Bosch Layoffs: ಬಾಷ್‌ನಿಂದ ಬೃಹತ್ ಉದ್ಯೋಗ ವಜಾ: 10,000 ಉದ್ಯೋಗಿಗಳಿಗೆ ಶಾಕ್
Bosch Job Cut Updates: ಐಟಿ ಸೇರಿದಂತೆ ಇನ್ನಿತರ ಕಂಪನಿಗಳು ಉದ್ಯೋಗ ಕಡಿತ ಮುಂದುವರಿದಿದೆ. ಪ್ರತಿಷ್ಠಿತ ಅಂತಾರಾಷ್ಟ್ರೀಯ ಕಂಪನಿಯು ಆಗಿರುವ ಬಾಷ್ ಕಂಪನಿಯು ಹೊಸ ವರ್ಷಕ್ಕೆ ತನ್ನ ಸಾವಿರಾರು ಕಂಪನಿಗಳಿಗೆ ಶಾಕ್ ನೀಡಿದೆ. ಹೊಸ ವರ್ಷಕ್ಕೆ ಉದ್ಯೋಗ ವಜಾ ಪ್ರಕ್ರಿಯೆ ನಡೆಸಲಾಗುವುದು ಎಂದು ಬಾಷ್ ಹಿರಿಯ ಕಾರ್ಯ ನಿರ್ವಾಹಕ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದೇ ವರ್ಷ 2024ರಲ್ಲೂ ಕಂಪನಿ ಒಂದಷ್ಟು ನೌಕರರನ್ನು ವಜಾಗೊಳಿಸಿತ್ತು. ಹೀಗಿದ್ದರೂ ಇಷ್ಟು ದೊಡ್ಡ ಮಟ್ಟದಲ್ಲಿ ಮತ್ತೆ ವಜಾ ಮಾಡುತ್ತಿರುವುದೇಕೆ, ಕಾರಣ ತಿಳಿಯಿರಿ.
ಬಾಷ್ ಕಂಪನಿಯು 8,000 ರಿಂದ 10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ. ಈ ಪ್ರಕ್ರಿಯೆ ಹೊಸ ವರ್ಷಕ್ಕೆ ಆರಂಭವಾಗಲಿದೆ. ಈಗಾಗಲೇ ಉದ್ಯೋಗ ಕಡಿತ ಬಗ್ಗೆ ಕಂಪನಿ ಘೋಷಿಸಿದ್ದು, ನೌಕರರಿಗೆ ಸಂದೇಶ ರವಾನಿಸಿದ್ದಾರೆ. ಉದ್ಯೋಗಿಗಳು ಆತಂಕದಲ್ಲಿದ್ದಾರೆ ಎಂದು ಎಬಿಪಿ ಲೈವ್ ವರದಿ ಮಾಡಿದೆ.

ಜರ್ಮನಿಯ ಬಹುರಾಷ್ಟ್ರೀಯ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಕಂಪನಿ ಬಾಷ್ ಹೊಸ ವರ್ಷಕ್ಕೆ ಭಾರೀ ಪ್ರಮಾಣದಲ್ಲಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲು ಸಜ್ಜಾಗಿದೆ. ಗರಿಷ್ಠ 10,000 ಜನರು ಮನೆಗೆ ಹೋಗಲಿದ್ದಾರೆ. ಇದು ಕನಿಷ್ಠ 5,000 ಉದ್ಯೋಗಿಗಳ ಮೇಲೆ ಪರಿಣಾಮ ಬೀರಲಿದೆ. ಕಂಪನಿ ನಿರ್ಧಾರದಿಂದ ಇತರ ಉದ್ಯೋಗಿಗಳು ಫೈಯರ್ ಭೀತಿಯಲ್ಲಿದ್ದಾರೆ.
