ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ನೇಮಕಾತಿ

Posted By:
Subscribe to Oneindia Kannada

ಬೆಂಗಳೂರು, ಜೂನ್ 08 : ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ ಲಿಮಿಟೆಡ್ (ಬಿಪಿಸಿಎಲ್) ನಲ್ಲಿ ಭಾರತದಾದ್ಯಂತ ಖಾಲಿ ಇರುವ ಒಟ್ಟು 32 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.

24 ಟೆಕ್ನಿಷಿಯನ್ ಮತ್ತು 08 ಯುಟಿಲಿಟಿ ಆಪರೇಟರ್‌ ಹುದ್ದೆಗೆ ಅರ್ಜಿ ಆಹ್ವಾನಸಿದ್ದು, ಆಸಕ್ತರು ದಿನಾಂಕ 26 ಜೂನ್ 2017ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.[ಕರ್ನಾಟಕ ಪೊಲೀಸ್ ಪೇದೆ ಹುದ್ದೆ : ಮಹಿಳೆಯರಿಗೂ ಅವಕಾಶ]

BPCL Recruitment 2017-18 Notification For 32 Vacancies

ಹುದ್ದೆ: ಟೆಕ್ನಿಷಿಯನ್ :24
* ವಿದ್ಯಾರ್ಹತೆ: ಟೆಕ್ನಿಷಿಯನ್ ಹುದ್ದೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಡಿಪ್ಲಮೋದಲ್ಲಿ ಕೆಮಿಕಲ್ ಅಥವಾ ಟೆಕ್ನಾಲಾಜಿಯಲ್ಲಿ ಪ್ರಥಮ ದರ್ಜೆಯಲ್ಲಿ ಇಂಜಿನಿಯರಿಂಗ್ ಪೂರ್ಣಗೊಳಿಸಿರಬೇಕು.
* ವೇತನ ಶ್ರೇಣಿ: 13800 ರಿಂದ 41000 ರು. ತಿಂಗಳಿಗೆ.
* ವಯೋಮಿತಿ: 01 ಜೂನ್ 25017ಕ್ಕೆ ಅನ್ವಯವಾಗುವಂತೆ 18ರಿಂದ 30 ವರ್ಷದೊಳಗಿರಬೇಕು.[2626 ಸಿವಿಲ್ ಪೊಲೀಸ್ ಕಾನ್ಸ್ ಟೇಬಲ್ ಹುದ್ದೆಗಳಿಗೆ ಅರ್ಜಿ ಆಹ್ವಾನ]

ಯುಟಿಲಿಟಿ ಆಪರೇಟರ್‌: 08
* ವಿದ್ಯಾರ್ಹತೆ: ಸರ್ಕಾರಿ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಲ್ಲಿ ಡಿಪ್ಲಮೋ ಪೂರ್ಣಗೊಳಿಸಿರಬೇಕು.
* ವೇತನ ಶ್ರೇಣಿ: 13800 ರಿಂದ 41000 ರು. ತಿಂಗಳಿಗೆ.
* ವಯೋಮಿತಿ: 01 ಜೂನ್ 25017ಕ್ಕೆ ಅನ್ವಯವಾಗುವಂತೆ 18ರಿಂದ 30 ವರ್ಷದೊಳಗಿರಬೇಕು.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ ಬಳಿಕ ವೈಯಕ್ತಿಕ ಸಂದರ್ಶನ ಹಾಗೂ ಮೂಲ ದಾಖಲಾತಿಗಳ ಪರಿಶೀಲನೆ ಮಾಡುವ ಮೂಲಕ ಅಭ್ಯರ್ಥಿಗಳನ್ನು ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.

ಇನ್ನು ಹೆಚ್ಚಿನ ವಿವರಣೆ ತಿಳಿಯಲು ಇಲ್ಲಿ ಕ್ಲಿಕ್ಕಿಸಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Baharat Petroleum Corporation Limited released new notification on their official website for the recruitment of total 32 Process Technician and utility operator in Mumbai Refinery. Job seekers should apply online before 26th June 2017.
Please Wait while comments are loading...