BWSSBಯಲ್ಲಿ ವಿವಿಧ ಹುದ್ದೆಗಳಿವೆ, ಕೂಡಲೇ ಅರ್ಜಿ ಹಾಕಿ
ಬೆಂಗಳೂರು, ಮಾರ್ಚ್ 05: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB)ಯಲ್ಲಿ ಖಾಲಿ ಇರುವ ಗ್ರೂಪ್ 'ಬಿ' ಮತ್ತು 'ಸಿ' (Non Hyderabad-Karnataka) ಬ್ಯಾಕ್‌ಲಾಗ್ (Backlog) ಹುದ್ದೆಗಳ ನೇರ ನೇಮಕಾತಿಗೆ ಪರಿಶಿಷ್ಟ ಜಾತಿ (Schedule Caste) ಮತ್ತು ಪರಿಶಿಷ್ಟ ಪಂಗಡದ (Schedule Tribe) ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಖಾಲಿ ಇರುವ 26 ಹುದ್ದೆಗಳಿಗೆ ಆಸಕ್ತರಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿಗಳನ್ನು ಸಲ್ಲಿಸಬೇಕಾಗುತ್ತದೆ. ಏಪ್ರಿಲ್ 5.2019 ರೊಳಗೆ ಅರ್ಜಿಯನ್ನು ಸಲ್ಲಿಸಬಹುದು.
ಸಂಸ್ಥೆ ಹೆಸರು : ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ(BWSSB)
ಹುದ್ದೆ ಹೆಸರು: ಸಹಾಯಕ ಅಭಿಯಂತರ ,ಕಿರಿಯ ಅಭಿಯಂತರ,ಸಹಾಯಕ ,ಕಿರಿಯ ಸಹಾಯಕ ,ಮಾಪನ ಓದುಗ ,ಎರಡನೇ ದರ್ಜೆ ಉಗ್ರಾಣ ಪಾಲಕ ,ಶೀಘ್ರಲಿಪಿಗಾರರು, ಇತ್ಯಾದಿ
ಉದ್ಯೋಗ ಸ್ಥಳ: ಕರ್ನಾಟಕದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಏಪ್ರಿಲ್ 05, 2019.

ಸಂಬಳ ನಿರೀಕ್ಷೆ :
* ಸಹಾಯಕ ಅಭಿಯಂತರ (ಸಿವಿಲ್),ಸಹಾಯಕ ಅಭಿಯಂತರ ( ಎಲೆಕ್ಟ್ರಿಕಲ್),ಸಹಾಯಕ ಅಭಿಯಂತರ (ಮೆಕ್ಯಾನಿಕಲ್)-29, 780/- ರಿಂದ 64,680/-ರೂ,
* ಕಿರಿಯ ಅಭಿಯಂತರ (ಸಿವಿಲ್),ಕಿರಿಯ ಅಭಿಯಂತರ (ಎಲೆಕ್ಟ್ರಿಕಲ್)- 21,880/- ರಿಂದ 55,680/- ರೂ,
* ಸಹಾಯಕ,ಶೀಘ್ರಲಿಪಿಗಾರರು- 19,260/-ರಿಂದ 52,880/- ರೂ,
* ಕಿರಿಯ ಸಹಾಯಕ, ಮಾಪನ ಓದುಗ ,ಎರಡನೇ ದರ್ಜೆ ಉಗ್ರಾಣ ಪಾಲಕ-15,460/- ರಿಂದ 48,680/- ರೂ
ವಿದ್ಯಾರ್ಹತೆ: ಸಹಾಯಕ ಅಭಿಯಂತರ ಹುದ್ದೆಗಳಿಗೆ ಇಂಜಿನಿಯರಿಂಗ್ ಪದವಿ(ಸಿವಿಎಲ್, ಮೆಕ್ಯಾನಿಕಲ್ ಎಲೆಕ್ಟ್ರಿಕಲ್)
ಕಿರಿಯ ಅಭಿಯಂತರ : ಡಿಪ್ಲೋಮಾ(ಸಿವಿಎಲ್, ಎಲೆಕ್ಟ್ರಿಕಲ್)
ಸಹಾಯಕ : ಯಾವುದೇ ಪದವಿ
ಕಿರಿಯ ಸಹಾಯಕ : ಪಿಯುಸಿ ಜತೆಗೆ ಒಂದು ವರ್ಷದ ಕಂಪ್ಯೂಟರ್ ಕೋರ್ಸ್
ಮಾಪನ ಓದುಗ: ಪಿಯುಸಿ ಜೊತೆಗೆ 6 ತಿಂಗಳ ಕಂಪ್ಯೂಟರ್ ಕೋರ್ಸ್
ಎರಡನೇ ಡಿವಿಷನ್ ಉಗ್ರಾಣ ಪಾಲಕ : ಪಿಯುಸಿ ಜೊತೆಗೆ ಹುದ್ದೆಗೆ ಸಂಬಂಧಿಸಿದ ಕೋರ್ಸ್
ಶೀಘ್ರಲಿಪಿಗಾರರು: ಪಿಯುಸಿ, ಶೀಘ್ರಲಿಪಿ ಹಾಗೂ ಬೆರಳಚ್ಚು ಪರೀಕ್ಷೆಯಲ್ಲಿ ಉತ್ತೀರ್ಣ, ಒಂದು ವರ್ಷದ ಕಂಪ್ಯೂಟರ್ ಕಲಿಕೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : ಏಪ್ರಿಲ್ 05, 2019
ಅರ್ಜಿಗಳನ್ನು bwssb.gov.in ವೆಬ್ ತಾಣದಲ್ಲಿ ನೀಡಿರುವ ಮಾರ್ಗದರ್ಶನದಂತೆ ಭರ್ತಿ ಮಾಡಿ ಆನ್ ಲೈನ್ ನಲ್ಲಿ ಸಲ್ಲಿಸಬಹುದು.












Click it and Unblock the Notifications