ಬಾಷ್ ಮೇಲ್ವಿಚಾರಣಾ ಮಂಡಳಿಯ ಸದಸ್ಯ ಮತ್ತು ವರ್ಕ್ಸ್ ಕೌನ್ಸಿಲ್‌ನ ಅಧ್ಯಕ್ಷ ಫ್ರಾಂಕ್ ಸೆಲ್ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಸದರಿ ವರ್ಷದದಲ್ಲಿ ಆರ್ಥಿಕತೆ ಸರಿದೂಗಿಸುವ ಉದ್ದೇಶದಿಂದ ಕಂಪನಿ ಈ ನಿರ್ಧಾರ ತೆಗೆದುಕೊಂಡಿದೆ. ಆದಷ್ಟು ವೆಚ್ಚ ಕಡಿಮೆ ಮಾಡಿ ಆರ್ಥಿಕ ಸ್ಥಿರತೆ ಸಾಧಿಸಲು, ಸದಾ ಸ್ಪರ್ಧಾತ್ಮಕವಾಗಿರಲು ಕಂಪನಿಯು ಉದ್ಯೋಗ ವಜಾ ಘೋಷಿಸಿದೆ ಎಂದು ಹೇಳಿದರು.
ಕಂಪನಿಯು ಸುಮಾರು 10,000 ನೌಕರರನ್ನು ಕೆಲಸದಿಂದ ತೆಗೆಯಲು ನಿರ್ಧರಿಸಿದೆ. ಇದು ಕಂಪನಿಯ ವ್ಯಾಪ್ತಿಯಲ್ಲಿ ಅಸಹನೀಯ ವಾತಾವರಣ ನಿರ್ಮಿಸಿದೆ ಎಂದು ಅವರು ಹೇಳಿದರು. ಇನ್ನೂ ಹೊಸ ವರ್ಷ 2025ರ ಮೊದಲ ತಿಂಗಳಲ್ಲಿಯೇ ಗೂಗಲ್ ಉದ್ಯೋಗ ವಜಾಗೊಳಿಸಬಹುದು. ಉದ್ಯೋಗದಲ್ಲಿ ಕಡಿಮೆ ಸಾಮರ್ಥ್ಯದ, ಟಾರ್ಗೆಟ್ ಕಡಿಮೆ ಸಾಧಿಸಿರುವ ನೌಕರರನ್ನು ವಜಾ ಘೋಷಿಸುವ ಸಾಧ್ಯತೆ ಇದೆ ಎಂದು ವರದಿ ಆಗಿದೆ.
ಸ್ಪರ್ಧಾತ್ಮಕ ಯುಗದಲ್ಲಿ ಮಾರುಕಟ್ಟೆಗೆ ತಕ್ಕಂತೆ ಕಂಪನಿಯು ರೂಪಾಂತರಗೊಳ್ಳುತ್ತಿದೆ. ಈ ಸಂಬಂಧ ಈಗಾಗಲೇ ಮಾಹಿತಿ ನೀಡಿದೆ. ಈ ಹಿಂದೆಯು ಸುಮಾರು ಏಳು ಸಾವಿರ ಕಂಪನಿಗಳನ್ನು ಬೇರೆ ಯುನಿಟ್‌ನಲ್ಲಿ ತೆಗೆದಿತ್ತು. ಮಾರುಕಟ್ಟೆಯ ವೆಚ್ಚ ಕಡಿಮೆ ಮಾಡಿ, ಅಧಿಕ ಆದಾಯ ಹಾದಿಯಲ್ಲಿ ಸಾಗಲು, ನೌಕರರ ಮರು ಸಂಘಟನೆಗಾಗಿ ಉದ್ಯೋಗ ಕಡಿತ ನಿರ್ಧಾರ ಕೈಗೊಳ್ಳಳಗಿದೆ.
ಜರ್ಮನ್ ಮೂಲದ ಕೈಗಾರಿಕಾ ದೈತ್ಯ ಕಾರು ಉದ್ಯಮವನ್ನು ಬಾಷ್ ಅವಲಂಬಿಸಿದೆ. ಜರ್ಮನಿಯ ಆಟೋ ಉದ್ಯಮವು ಅನೇಕ ವಾಹನ ತಯಾರಕರ ಮೇಲೆ ಪರಿಣಾಮ ಉಂಟು ಮಡಲಿದೆ.












Click it and Unblock the Notifications