Jobs: ಭಾರತೀಯ ಸೇನೆ ಸೇರಬೇಕಾದ್ರೆ 10ನೇ ತರಗತಿ ಪಾಸಾಗಿದ್ರೆ ಸಾಕು
ಅಲಹಾಬಾದ್, ಏಪ್ರಿಲ್ 19: ಭಾರತೀಯ ಸೇನೆ ದೇಶದ ವಿವಿಧೆಡೆ ಪ್ರಸಕ್ತ ಸಾಲಿನ ನೇಮಕಾತಿ ಮುಂದುವರೆಸಿದೆ. ಅಲಹಾಬಾದ್ ಆರ್ಮಿ ಸೆಲೆಕ್ಷನ್ ಸೆಂಟರ್ ಪೂರ್ವ ನೇಮಕಾತಿ 2022: 19 ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಅರ್ಜಿಯನ್ನು ಸಲ್ಲಿಸಲು ಆರ್ಹ, ಆಸಕ್ತ ಅಭ್ಯರ್ಥಿಗಳಿಗೆ ಈ ಜಾಹೀರಾತನ್ನು ಪ್ರಕಟಿಸಿದ ದಿನಾಂಕದಿಂದ 21 ದಿನಗಳ ತನಕ ಅವಕಾಶ ಸಿಗಲಿದೆ.
ಸಂಸ್ಥೆ ಹೆಸರು: ಭಾರತೀಯ ಸೇನೆ
ಹುದ್ದೆಗಳು: ಸ್ಟೆನೋಗ್ರಾಫರ್, ರೂಮ್ ಆರ್ಡಲಿ, ಮೆಸ್ ವೇಯ್ಟರ್, ಮೆಸೆಂಜರ್, ವಾಚ್ ಮನ್, ಗಾರ್ಡನರ್, ಹೌಸ್ ಕೀಪರ್
ಒಟ್ಟು ಹುದ್ದೆ: 19
ಉದ್ಯೋಗ ಸ್ಥಳ: ಅಲಹಾಬಾದ್, ಗುಜರಾತ್
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಮೇ 7, 2022
ವಿದ್ಯಾರ್ಹತೆ:
ಸ್ಟೆನೊಗ್ರಾಫರ್ ಗ್ರೇಡ್ II- 12ನೇ ತರಗತಿ ಪಾಸ್, ಕೌಶಲ್ಯ ಪರೀಕ್ಷೆ, ಉಕ್ತಲೇಖನ, 10 ನಿಮಿಷ @ 80 ಪದ ಪ್ರತಿ ನಿಮಿಷ, 50 ನಿಮಿಷ(ಇಂಗ್ಲೀಷ್), 65 ನಿಮಿಷ (ಹಿಂದಿ)
ರೂಮ್ ಆರ್ಡಲಿ, ಮೆಸ್ ವೇಯ್ಟರ್, ಮೆಸೆಂಜರ್, ವಾಚ್ ಮನ್, ಗಾರ್ಡನರ್, ಹೌಸ್ ಕೀಪರ್ ಹುದ್ದೆಗಳಿಗೆ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10ನೇ ತರಗತಿ ಪಾಸ್.

ವಯೋಮಿತಿ: ಅಭ್ಯರ್ಥಿಗಳಿಗೆ ಕನಿಷ್ಠ ವಯಸ್ಸು 18 ಹಾಗೂ ಗರಿಷ್ಠ 25 ವರ್ಷ ವಯಸ್ಸು ಎಂದು ನಿಗದಿಪಡಿಸಲಾಗಿದೆ.
ಆಯ್ಕೆ ವಿಧಾನ:
ಎಲ್ಲಾ ಅಭ್ಯರ್ಥಿಗಳಿಗೂ ಲಿಖಿತ ಪರೀಕ್ಷೆ ಇರಲಿದೆ.
ಸಂಬಳ ನಿರೀಕ್ಷೆ:
ಸ್ಟೆನೊಗ್ರಾಫರ್ ಗ್ರೇಡ್ II- ಲೆವೆಲ್ 4 Rs.25500/- to Rs.81100/
ರೂಮ್ ಆರ್ಡಲಿ, ಮೆಸ್ ವೇಯ್ಟರ್, ಮೆಸೆಂಜರ್, ವಾಚ್ ಮನ್, ಗಾರ್ಡನರ್, ಹೌಸ್ ಕೀಪರ್ ಹುದ್ದೆ Rs.18000/- to 56900/-
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಮೇ7, 2022.

ಅರ್ಜಿ ಸಲ್ಲಿಸಲು ವಿಳಾಸ:
ಆರ್ಮಿ ಸೆಲೆಕ್ಷನ್ ಸೆಂಟರ್, ಅಲಹಾಬಾದ್ ಪೂರ್ವ
ಕಾರಿಯಪ್ಪ ರಸ್ತೆ, ಕ್ಯಾಂಟನ್, ಸಿವಿಲ್ ಲೈನ್ಸ್
ಪ್ರಯಾಗ್ ರಾಜ್, ಉತ್ತರಪ್ರದೇಶ 211 001
ಆಯ್ಕೆ ಕೇಂದ್ರ ಪೂರ್ವ, ಅಲಹಾಬಾದ್ ಅನ್ನು 1957 ರಲ್ಲಿ ಪ್ರಿಸ್ಮ್ ಪರಿಕಲ್ಪನೆಯ ಆಧಾರದ ಮೇಲೆ ಸೂಕ್ತ ಅಭ್ಯರ್ಥಿಗಳನ್ನು ಶಿಫಾರಸು ಮಾಡಲು ಎದುರುನೋಡುವ ದೃಷ್ಟಿಯಿಂದ ಹುಟ್ಟುಹಾಕಲಾಯಿತು. ಅಂದರೆ ಮಾನಸಿಕ ಪರೀಕ್ಷೆಗಳು, ಗುಂಪು ಚರ್ಚೆಗಳು, ನೆಲದ ಕಾರ್ಯಗಳು ಮತ್ತು ವೈಯಕ್ತಿಕ ಸಂದರ್ಶನ.
11 SSB, 14 SSB, 18 SSB, 19 SSB ಮತ್ತು 34 SSB ಐದು ಸೇವಾ ಆಯ್ಕೆ ಮಂಡಳಿಗಳನ್ನು ಹೊಂದಿದೆ ಭಾರತೀಯ ಸೇನೆಯಲ್ಲಿ ಅಧಿಕಾರಿಯಾಗಲು ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡುವ ಮತ್ತು ಶಿಫಾರಸು ಮಾಡುವ ಗುರಿಯನ್ನು ಹೊಂದಿದೆ.












Click it and Unblock the Notifications