣವಾಗಿ ತಾತ್ಕಾಲಿಕ ಹುದ್ದೆಯಾಗಿದ್ದು, ಒಂದು ವರ್ಷದ ಅವಧಿಗೆ ಗುತ್ತಿಗೆ ಅಥವಾ ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಳ್ಳಲಾಗುವುದು. ನಂತರ ಕಾಲಕಾಲಕ್ಕೆ ಅವರ ಕಾರ್ಯಕ್ಷಮತೆಯನ್ನು ಪರಿಶೀಲಿಸಿ ಮತ್ತು ಅನುಗುಣವಾಗಿ ನವೀಕರಿಸಲಾಗುವುದು. ಒಂದೊಮ್ಮೆ ಅಭ್ಯರ್ಥಿಯ ಕಾರ್ಯಕ್ಷಮತೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರೆ ಅಂತಹ ಅಭ್ಯರ್ಥಿಗಳ ಕರಾರು ಒಪ್ಪಂದವನ್ನು ಒಂದು ತಿಂಗಳ ನೋಟಿಸ್ ನೀಡಿ ರದ್ದುಪಡಿಸಲಾಗುವುದು.

* ವಯೋಮಾನ: ಪ್ರಕಟಣೆ ಹೊರಡಿಸಿದ ದಿನಾಂಕಕ್ಕೆ 45 ವರ್ಷಗಳು ಮೀರಿರಬಾರದು

* ನಿಗದಿತ ಅರ್ಜಿ ನಮೂನೆಯಲ್ಲಿ ಆನ್‌ಲೈನ್ ಮೂಲಕ ಸಲ್ಲಿಸುವುದು.

* ಸ್ನಾತಕ / ಸ್ನಾತಕೋತ್ತರ ಪದವಿಯನ್ನು ದೂರ ಶಿಕ್ಷಣ ಮುಖಾಂತರ ಪಡೆದಿದ್ದರೆ ಅರ್ಜಿ ಸಲ್ಲಿಸಲು ಅವಕಾಶವಿರುವುದಿಲ್ಲ, ಹಾಗೂ ಅಂತಹ ಅರ್ಜಿಗಳನ್ನು ತಿರಸ್ಕರಿಸಲಾಗುವುದು.

* ಆಯ್ಕೆಯಾದ ಅಭ್ಯರ್ಥಿಯು ಇಲಾಖೆಯ ಅಥವಾ ಹೊರಗುತ್ತಿಗೆ ಸಂಸ್ಥೆಯೊಂದಿಗೆ ನಿಗದಿತ ನಮೂನೆಯಲ್ಲಿ ಕರಾರು ಒಪ್ಪಂದ ಮಾಡಿಕೊಳ್ಳಬೇಕು ಹಾಗೂ ಕಾರ್ಯಾನುಭವದ ಆಧಾರದ ಮೇಲೆ ಮಾಸಿಕ ಸಮಾಲೋಚನಾ ಶುಲ್ಕ ನಿಗದಿಪಡಿಸಲಾಗುವುದು.

* ಕರಾರು ಒಪ್ಪಂದ ಮಾಡಿಕೊಂಡ ಅಭ್ಯರ್ಥಿಗೆ ಇಲಾಖೆಯಲ್ಲಿನ ಯಾವುದೇ ಹುದ್ದೆಗಳಲ್ಲಿ ವಿಲೀನಗೊಳ್ಳಲು/ ಮುಂದುವರೆಯಲು ಯಾವುದೇ ಹಕ್ಕು ಇರುವುದಿಲ್ಲ.

* ಕಿರುಪಟ್ಟಿ ಮಾಡಿದ ಅಭ್ಯರ್ಥಿಗಳಿಗೆ (Shortlisted candidates) ಮಾತ್ರ ದೂರವಾಣಿ ಮುಖಾಂತರ ತಿಳಿಸಲಾಗುವುದು.

* ಅರ್ಹ ಅಭ್ಯರ್ಥಿಗಳಿಗೆ ಸಂದರ್ಶನವನ್ನು ಜಿಲ್ಲಾ ಪಂಚಾಯಿತಿ ಕಛೇರಿಯಲ್ಲಿ ನಡೆಸಲಿದ್ದು, ನಿಗದಿಪಡಿಸಿದ ದಿನಾಂಕ ಮತ್ತು ವೇಳೆ ಹಾಜರಾಗುವುದು ಹಾಗೂ ಸಂದರ್ಶನದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆಯನ್ನು ನಡೆಸಲಿದ್ದು, ನಿಗದಿಪಡಿಸಿದ ದಿನಾಂಕ ಮತ್ತು ವೇಳೆಯಲ್ಲಿ ಪರೀಕ್ಷೆಗೆ ಹಾಜರಾಗುವುದು.

* ನೇಮಕಾತಿಯನ್ನು ಪೂರ್ಣವಾಗಿ ಮತ್ತು ಭಾಗಶ: ರದ್ದು ಮಾಡುವ/ ಮುಂದೂಡುವ / ಬದಲಾವಣೆ ಮಾಡುವ ಹಕ್ಕನ್ನು ಇಲಾಖೆಯು ಹೊಂದಿರುತ್ತದೆ.

* ಜಿಲ್ಲಾ ಪಂಚಾಯಿತಿಯ ಹುದ್ದೆಗಳು ಜಿಲ್ಲಾಮಟ್ಟದ ಹುದ್ದೆಯಾಗಿರುವುದರಿಂದ ಆಯ್ಕೆಯಾದ ಅಭ್ಯರ್ಥಿಗಳು - ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸಬೇಕಾಗಿರುತ್ತದೆ. ಈ ಮೇಲ್ಕಂಡ ಎಲ್ಲಾ ದಾಖಲಾತಿ ಪರಿಶೀಲನೆ ಪ್ರಕ್ರಿಯೆಯನ್ನು ಹೊರಗುತ್ತಿಗೆ ಮಾನವ ಸಂಪನ್ಮೂಲ ಸಂಸ್ಥೆಯು ನಿರ್ವಹಿಸುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+