ಧಾರವಾಡ; ಜಿಲ್ಲಾ ಸಂಯೋಜಕರ ನೇಮಕಾತಿ, ಅರ್ಜಿ ಹಾಕಿ
ಬೆಂಗಳೂರು, ಡಿಸೆಂಬರ್ 25; 2023-24ನೇ ಸಾಲಿನ ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಜಲಸಂಜೀವಿನಿ ಕಾರ್ಯಕ್ರಮದಡಿ ಜಲಸಂಜೀವಿನಿ ಜಿಲ್ಲಾ ಸಂಯೋಜಕ ಹುದ್ದೆ ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ.
ಧಾರವಾಡ ಜಿಲ್ಲಾ ಮಟ್ಟದಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಒಂದು ಹುದ್ದೆಯನ್ನು ತಾತ್ಕಾಲಿಕವಾಗಿ ಭರ್ತಿ ಮಾಡಲಾಗುತ್ತಿದೆ. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈ ಕುರಿತು ಅಧಿಸೂಚನೆ ಹೊರಡಿಸಿದ್ದಾರೆ.

ಅರ್ಹ ಅಭ್ಯರ್ಥಿಗಳು ಡಿಸೆಂಬರ್ 28ರೊಳಗೆ ಅರ್ಜಿಯನ್ನು ಭರ್ತಿ ಮಾಡಿ ಜಿಲ್ಲಾ ಪಂಚಾಯತಿ ಕಾರ್ಯಾಲಯಕ್ಕೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತಿ ನರೇಗಾ ಶಾಖೆಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ಸಂಪರ್ಕಿಸಬಹುದು.
ಕರೆ ಮಾಡಲು ದೂರವಾಣಿ ಸಂಖ್ಯೆ ಬಾಬು ದೇಸಾಯಿ 9880956465 ಮತ್ತು ಸಮನ್ವಯ ಅಧಿಕಾರಿ ಪ್ರಶಾಂತ ಹೆಚ್. ಡಿ. 7349414664.
ಅರ್ಜಿ ಆಹ್ವಾನ; ಪಶುಪಾಲನಾ ಮತ್ತು ಪಶು ವೈದ್ಯ ಸೇವಾ ಇಲಾಖೆಯಿಂದ 2022-23 ನೇ ಸಾಲಿಗಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಮುಖ್ಯಮಂತ್ರಿಗಳ ಅಮೃತ ಜೀವನ ಯೋಜನೆ ಅಡಿಯಲ್ಲಿ ಒಂದು ಮಿಶ್ರತಳಿ ಹಸು ಅಥವಾ ಎಮ್ಮೆ ಪೂರೈಕೆಗಾಗಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಫಲಾನುಭವಿಗಳಿಗೆ ಶೇ 33.33 ಹಾಗೂ ಇತರೆ ಫಲಾನುಭವಿಗಳಿಗೆ ಶೇ 25 ಸಹಾಯಧನದೊಂದಿಗೆ ಘಟಕಗಳನ್ನು ಸ್ಥಾಪಿಸಲು ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆಯಲಾಗಿದೆ.
ಈ ಯೋಜನೆಯಡಿಯಲ್ಲಿ ಒಂದು ಮಿಶ್ರತಳಿ ಹಸು ಅಥವಾ ಎಮ್ಮೆ ವಿತರಿಸಲಾಗುವುದು. ಇದರ ಘಟಕ ವೆಚ್ಚ 62 ಸಾವಿರ ರೂ.ಗಳಾಗಿದ್ದು, ಇದರಲ್ಲಿ ಜಾನುವಾರು ಮೊತ್ತ ಹಾಗೂ ಜಾನುವಾರು ಸಾಗಾಣಿಕೆ ಮೊತ್ತ ಒಳಗೊಂಡಿರುತ್ತದೆ.
ಇದರಲ್ಲಿ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ 15,500 ರೂ. ಹಾಗೂ ಪರಿಶಿಷ್ಠ ಜಾತಿ, ಪರಿಶಿಷ್ಠ ಪಂಗಡದ ಫಲಾನುಭವಿಗಳಿಗೆ 20,665 ರೂ.ಗಳ ಸಹಾಯಧನ ಒದಗಿಸಲಾಗುವುದು. ಸರ್ಕಾರದ ನಿಯಮಾವಳಿಗಳನ್ವಯ ಫಲಾನುಭವಿಗಳ ಆಯ್ಕೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.15 ರಷ್ಟು ಮತ್ತು ಮಹಿಳೆಯರಿಗೆ ಶೇ.33.33 ರಷ್ಟು ಆದ್ಯತೆ ಇದೆ.
ಅರ್ಜಿಗಳನ್ನು ಸಲ್ಲಿಸುವ ರೈತರು ಪ್ರೂಟ್ ಐಡಿ (ರೈತರ ಗುರುತಿನ ಸಂಖ್ಯೆ) ಹಾಗೂ ಆರ್.ಡಿ. ಸಂಖ್ಯೆ ಹೊಂದಿರುವ ಜಾತಿ ಪ್ರಮಾಣ ಪತ್ರ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಡಿಸೆಂಬರ್ 31 ಕೊನೆಯ ದಿನವಾಗಿದೆ.
ಅರ್ಜಿಗಳಿಗೆ ಮತ್ತು ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು, ಪಶು ಆಸ್ಪತ್ರೆ ಧಾರವಾಡ ಇವರಿಗೆ ಕರೆ ಮಾಡಬಹುದಾಗಿದೆ. ಮೊಬೈಲ್ ಸಂಖ್ಯೆಗಳು 9449541722, 9844187842, 9880867636.












Click it and Unblock the Notifications