ಬಿಇಎಲ್‌ನಲ್ಲಿ ವಿವಿಧ ಹುದ್ದೆಗಳಿಗೆ ನ.24ರಂದು ನೇರ ಸಂದರ್ಶನ
ಬೆಂಗಳೂರು, ನವೆಂಬರ್ 16 : ಬಿಇಎಲ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ನೇರ ಸಂದರ್ಶನ ನಡೆಸಲಿದೆ. ನವೆಂಬರ್ 24, 2018ರಂದು ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) Electronics Mechanic Fitter ಹುದ್ದೆಗಳಿಗೆ ನೇರ ಸಂದರ್ಶನವನ್ನು ಆಯೋಜಿಸಿದೆ. ಆಯ್ಕೆಯಾದ ಅಭ್ಯರ್ಥಿಗಳು ಬೆಂಗಳೂರಿನಲ್ಲಿ ಕೆಲಸ ಮಾಡಬೇಕಿದೆ.
ಮಾನ್ಯತೆ ಪಡೆದ ಸಂಸ್ಥೆಯಿಂದ ಐಟಿಐ ಪೂರ್ಣಗೊಳಿಸಿರುವ ಅಭ್ಯರ್ಥಿಗಳು ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ. ಅಭ್ಯರ್ಥಿಗಳಿಗೆ 21 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ವೇತನ ಶ್ರೇಣಿ 10,333 ರೂ.ಗಳು.

ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ನೇರ ಸಂದರ್ಶನ ನಡೆಯುವ ವಿಳಾಸ : Center for Learning and Development Bharat Electronics Jalahalli Bangalore 13.
ಪ್ರಮುಖ ಮಾಹಿತಿ
* ಬಿಇಎಲ್‌ನಲ್ಲಿ ಕೆಲಸ
* ಹುದ್ದೆಗಳು : Apprentice - Electronics Mechanic Fitter and COPA Trades
* ಬೆಂಗಳೂರಿನಲ್ಲಿ ಕೆಲಸ
* 24/11/2018ರಂದು ನೇರ ಸಂದರ್ಶನ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ











Click it and Unblock the Notifications