ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 21ರಂದು ವಿವಿಧ ಜಿಲ್ಲೆಗಳಲ್ಲಿ ಅಂಪ್ರೆಟಿಶಿಪ್‌ಗಳ ಆಯ್ಕೆಗೆ ಮೇಳ

|
Google Oneindia Kannada News

ಬೆಂಗಳೂರು, ಏಪ್ರಿಲ್ 17; ಧಾರವಾಡ, ಬಳ್ಳಾರಿ, ಕೊಪ್ಪಳದಲ್ಲಿ ಅಂಪ್ರೆಟಿಶಿಪ್‌ಗಳ ಆಯ್ಕೆಯಾಗಿ ಏಪ್ರಿಲ್ 21ರಂದು ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ. ಆಸಕ್ತ, ಅರ್ಹ ಅಭ್ಯರ್ಥಿಗಳು ಮೇಳದ ಸದುಪಯೋಗ ಪಡೆದುಕೊಳ್ಳಬಹುದು ಎಂದು ಕರೆ ನೀಡಲಾಗಿದೆ.

ಧಾರವಾಡ ಜಿಲ್ಲೆಯ ಸರ್ಕಾರಿ, ಅನುದಾನಿತ, ಖಾಸಗಿ ಸಂಸ್ಥೆಗಳನ್ನೊಳಗೊಂಡ ಧಾರವಾಡ ಜಿಲ್ಲಾ ಮಟ್ಟದ ಶಿಶಿಕ್ಷು ಮೇಳವನ್ನು ಎಲ್‍ಇಎ ಸಂಸ್ಥೆಯ ಅವ್ವಪ್ಪಣ್ಣ ಅತ್ತಿಗೇರಿ ಅನುದಾನಿತ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಆಯೋಜಿಸಲಾಗಿದೆ.

ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ; ನೇಮಕಾತಿ ವಿವರಗಳು ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ; ನೇಮಕಾತಿ ವಿವರಗಳು

ಪ್ರತಿಷ್ಠಿತ ಕಂಪನಿಗಳು ಭಾಗವಹಿಸುತ್ತಿದ್ದು, ಐಟಿಐ ಪಾಸಾದ ಆಸಕ್ತರು ತಮ್ಮ ಹೆಸರನ್ನು ಅಪ್ರೆಂಟಿಸ್ ಪೋರ್ಟಲ್‍ನಲ್ಲಿ ನೋಂದಾಯಿಸಿ ಪ್ರೊಫೈಲ್ ಅಪ್‍ಡೇಟ್ ಮಾಡಿಕೊಂಡು ಅಗತ್ಯ ದಾಖಲೆಗಳೊಂದಿಗೆ ಮೇಳದಲ್ಲಿ ಭಾಗವಹಿಸಬಹುದು.

NPCIL Recruitment 2022: ಎನ್‌ಸಿಪಿಎಲ್ ನೇಮಕಾತಿ; 200 ಹುದ್ದೆಗಳಿಗೆ ಅರ್ಜಿ ಹಾಕಿ NPCIL Recruitment 2022: ಎನ್‌ಸಿಪಿಎಲ್ ನೇಮಕಾತಿ; 200 ಹುದ್ದೆಗಳಿಗೆ ಅರ್ಜಿ ಹಾಕಿ

Apprenticeship Mela On April 21st At Koppal Ballari Dharwad

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಕಿರಿಯ ತರಬೇತಿ ಅಧಿಕಾರಿ ಆನಂದ ನಾಗೋಜಿ ಅವರನ್ನು 9886347285 ಮೊಬೈಲ್ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

ಬಳ್ಳಾರಿಯಲ್ಲಿಯೂ ಮೇಳ; ಬಳ್ಳಾರಿಯಲ್ಲಿ ವಿವಿಧ ವೃತ್ತಿಗಳಲ್ಲಿ ಪಾಸಾದ ಐಟಿಐ ಅಭ್ಯರ್ಥಿಗಳಿಗೆ ಶಿಶಿಕ್ಷು ಮೇಳ(ಅಂಪ್ರೆಟಿಶಿಪ್ ಮೇಳ)ವನ್ನು ರೇಡಿಯೋಪಾರ್ಕ್ ಹತ್ತಿರದ ಸರ್ಕಾರಿ ಕೈಗಾರಿಕಾ ತರಬೇತಿ (ಸರ್ಕಾರಿ ಐಟಿಐ) ಸಂಸ್ಥೆಯಲ್ಲಿ ಆಯೋಜನೆ ಮಾಡಲಾಗಿದೆ.

KSEEB Recruitment 2022: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನೇಮಕಾತಿ KSEEB Recruitment 2022: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನೇಮಕಾತಿ

ಬಳ್ಳಾರಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆ ಹೊರಡಿಸಿದ್ದು ಮೇಳದಲ್ಲಿ ಜಿಂದಾಲ್, ಹೊತೂರು ಸ್ಟೀಲ್ಸ್, ಎ. ಸಿ. ಸಿ ಸಿಮೆಂಟ್ಸ್, ಸ್ಪಾಂಜ್ ಐರನ್ ಕಾರ್ಖಾನೆ ಮುಂತಾದವರು ಪಾಳ್ಗೊಳ್ಳಲಿದ್ದಾರೆ.

