2 ವರ್ಷದ ಪಶುಸಂಗೋನಾ ಡಿಪ್ಲೋಮಾ ಕೋರ್ಸ್‌, ಅರ್ಹತೆಗಳು

ಬೆಂಗಳೂರು, ಜುಲೈ 24: ಸ್ವಯಂ ಉದ್ಯೋಗ ಕೈಗೊಳ್ಳಲು ಆಸಕ್ತಿ ಹೊಂದಿರುವವರಿಗಾಗಿ ಎರಡು ವರ್ಷದ ಪಶುಸಂಗೋನಾ ಡಿಪ್ಲೋಮಾ ಕೋರ್ಸ್‌ಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಕೆ ಮಾಡಲು 31/7/2024 ಕೊನೆಯ ದಿನವಾಗಿದೆ.

ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್ ಈ ಕುರಿತು ಅಧಿಸೂಚನೆ ಹೊರಡಿಸಿದೆ. 2024-2025ನೇ ಶೈಕ್ಷಣಿಕ ಸಾಲಿನ ಪಶುಸಂಗೋಪನಾ ಡಿಪ್ಲೋಮಾ ಪ್ರವೇಶದ ವಿವರಗಳನ್ನು ನೀಡಲಾಗಿದ್ದು, ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕಿದೆ.

Apply For Two Year Diploma Course In Animal Husbandry

ಅರ್ಜಿ ಸಲ್ಲಿಕೆಗೆ ಅರ್ಹತೆಗಳು: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಎಸ್‌ಎಸ್‌ಎಲ್‌ಸಿ/ ತತ್ಸಮಾನ ಪರೀಕ್ಷೆಯೊಂದಿಗೆ ಕನ್ನಡ ಒಂದು ವಿಷಯವನ್ನು ಕಡ್ಡಾಯವಾಗಿ ಓದಿ ಕನಿಷ್ಠ 45ರಷ್ಟು ಅಂಕಗಳನ್ನು ಪಡೆದು, ತೇರ್ಗಡೆಯಾಗಿರಬೇಕು. (ಪ.ಜಾ/ ಪ.ಪಂ/ ಪ್ರವರ್ಗ-1ರ ಅಭ್ಯರ್ಥಿಗಳು ಶೇ 40ರಷ್ಟು ಅಂಕಗಳನ್ನು ಪಡೆದು ತೇರ್ಗಡೆಯಾಗಿರಬೇಕು) ಮತ್ತು ಕಡ್ಡಾಯವಾಗಿ 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವಿದ್ಯಾಭ್ಯಾಸ ಮಾಡಿರಬೇಕು.

ಪಶುಸಂಗೋನಾ ಡಿಪ್ಲೋಮಾ ಕೋರ್ಸ್‌ಗೆ ತುಮಕೂರು 50, ಹಾವೇರಿ 50, ಹಾಸನ 50, ಚಾಮರಾಜನಗರ 50 ಮತ್ತು ಯಾದಗಿರಿಯಲ್ಲಿ 50 ಸೀಟುಗಳು ಲಭ್ಯವಿದೆ. ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ 31/07/2024ರಂದು ಅಭ್ಯರ್ಥಿಯ ವಯಸ್ಸು 20 ವರ್ಷ ಮೀರಿರಬಾರದು. ಮೇಲಿರಬಾರದು. ಪಶುಸಂಗೋಪನಾ ಡಿಪ್ಲೋಮಾದ ತರಗತಿಗಳನ್ನು ಕನ್ನಡ ಮಾಧ್ಯಮದಲ್ಲಿ ನಡೆಸಲಾಗುವುದು. ಪ್ರವೇಶ ಪಡೆದ ಎಲ್ಲಾ ಅಭ್ಯರ್ಥಿಗಳಿಗೆ ರೂ.1000ಗಳ ಮಾಸಿಕ ಶಿಷ್ಯ ವೇತನವನ್ನು ವ್ಯಾಸಂಗದ ಅವಧಿಯಲ್ಲಿ ನಿಯಮಾನುಸಾರ ನೀಡಲಾಗುವುದು.

ಅರ್ಜಿ ಸಲ್ಲಿಕೆ ಮಾಡುವ ಪ.ಜಾ/ ಪ.ಪ./ ಪ್ರವರ್ಗ-1 ಅಭ್ಯರ್ಥಿಗಳಿಗೆ 350 ರೂ. ಮತ್ತು ಸಾಮಾನ್ಯ/ 2ಎ/2ಬಿ/ 3ಎ/ 3ಬಿ ಅಭ್ಯರ್ಥಿಗಳಿಗ 700 ರೂ. ಶುಲ್ಕವನ್ನು ನಿಗದಿ ಮಾಡಲಾಗಿದೆ. ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಎಸ್.ಎಸ್.ಎಲ್.ಸಿ, ಅಂಕ ಪಟ್ಟಿ (ಕಂಪ್ಯೂಟರ್ ಪ್ರಿಂಟ್ ಇದ್ದಲ್ಲಿ ಮುಖ್ಯ ಗುರುಗಳ ಸಹಿ ಹಾಗೂ ಮೊಹರು ಹೊಂದಿರಬೇಕು). 1 ರಿಂದ 10ನೇ ತರಗತಿಯವರೆಗೆ ಗ್ರಾಮೀಣ ಪ್ರದೇಶದಲ್ಲಿ ವ್ಯಾಸಂಗ ಮಾಡಿದ ಗ್ರಾಮೀಣ ಅಭ್ಯರ್ಥಿ ಪ್ರಮಾಣ ಪತ್ರ (ನಿಗದಿತ ದಿನಾಂಕದ ಒಳಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಸಹಿ ಹಾಗೂ ಮೊಹರ ಹೊಂದಿರಬೇಕು). ಮೀಸಲಾತಿ ಬಯಸುವ ಅಭ್ಯರ್ಥಿಯು ಸಂಬಂಧಪಟ್ಟ ಪ್ರಾಧಿಕಾರದಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರವನ್ನು ಲಗತ್ತಿಸಬೇಕು.

