• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಸನದಲ್ಲಿ ಕೆಲಸ ಖಾಲಿ ಇದೆ; ನ. 10ರೊಳಗೆ ಅರ್ಜಿ ಹಾಕಿ

|

ಹಾಸನ, ಅಕ್ಟೋಬರ್ 28 : ಜಿಲ್ಲಾ ಪಂಚಾಯತ್ ಹಾಸನ, ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ ವಿವಿಧ ಹುದ್ದೆಗಳನ್ನು ನೇಮಕ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು 10/11/2020 ಕೊನೆಯ ದಿನವಾಗಿದೆ.

ಜಿಲ್ಲಾ ಆಯುಷ್ ಕಚೇರಿ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಣೆ ಮಾಡುವ ಸರ್ಕಾರಿ ಆಯುಷ್ ಆಸ್ಪತ್ರೆಗಳನ್ನು ಕೇಂದ್ರ ಪುರುಸ್ಕೃತ ಯೋಜನೆಯಡಿ ಮೇಲ್ದರ್ಜೇಗೇರಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ ಕಾರ್ಯ ನಿರ್ವಹಣೆ ಮಾಡಲು ತಜ್ಞ ವೈದ್ಯರು/ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ; ಪಿಯುಸಿ ಪಾಸಾದವರು ಅರ್ಜಿ ಹಾಕಿ

ಈ ಹುದ್ದೆಗಳನ್ನು 31/3/2021ರ ವರೆಗೆ ಅನ್ವಯವಾಗುವಂತೆ ಮಾತ್ರ ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತಿದೆ. ಅಭ್ಯರ್ಥಿಗಳು ವೆಬ್ ಸೈಟ್‌ನಲ್ಲಿ ಅರ್ಜಿಗಳನ್ನು ಪಡೆದುಕೊಂಡು, ಭರ್ತಿ ಮಾಡಿ ಖುದ್ದಾಗಿ, ಅಂಚೆ ಮೂಲಕ ಸಲ್ಲಿಸಬಹುದಾಗಿದೆ.

ಕೋಲಾರ; ಖಾಸಗಿ ಕಂಪನಿಗಳಲ್ಲಿ 5000 ನೇಮಕಾತಿ

ಹುದ್ದೆಗಳ ವಿವರ : ತಜ್ಞ ವೈದ್ಯರು ಆಯುರ್ವೇದ, ತಜ್ಞ ವೈದ್ಯರು ಯುನಾನಿ, ತಜ್ಞ ವೈದ್ಯರು ಹೋಮಿಯೋಪಥಿ, ಆಯುಷ್ ಔಷಧಿ ವಿತರಕರು, ಮಸಾಜಿಸ್ಟ್, ಕ್ಷಾರಸೂತ್ರ ಅಟೆಂಡೆಂಟ್, ಸ್ತ್ರೀ ರೋಗ ಅಟೆಂಡೆಂಟ್, ಮಲ್ಟಿ ಪರ್ಪಸ್ ವರ್ಕರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ.

ಕೆಪಿಎಸ್‌ಸಿ ಅಧಿಸೂಚನೆ; ಅರಣ್ಯ ಇಲಾಖೆ ನೇಮಕಾತಿಗೆ ಅರ್ಜಿ ಹಾಕಿ

ವಯೋಮಿತಿ : ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳಿಗೆ 10/11/2020ರಂದು ಎಲ್ಲಾ ವರ್ಗದವರಿಗೆ ಕನಿಷ್ಠ 18 ವರ್ಷ ಪೂರ್ಣಗೊಂಡಿರ ತಕ್ಕದ್ದು. ಗರಿಷ್ಠ ವಯೋಮಿತಿ ಪ. ಜಾ/ಪ. ಪಂ 40, ಪ್ರವರ್ಗ-1/2ಎ/2ಬಿ/3ಎ/3ಬಿ ಅಭ್ಯರ್ಥಿಗಳಿಗೆ 38 ವರ್ಷ. ಸಾಮಾನ್ಯ ಅಭ್ಯರ್ಥಿಗಳಿಗೆ 35 ವರ್ಷ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ. ವೆಬ್ ಸೈಟ್ ವಿಳಾಸ www.hassan.nic.in

English summary
Hassan district Ayush department invited applications from eligible candidates to fill various post. Candidates can apply till November 10, 2020.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X