ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ್ ಕೋ-ಆಪರೇಟಿವ್ ಬ್ಯಾಂಕ್ ನೇಮಕಾತಿ, ಬೆಂಗಳೂರಿನಲ್ಲಿ ಕೆಲಸ

|
Google Oneindia Kannada News

ಬೆಂಗಳೂರು, ಜನವರಿ 12; ದಿ. ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಜಯನಗರ ಬೆಂಗಳೂರು ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ವೆಬ್‌ಸೈಟ್‌ ಮೂಲಕ ಅರ್ಜಿ ಡೌನ್‌ಲೋಡ್ ಮಾಡಿಕೊಂಡು ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ 27/1/2023 ಕೊನೆಯ ದಿನವಾಗಿದೆ.

ಒಟ್ಟು 22 ಹುದ್ದೆಗಳನ್ನು ಲಿಖಿತ ಪರೀಕ್ಷೆ ಹಾಗೂ ಸಂದರ್ಶನದ ಮೂಲಕ ಭರ್ತಿ ಮಾಡಲಾಗುತ್ತಿದೆ. 25/5/2022ರ ನೇಮಕಾತಿ ಪ್ರಕಟಣೆಯ ಅನುಸಾರ ಈ ಹುದ್ದೆಗಳಿಗೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಮತ್ತೆ ಅರ್ಜಿ ಸಲ್ಲಿಸುವ ಅವಶ್ಯಕತೆ ಇಲ್ಲ.

ಮಕರ ಸಂಕ್ರಾಂತಿ ವಿಶೇಷ ಪುಟ

ಅಭ್ಯರ್ಥಿಗಳು ಬ್ಯಾಂಕ್ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿಗಳನ್ನು ಪಡೆಯಬೇಕು. ಖುದ್ದಾಗಿ/ ಅಂಚೆ/ ಕೊರಿಯರ್ ಮೂಲಕ ಅರ್ಜಿಗಳನ್ನು ಸಲ್ಲಿಕೆ ಮಾಡಬಹುದು. ಅರ್ಜಿಗಳನ್ನು 27/1/2023ರ ಸಂಜೆ 5 ಗಂಟೆಯೊಳಗೆ ಸಲ್ಲಿಸಬೇಕು.

Breaking; ನೇರ ನೇಮಕಾತಿ ಮತ್ತು ಮುಂಬಡ್ತಿ ಬಗ್ಗೆ ಹೊಸ ಸುತ್ತೋಲೆBreaking; ನೇರ ನೇಮಕಾತಿ ಮತ್ತು ಮುಂಬಡ್ತಿ ಬಗ್ಗೆ ಹೊಸ ಸುತ್ತೋಲೆ

ಲಿಖಿತ ಪರೀಕ್ಷೆಗೆ ಅರ್ಹರಿರುವ ಅಭ್ಯರ್ಥಿಗಳಿಗೆ ಪ್ರವೇಶ ಪತ್ರ ಹಾಗೂ ಲಿಖಿತ ಪರೀಕ್ಷೆಯ ದಿನಾಂಕ, ಸ್ಥಳ, ಸಮಯವನ್ನು ಅಧಿಕೃತ ವೆಬ್‌ಸೈಟ್‌ ಮೂಲಕ ತಿಳಿಸಲಾಗುತ್ತದೆ. ಅರ್ಹ ಅಭ್ಯರ್ಥಿಗಳಿಗೆ ಲಿಖಿತ ಪರೀಕ್ಷೆ ಪ್ರವೇಶ ಪತ್ರಗಳನ್ನು ಅಂಚೆ ಮೂಲಕ/ ಅಭ್ಯರ್ಥಿಗಳು ನೀಡಿದ ಇ-ಮೇಲ್ ವಿಳಾಸಕ್ಕೆ ಕಳಿಸಲಾಗುತ್ತದೆ ಎಂದು ತಿಳಿಸಲಾಗಿದೆ.

KPSC Recruitment; ಅಂಗವಿಕಲರ ವಿಶೇಷ ಗುರುತಿನ ಚೀಟಿ ಪರಿಗಣನೆ ಆದೇಶ KPSC Recruitment; ಅಂಗವಿಕಲರ ವಿಶೇಷ ಗುರುತಿನ ಚೀಟಿ ಪರಿಗಣನೆ ಆದೇಶ

ಯಾವ-ಯಾವ ಹುದ್ದೆಗಳು?

ಯಾವ-ಯಾವ ಹುದ್ದೆಗಳು?

ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (1), ಹಿರಿಯ ವ್ಯವಸ್ಥಾಪಕರು (1), ಕಂಪ್ಯೂಟರ್ ಮ್ಯಾನೇಜರ್‌ (ಸಿಸ್ಟಂ ಅಡ್ಮಿನಿಸ್ಟ್ರೇಟರ್ ಮುಖ್ಯಸ್ಥ) 1, ವ್ಯವಸ್ಥಾಪಕರು (3), ಅಕೌಟೆಂಟ್ (2), ಅಸಿಸ್ಟೆಂಟ್ ಅಕೌಟೆಂಟ್ (2), ದ್ವಿತೀಯ ದರ್ಜೆ ಸಹಾಯಕರು (2), ಅಟೆಂಡರ್ (10) ಸೇರಿದಂತೆ ಒಟ್ಟು 22 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಅರ್ಜಿಸಲ್ಲಿಸುವ ಅಭ್ಯರ್ಥಿಗಳಿಗೆ ಕನ್ನಡದಲ್ಲಿ ವ್ಯವಹಾರ ಜ್ಞಾನ, ಸ್ಪಷ್ಟವಾಗಿ ಓದಲು, ಬರೆಯಲು ಬರಬೇಕು. ಅಭ್ಯರ್ಥಿ ಭಾರತೀಯ ನಾಗರಿಕನಾಗಿದ್ದು, ಕನಿಷ್ಠ 10 ವರ್ಷ ಕರ್ನಾಟಕದಲ್ಲಿ ವಾಸವಾಗಿರಬೇಕು.