ಕೊಪ್ಪಳದಲ್ಲಿಯೂ ಮೇಳ; ಕೊಪ್ಪಳ ಜಿಲ್ಲೆಯ ಕನಕಲ್‌ನ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ವತಿಯಿಂದ ಏಪ್ರಿಲ್‌ 21ರ ಬೆಳಗ್ಗೆ 9 ಗಂಟೆಗೆ ನಗರದ ಸಾಹಿತ್ಯ ಭವನದಲ್ಲಿ ರಾಷ್ಟ್ರೀಯ ಅಪ್ರೆಂಟಿಶಿಪ್ ಮೇಳ-2022 ಆಯೋಜಿಸಲಾಗಿದೆ.

ಮೇಳದಲ್ಲಿ ಜಿಲ್ಲೆಯ ವಿವಿಧ ಕೈಗಾರಿಕೆ, ಕಾರ್ಖಾನೆ, ಕಂಪನಿಗಳು ಭಾಗವಹಿಸಲಿವೆ. ಜಿಲ್ಲೆಯ ಐಟಿಐ ಉತ್ತೀರ್ಣರಾದ ಎಲ್ಲ ವೃತ್ತಿಗಳ ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಗೆ ಸಂಬಂಧಿಸಿದ ದಾಖಲಾತಿಗಳ 5 ಸೆಟ್ ಝರಾಕ್ಸ್ ಪ್ರತಿಗಳೊಂದಿಗೆ ಹಾಜರಾಗಬಹುದು.

ಅತಿಥಿ ಬೋಧಕರ ಹುದ್ದೆಗೆ ಅರ್ಜಿ ಹಾಕಿ; ವಿಜಯನಗರದ ಹೊಸಪೇಟೆ ಕೈಗಾರಿಕ ತರಬೇತಿ ಮತ್ತು ಉದ್ಯೋಗ ಇಲಾಖೆಯ ವತಿಯಿಂದ ಇಟ್ಟಿಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಖಾಲಿ ಇರುವ ಒಒಗಿ ಹಾಗೂ ಇ.ಒ ವೃತ್ತಿಗಳಿಗೆ ಅರ್ಹ ಅತಿಥಿ ಬೋಧಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಇ.ಒ ವೃತ್ತಿಗೆ ಡಿ. ಇ ಮತ್ತು ಸಿ ಅಥವಾ ಬಿ. ಇ (ಇ&ಸಿ) ಮತ್ತು ಒಒಗಿ ವೃತ್ತಿಗೆ ಡಿ. ಎಮ್. ಇ (ಆಟೋ ಮೊಬೈಲ್) ಅಥವಾ ಬಿ. ಇ (ಆಟೋ ಮೊಬೈಲ್) ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಅರ್ಜಿ ಹಾಕಬಹುದಾಗಿದೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಇಟ್ಟಿಗಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಪ್ರಾಚಾರ್ಯರನ್ನು ಸಂಪರ್ಕಿಸಬಹುದಾಗಿದೆ. ಮೊಬೈಲ್ ಸಂಖ್ಯೆಗಳು 9902413201, 9448939336.

ದಾವಣಗೆರೆಯಲ್ಲಿ ನೇರ ಸಂದರ್ಶನ; ದಾವಣಗೆರೆ ಜಿಲ್ಲಾ ಉದ್ಯೋಗ ವಿನಿಮಯ ಕೇಚೇರಿ ವತಿಯಿಂದ ಏಪ್ರಿಲ್ 18ರಂದು ಬೆಳಗ್ಗೆ 10 ಗಂಟೆಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51, ಜಿಲ್ಲಾಡಳಿತ ಭವನ, ದಾವಣಗೆರೆ ನೇರ ಸಂದರ್ಶನ ಆಯೋಜನೆ ಮಾಡಲಾಗಿದೆ.

ಈ ನೇರ ಸಂದರ್ಶನದಲ್ಲಿ ಲೈಟಿಂಗ್ ಟೆಕ್ನಲಾಜೀಸ್ ಇಂಡಿಯಾ ಪ್ರೈ. ಲಿ ಬೆಂಗಳೂರು ಈ ಖಾಸಗಿ ಕಂಪನಿಯು ಭಾಗವಹಿಸುತ್ತಿದೆ. ಪಿಯುಸಿ, ಐಟಿಐ, ಡಿಪ್ಲಮೋ (ಇ&ಇ ಮಾತ್ರ) ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುತ್ತಾರೆ.

ಆಸಕ್ತ ಅಭ್ಯರ್ಥಿಗಳು ಬೆಳಗ್ಗೆ 10 ಗಂಟೆಗೆ ಕನಿಷ್ಠ 2 ಬಯೋಡಾಟಾ, ಆಧಾರ್ ಕಾರ್ಡ್ನೊಂದಿಗೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕೊಠಡಿ ಸಂಖ್ಯೆ-51, ಜಿಲ್ಲಾಡಳಿತ ಭವನ, ದಾವಣಗೆರೆ ಇಲ್ಲಿಗೆ ಆಗಮಿಸಿ, ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ 08192-259446, 6361550016, 7406323294 ಸಂಪರ್ಕಿಸಬಹುದೆಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಪ್ರಕಟಣೆ ತಿಳಿಸಿದೆ.

English summary
Apprenticeship mela on April 21st at Koppal, Ballari and Darwad district. Candidates can make use of it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X