ಧಾರವಾಡದಲ್ಲಿ ಕೆಲಸ ಖಾಲಿ ಇದೆ, ಜನವರಿ 20ರೊಳಗೆ ಅರ್ಜಿ ಹಾಕಿ
ಧಾರವಾಡ, ಜನವರಿ 14: 'ಯುವ ಸ್ಪಂದನ' ಕಾರ್ಯಕ್ರಮದಡಿ ಧಾರವಾಡದಲ್ಲಿ ಯುವ ಸಮಾಲೋಚಕ, ಯುವ ಪರಿವರ್ತಕರ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ, ಅರ್ಹರು ಜನವರಿ 20ರೊಳಗೆ ಖುದ್ದಾಗಿ ಅರ್ಜಿಗಳನ್ನು ಸಲ್ಲಿಸಬೇಕು.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜನ ಆರೋಗ್ಯ ಸಂಸ್ಥೆ, ನಿಮಾನ್ಸ್ ಎಪಿಡಿಮಿಯಾಲಾಜಿ ವಿಭಾಗದಿಂದ ಅನುಷ್ಠಾನಗೊಂಡಿರುವ ಯುವ ಸ್ಫಂದನ ಕಾರ್ಯಕ್ರಮದಡಿಯಲ್ಲಿ ಹೊಸದಾಗಿ ಕಾರ್ಯನಿರ್ವಹಿಸುವ ಯುವ ಸಮಾಲೋಚಕರು ಹಾಗೂ ಯುವ ಪರಿವರ್ತಕರನ್ನು ಆಯ್ಕೆ ಮಾಡಿ, ತರಬೇತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿದಾರರು ಯಾವುದೇ ಪದವಿ ಅಥವಾ ಮೇಲ್ಪಟ್ಟ ವಿದ್ಯಾರ್ಹತೆಯನ್ನು ಹೊಂದಿರಬೇಕು ಹಾಗೂ 21 ರಿಂದ 35 ವರ್ಷದೊಳಗಿರಬೇಕು. ಸಮುದಾಯದಲ್ಲಿ ಯುವ ಜನರಿಗೆ ತರಬೇತಿಯಂತಹ ಕಾರ್ಯಕ್ರಗಳನ್ನು ಧಾರವಾಡ ಜಿಲ್ಲೆಯಲ್ಲಿ ಆಯೋಜಿಸುವುದು ಅವಶ್ಯ ಇರುವುದರಿಂದ ಜಿಲ್ಲೆಯ ತಾಲೂಕಿನ ನಿವಾಸಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಯೊಂದಿಗೆ ವಿಳಾಸ, ವಯಸ್ಸು, ಜಿಲ್ಲೆ, ವೈಯಕ್ತಿಕ ಮಾಹಿತಿಯೊಂದಿಗೆ ಅಂಚೆಯ ಮೂಲಕ ಅಥವಾ ಖುದ್ದಾಗಿ ಜನವರಿ 20ರ ಒಳಗಾಗಿ ತಮ್ಮ ಅರ್ಜಿಯನ್ನು ಸಲ್ಲಿಸಬೇಕು. ಕೊನೆಯ ದಿನಾಂಕದೊಳಗಾಗಿ ಸಲ್ಲಿಸಿದ ಅರ್ಜಿಗಳನ್ನು ಮಾತ್ರ ಸ್ವೀಕರಿಸಲಾಗುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ 0836-2447424 ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ; ಕೊಪ್ಪಳ ತಾಲೂಕಿನ ದದೇಗಲ್‌ನಲ್ಲಿರುವ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದಲ್ಲಿ ಡಿಪ್ಲೊಮಾ ಮೆಕಟ್ರಾನಿಕ್ಸ್ ವಿಭಾಗದಲ್ಲಿ ಖಾಲಿ ಇರುವ ಅತಿಥಿ ಉಪನ್ಯಾಸಕರ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ.
ಭೋದನೆಯಲ್ಲಿ ಕನಿಷ್ಠ ಒಂದು ವರ್ಷ ಅನುಭವುಳ್ಳ, ಪ್ರಥಮ ದರ್ಜೆಯಲ್ಲಿ ಬಿ.ಇ ಅಥವಾ ಎಂ.ಟೆಕ್ ಇನ್ ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಇಂಜಿನಿಯರ್ ಮತ್ತು ಬಿ.ಇ. ಅಥವಾ ಎಂ.ಟೆಕ್ ಇನ್ ಎಲೆಕ್ಟ್ರಾನಿಕ್ಸ್ ಕಮ್ಯುನಿಕೇಶನ್ ಇಂಜಿನಿಯರ್ ಪದವಿ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಜನವರಿ 25ರೊಳಗೆ ಕಚೇರಿಗೆ ಅರ್ಜಿ ಸಲ್ಲಿಸಬಹುದು.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿ.ಟಿ.ಟಿ.ಸಿ ಕಾರ್ಯಾಲಯಕ್ಕೆ ಅಥವಾ ವಿಭಾಗದ ಮುಖ್ಯಸ್ಥರಾದ ಮೌನೇಶ ಅವರನ್ನು ದೂರವಾಣಿ ಸಂಖ್ಯೆ 7507094445 ಮೂಲಕ ಸಂಪರ್ಕಿಸಬಹುದು.












Click it and Unblock the Notifications