ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆನರಾ ಬ್ಯಾಂಕಿಂದ ನಿರುದ್ಯೋಗಿಗಳಿಗೆ ಉಚಿತ ತರಬೇತಿ

By Mahesh
|
Google Oneindia Kannada News

ಬೆಂಗಳೂರು, ಸೆ.10: ನಿರುದ್ಯೋಗಿಗಳಿಗೆ ಸರಳವಾಗಿ ಉಚಿತವಾಗಿ ಕಂಪ್ಯೂಟರ್ ಶಿಕ್ಷಣ ದೊರಕಿಸಿಕೊಡಲು ಕೆನರಾ ಬ್ಯಾಂಕಿನ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ವಿಭಾಗ ಮುಂದಾಗಿದೆ. ಕಾರ್ಪೊರೇಟ್ ಸಂಸ್ಥೆಯ ಸಾಮಾಜಿಕ ಹೊಣೆಗಾರಿಕೆಯ ಭಾಗವಾಗಿ ಈ ಯೋಜನೆ ಹಮ್ಮಿಕೊಂಡಿದೆ. ನಿರುದ್ಯೋಗಿ ಯುವಕ, ಯುವತಿಯರು ಈ ಪ್ರಯೋಜನ ಪಡೆದುಕೊಳ್ಳಬಹುದಾಗಿದೆ.

ಕಂಪ್ಯೂಟರ್ ಹಾರ್ಡ್ ವೇರ್ ಹಾಗೂ ಸಾಫ್ಟ್ ವೇರ್ ಎರಡು ವಿಷಯದ ಮೇಲೂ ತರಬೇತಿ ನೀಡಲಾಗುತ್ತದೆ. ನಿರುದ್ಯೋಗಿಗಳಿಗೆ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉದ್ಯೋಗಕ್ಕೆ ತಕ್ಕಂಥ ವಾತಾವಾರಣದ ಪರಿಚಯ ನೀಡುವುದು ಈ ತರಬೇತಿ ಮುಖ್ಯ ಉದ್ದೇಶವಾಗಿದೆ. ಇದಾದ ಬಳಿಕ ನೆಟ್ವರ್ಕ್ ಅಡ್ಮಿನಿಸ್ಟ್ರೇಷನ್ ವಿಷಯದ ಮೇಲೆ ತರಬೇತಿಯನ್ನು ಸೆಪ್ಟೆಂಬರ್ 26ರಿಂದ ಆರಂಭಿಸಲಾಗುತ್ತದೆ.

* ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 14, 2015ರಂದು ಅಪ್ಟಿಟ್ಯೂಟ್ ಪರೀಕ್ಷೆ ಬರೆಯಬೇಕಾಗುತ್ತದೆ.
* 90 ದಿನಗಳ ಕಾಲ ತರಬೇತಿ ನಡೆಯಲಿದೆ.
* ಅವಧಿ ಬೆಳಗ್ಗೆ 9.30 ರಿಂದ 5.30 (ಊಟ ನೀಡಲಾಗುತ್ತದೆ)

Canara bank to offer computer training to unemployed youth

ಸಂಪರ್ಕಿಸಿ
* 080 2344 0036 | 080 2346 3580
* ವಿಳಾಸ: ಕೆನರಾ ಬ್ಯಾಂಕ್ ಇನ್ಸ್ಟಿಟ್ಯೂಟ್ ಆಫ್ ಇನ್ಫಾರ್ಮೇಷನ್ ಟೆಕ್ನಾಲಜಿ, 3ನೇ ಮಹಡಿ, ಚಿತ್ರಾಪುರ್ ಭವನ
8ನೇ ಮುಖ್ಯರಸ್ತೆ, 15ನೇ ಅಡ್ಡರಸ್ತೆ, ಮಲ್ಲೇಶ್ವರ, ಬೆಂಗಳೂರು -55

ಕಂಪ್ಯೂಟರ್ ಬೇಸಿಕ್, ಎಂಎಸ್ ಡಾಸ್, ಅಸ್ಲೆಂಬಿಂಗ್, ಲ್ಯಾಪ್ ಟಾಪ್ ಹಾಗೂ ಪ್ರಿಂಟರ್ ಸರ್ವೀಸ್, ನೆಟ್ವರ್ಕ್ ಬೇಶಿಕ್, ವಿಂಡೋಸ್ 7, ವಿಂಡೋಸ್ ಸರ್ವರ್, ರೆಡ್ ಹ್ಯಾಟ್ ಲಿನಾಕ್ಸ್ ಬಗ್ಗೆ ತರಬೇತಿ ನೀಡಲಾಗುತ್ತದೆ. ಮುಂದಿನ ದಿನಗಳಲ್ಲಿ ಆಫೀಸ್ ಆಡ್ಮಿನಿಸ್ಟ್ರೇಷನ್ ಹಾಗೂ ಡೆಸ್ಕ್ ಟಾಪ್ ಪಬ್ಲಿಷಿಂಗ್ ವಿಷಯಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದು ಕೆನರಾ ಬ್ಯಾಂಕ್ ಪ್ರಕಟಿಸಿದೆ.

English summary
Canara Bank Institute of Information Technology, a corporate social responsibility initiative of Canara Bank has been providing computer education free of cost under both hardware and software streams.Candidates who are above 18 years of age can take the aptitude test which will be held on September 14th 2015 at the institute.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X