ರೈತರ ಹಾಗೂ ಕೃಷಿ ಕಾರ್ಮಿಕರ ಮಕ್ಕಳಗೆ ಶೇ.50ರಷ್ಟು ಸೀಟುಗಳನ್ನು ಡಿಪ್ಲೋಮಾ (ಪಶುಸಂಗೋಪನೆ) ಕೋರ್ಸ್‌ನ ಪ್ರವೇಶಾತಿಗೆ ಮೀಸಲಿಡಲಾಗಿದೆ. ಅಭ್ಯರ್ಥಿಗಳು ಈ ಕೋಟಾದಡಿ ಪ್ರವೇಶ ಬಯಸಿದ್ದಲ್ಲಿ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಪಡೆದು ಲಗತ್ತಿಸಬೇಕು.

ಅಭ್ಯರ್ಥಿಗಳು ಮೊಬೈಲ್ ನಂಬರ್/ ದೂರವಾಣಿ/ ಇ-ಮೇಲ್ ಐಡಿಯನ್ನು ಅರ್ಜಿಯಲ್ಲಿ ಕಡ್ಡಾಯವಾಗಿ ನಮೂದಿಸುವುದು. ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸುವಾಗ ಕಡ್ಡಾಯವಾಗಿ ತಾವು ಪ್ರವೇಶ ಪಡೆಯಲು ಬಯಸುವ 5 ಪಶುಸಂಗೋಪನಾ ಪಾಂಟೆಕ್ನಿಕ್‌ನ ಆಯ್ಕೆಯನ್ನು ತಮ್ಮ ಆದ್ಯತೆಯಂತೆ ಕಡ್ಡಾಯವಾಗಿ ನಮೂದಿಸುವುದು.

ಅರ್ಜಿಯನ್ನು https://kvafsu.edu.in/admission.html ಮೂಲಕ ಸಲ್ಲಿಸುವುದು. ಕೊನೆಯ ದಿನಾಂಕ 31/07/2024. ಇತರೇ ಮೂಲಗಳಿಂದ ಅರ್ಜಿಗಳನ್ನು ಯಾವುದೇ ಕಾರಣಕ್ಕೆ ಸ್ವೀಕರಿಸಲಾಗುವುದಿಲ್ಲ. ಅರ್ಜಿಯ ಶುಲ್ಕವು ಆನ್‌ಲೈನ್ ಅರ್ಜಿ ಸಲ್ಲಿಸಿದ ನಂತರ ಆನ್‌ಲೈನ್ ಮುಖಾಂತರವೇ ಪಾವತಿಸುವುದು, ಇತರೇ ಯಾವುದೇ ಮೂಲಗಳಿಂದ ಅರ್ಜಿಯ ಶುಲ್ಕವನ್ನು ಸ್ವೀಕಲಿಸಲಾಗುವುದಿಲ್ಲ.

ಡಿಪ್ಲೋಮಾ (ಪಶುಸಂಗೋಪನೆ) ಕೋರ್ಸ್ ಯುವ ಜನತೆಗೆ ಸ್ವಯಂ ಉದ್ಯೋಗವನ್ನು ಕೈಗೊಳ್ಳುವ ಉದ್ದೇಶವನ್ನು ಹೊಂದಿದೆ. ಸತತವಾಗಿ ಪಶುಸಂಗೋಪನೆ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರೊಂದಿಗೆ ಪಶು ಸಂಬಂಧಿತ ಉತ್ಪಾದನೆಯನ್ನು ಹೆಚ್ಚಿಸುವ ಕುರಿತು ಜ್ಞಾನವನ್ನು ಪಡೆಯುವಲ್ಲಿ ನೆರವಾಗುತ್ತದೆ.

ಕರ್ನಾಟಕ ಸರ್ಕಾರವು ವ್ಯಾಖ್ಯಾನಿಸಿದಂತೆ ನೋಂದಾಯಿತ ಪಶುವೈದ್ಯಕೀಯ ವೈದ್ಯರ ಮೇಲ್ವಿಚಾರಣೆ ಮತ್ತು ನಿರ್ದೇಶನದ ಅಡಿಯಲ್ಲಿ "ಅಪ್ರಧಾನ ಪಶುವೈದ್ಯಕೀಯ ಸೇವೆಗಳಿಗೆ" ಸೀಮಿತವಾದ ಸೇವೆಗಳನ್ನು ನಿರ್ವಹಿಸಲು ಮಾತ್ರ ಅರ್ಹರಾಗಿರುತ್ತಾರೆ. ವಿಶ್ವವಿದ್ಯಾಲಯ ಮತ್ತು ಕರ್ನಾಟಕ ಸರ್ಕಾರದ ವತಿಯಿಂದ ಡಿಪ್ಲೋಮಾ (ಪಶುಸಂಗೋಪನೆ) ಕೋರ್ಸ್‌ನ್ನು ಮುಗಿಸಿದ ಅಭ್ಯರ್ಥಿಗಳಿಗೆ ಯಾವುದೇ ಖಚಿತ ಸರ್ಕಾಲಿ ಉದ್ಯೋಗದ ಕುರಿತು ಭರವಸೆ ಇರುವುದಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+