ವೇತನ ಶ್ರೇಣಿಗಳ ವಿವರ

ವೇತನ ಶ್ರೇಣಿಗಳ ವಿವರ

ವಿವಿಧ ಹುದ್ದೆಗಳ ವೇತನ ಶ್ರೇಣಿ ಹೀಗಿದೆ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ 40050-56550, ಹಿರಿಯ ವ್ಯವಸ್ಥಾಪಕರು 36300-53850, ಕಂಪ್ಯೂಟರ್ ಮ್ಯಾನೇಜರ್‌ 28100-50100, ವ್ಯವಸ್ಥಾಪಕರು 28100-50100, ಅಕೌಟೆಂಟ್ 24000-45300, ಅಸಿಸ್ಟೆಂಟ್ ಅಕೌಟೆಂಟ್ 21600-40050, ದ್ವಿತೀಯ ದರ್ಜೆ ಸಹಾಯಕರು 17650-32000, ಅಟೆಂಡರ್ 12500-24000 ರೂ.ಗಳು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳು, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಮೀಸಲಾತಿಗಾಗಿ ಜಾತಿ ಪ್ರಮಾಣ ಪತ್ರಗಳನ್ನು ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಸಂಬಂಧಿಸಿದ ಪ್ರಾಧಿಕಾರದಿಂದ ಪಡೆದು ಸಲ್ಲಿಸಬೇಕು.

ವಯೋಮಿತಿಯ ವಿವರಗಳು

ವಯೋಮಿತಿಯ ವಿವರಗಳು

ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕಕ್ಕೆ ಕನಿಷ್ಠ 18 ವರ್ಷಗಳಾಗಿರಬೇಕು ಹಾಗೂ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಮತ್ತು ನಿಯಮಗಳನ್ವಯ ಈ ಗರಿಷ್ಠ ವಯೋಮತಿ ಮೀರಿರಬಾರದು.

ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗ-1 ಅಭ್ಯರ್ಥಿಗಳಿಗೆ ಗರಿಷ್ಠ 40 ವರ್ಷಗಳು. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ (2ಎ, 2ಬಿ, 3ಎ, 3ಬಿ) ಗರಿಷ್ಠ 38 ವರ್ಷಗಳು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳು.

ಅರ್ಜಿ ಶುಲ್ಕ ಪಾವತಿ ಮಾಡದ, ಅಸ್ಪಷ್ಟ ಮಾಹಿತಿ ಇರುವ, ತಪ್ಪು ಮಾಹಿತಿ ನೀಡಿದ ಅರ್ಜಿಗಳನ್ನು ಯಾವುದೇ ನೋಟಿಸ್ ನೀಡದರೆ ತಿರಸ್ಕಾರ ಮಾಡಲಾಗುತ್ತದೆ ಎಂದು ಎಚ್ಚರಿಸಲಾಗಿದೆ.

ಅರ್ಜಿ ಶುಲ್ಕದ ವಿವರಗಳು

ಅರ್ಜಿ ಶುಲ್ಕದ ವಿವರಗಳು

ಅರ್ಜಿಗಳನ್ನು ಸಲ್ಲಿಕೆ ಮಾಡುವ ಸಾಮಾನ್ಯ ಹಾಗೂ ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ 1000 ರೂ. ಶುಲ್ಕ ನಿಗದಿ ಮಾಡಲಾಗಿದೆ. ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ/ ಹಿಂದುಳಿದ ವರ್ಗ-1ರ ಅಭ್ಯರ್ಥಿಗಳಿಗೆ ರೂ. 500. ಅರ್ಜಿ ಶುಲ್ಕವನ್ನು ದಿ ಭಾರತ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಇವರ ಹೆಸರಿಗೆ ಡಿಡಿ/ ಪೇ ಆರ್ಡರ್ಸ್‌/ ಪೋಸ್ಟಲ್ ಆರ್ಡರ್ಸ್ ಮೂಲಕ ಪಾವತಿ ಮಾಡಬೇಕು.

ಒಮ್ಮೆ ಸಲ್ಲಿಕೆ ಮಾಡಿದ ಅರ್ಜಿ ಶುಲ್ಕವನ್ನು ಯಾವುದೇ ಕಾರಣಕ್ಕೂ ವಾಪಸ್ ನೀಡುವುದಿಲ್ಲ. ಅಭ್ಯರ್ಥಿಗಳ ಆಯ್ಕೆಯಲ್ಲಿ ಬ್ಯಾಂಕಿನ ನೇಮಕಾತಿ ಪ್ರಾಧಿಕಾರದ ಶಿಫಾರಸಿನಂತೆ ಆಡಳಿತ ಮಂಡಳಿಯೇ ತೀರ್ಮಾನವೇ ಅಂತಿಮವಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ವಿಳಾಸ https://www.bcbbank.co/

English summary
The Bharat Cooperative Bank Jayanagar invited applications for the 22 post. Candidates can apply till 27/1/2023.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X