• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಾವಣಗೆರೆ; ಫಿಜಿಯೋಥೆರಪಿಸ್ಟ್ ಹುದ್ದೆಗಳಿಗೆ ಅರ್ಜಿ ಹಾಕಿ

|

ದಾವಣಗೆರೆ, ನವೆಂಬರ್ 06: ದಾವಣಗೆರೆ ದಕ್ಷಿಣ ವಲಯ ಮತ್ತು ಜಗಳೂರು ಇಲ್ಲಿ ಫಿಜಿಯೋಥೆರಪಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

2020-21ನೇ ಸಾಲಿನ ಸಮಗ್ರ ಶಿಕ್ಷಣ ಕರ್ನಾಟಕ ಸಮನ್ವಯ ಶಿಕ್ಷಣದ ಅನುಮೋದಿತ ಚಟುವಟಿಕೆಯಾದ ತೀವ್ರತರ ವಿಕಲತೆ ಹೊಂದಿರುವ ವಿಕಲಚೇತನ ವಿದ್ಯಾರ್ಥಿಗಳಿಗೆ ದೈಹಿಕ ಚಿಕಿತ್ಸೆ/ಫಿಜಿಯೋಥೆರಪಿ ಮಾಡಿಸುವ ಸಲುವಾಗಿ ಫಿಜಿಯೋಥೆರಪಿಸ್ಟ್ ನೇಮಕ ಮಾಡಿಕೊಳ್ಳಲಾಗುತ್ತಿದೆ.

ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ; ನ.18ರ ತನಕ ಅರ್ಜಿ ಹಾಕಿ

ಕ್ಷೇತ್ರ ಸಂಪನ್ಮೂಲ ಕೇಂದ್ರ ದಾವಣಗೆರೆ ದಕ್ಷಿಣ ವಲಯ ಇಲ್ಲಿ 1 ಫಿಜಿಯೋಥೆರಪಿಸ್ಟ್ ಹುದ್ದೆ ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೋಮ ಇನ್ ಫಿಜಿಯೋಥೆರಪಿಸ್ಟ್/ಬ್ಯಾಚುಲರ್ ಆಫ್ ಫಿಜಿಯೋಥೆರಪಿಸ್ಟ್ ವ್ಯಾಸಂಗ ಮಾಡಿರಬೇಕು.

ಬಿಎಂಆರ್‌ಸಿಎಲ್ ನೇಮಕಾತಿ ರದ್ದು; ಪರೀಕ್ಷಾ ಶುಲ್ಕ ವಾಪಸ್

ಆಸಕ್ತರು ಅಗತ್ಯ ದಾಖಲೆಗಳ ಜೊತೆ ನವೆಂಬರ್13ರ ಸಂಜೆ 5.30ರೊಳಗಾಗಿ ಭರ್ತಿ ಮಾಡಿದ ಅರ್ಜಿಯನ್ನು ಬಿ.ಆರ್.ಸಿ ದಾವಣಗೆರೆ ದಕ್ಷಿಣ ವಲಯ ಇಲ್ಲಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ 9480695178, 9449910879 ಸಂಖ್ಯೆಗೆ ಕರೆ ಮಾಡಬಹುದಾಗಿದೆ.

ಕರ್ನಾಟಕ ಪೊಲೀಸ್ ನೇಮಕಾತಿ; ನ.25ರ ತನಕ ಅರ್ಜಿ ಹಾಕಿ

   ರಾಜನೇ ಇಲ್ಲದ ಅರಮನೆ ( CCD) | NBW Issued Against SM Krishna's Daughter Malavika | Oneindia Kannada

   ಜಗಳೂರಿನಲ್ಲಿ ಹುದ್ದೆಗಳಿವೆ: ಕ್ಷೇತ್ರ ಸಂಪನ್ಮೂಲ ಕೇಂದ್ರ ಜಗಳೂರು ಇಲ್ಲಿ ತಾತ್ಕಾಲಿಕ ಅವಧಿಗೆ ಫಿಜಿಯೋಥೆರಪಿಸ್ಟ್ ನೇಮಕಾತಿ ಮಾಡಿಕೊಳ್ಳಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಕರೆಯಲಾಗಿದೆ. 2 ವರ್ಷದ ಸೇವಾ ಅನುಭವ ಇರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತರು ನವೆಂಬರ್ 12ರ ತನಕ ಅರ್ಜಿ ಹಾಕಬಹುದು.

   English summary
   Apply for Physiotherapist jobs In South Davanagere and Jagalur. Interested candidate can submit applications.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X