ಧಾರವಾಡ; ಡಾಟಾ ಎಂಟ್ರಿ ಅಪರೇಟರ್ ಹುದ್ದೆಗೆ ಅರ್ಜಿ ಆಹ್ವಾನ

ಧಾರವಾಡ, ಫೆಬ್ರವರಿ 04; ಧಾರವಾಡ ಜಿಲ್ಲಾಧಿಕಾರಿಗಳ ಕಾರ್ಯಾಲಯಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಕಾರ್ಯನಿರ್ವಹಿಸಲು ಡಾಟಾ ಎಂಟ್ರಿ ಆಪರೇಟರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಪಡೆಯಲಾಗುತ್ತದೆ. ಜಿಲ್ಲಾ ಮಟ್ಟದಲ್ಲಿ ಏಜೆನ್ಸಿಯವರ ಮೂಲಕ ಹುದ್ದೆ ಭರ್ತಿ ಮಾಡಲು ಉದ್ದೇಶಿಸಲಾಗಿದೆ. ಅರ್ಜಿ ಸಲ್ಲಿಸುವ ಸಂಸ್ಥೆಯು ನೋಂದಣಿಯಾಗಿ ಮೂರು ವರ್ಷಗಳನ್ನು ಪೂರೈಸಿದ ಬಗ್ಗೆ ದಾಖಲೆ ಹೊಂದಿರಬೇಕು.

ಸಂಸ್ಥೆಯು ಈಗಾಗಲೇ ಸರ್ಕಾರಿ ಕಚೇರಿ ಅಥವಾ ಖಾಸಗಿ ಸಂಸ್ಥೆ ಕಚೇರಿಗೆ ಹೊರಗುತ್ತಿಗೆ ಆಧಾರದ ಮೇಲೆ ಡಾಟಾ ಎಂಟ್ರಿ ಅಪರೇಟರ್ ಇವರನ್ನು ಪೂರೈಸಿದ ಬಗ್ಗೆ ದಾಖಲೆಗಳು, ಇಎಸ್‍ಐ, ಪಿಎಫ್ ಚಾಲ್ತಿಯಲ್ಲಿರುವ ಬಗ್ಗೆ ದಾಖಲೆಗಳು, ಕನಿಷ್ಠ ವೇತನ ಕಾಯ್ದೆಯನ್ವಯ ದರಪಟ್ಟಿಯನ್ನು ಸಲ್ಲಿಸಬೇಕು.

Data entry operator

ಆಸಕ್ತ ನೋಂದಾಯಿತ ಏಜೆನ್ಸಿಯವರು ತಮ್ಮ ಸೇವಾ ಶುಲ್ಕದ ದರಪಟ್ಟಿಯನ್ನು ಫೆಬ್ರವರಿ 9 ರಂದು ಸಂಜೆ 4 ಗಂಟೆಯೊಳಗಾಗಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ಹೇಳಿದೆ.

ಕೊಡಗಿನಲ್ಲಿ ಕೆಲಸ ಖಾಲಿ ಇದೆ; ಪ್ರಧಾನಮಂತ್ರಿ ಮಾತೃವಂದನಾ ಯೋಜನೆಯಡಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಸಹಾಯಕರು ಮತ್ತು ಪೋಷಣ್ ಅಭಿಯಾನ ಯೋಜನೆಯಡಿ ತಾಲ್ಲೂಕು ಯೋಜನಾ ಸಹಾಯಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ಕೊಡಗು ಜಿಲ್ಲೆಯಲ್ಲಿ ಅರ್ಜಿ ಕರೆಯಲಾಗಿದೆ.

ಜಿಲ್ಲಾ ಮಟ್ಟದ ಕಾರ್ಯಕ್ರಮ ಸಹಾಯಕರ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಬಿ.ಎ., ಬಿ.ಕಾಂ, ಸಮಾಜ ಕಾರ್ಯ, ರೂರಲ್ ಮ್ಯಾನೇಜ್‍ಮೆಂಟ್ ಇವುಗಳಲ್ಲಿ ಯಾವುದಾದರೊಂದು ವಿಷಯದಲ್ಲಿ ಪದವಿ ಪಡೆದಿರಬೇಕು.

ಸರ್ಕಾರಿ, ಸ್ವಯಂ ಸೇವಾ ಸಂಸ್ಥೆಗಳಲ್ಲಿ ಕನಿಷ್ಠ 1 ವರ್ಷ ಕೆಲಸ ನಿರ್ವಹಿಸಿರುವ ಅನುಭವ ಹೊಂದಿರಬೇಕು. ಡಾಟಾ ಎಂಟ್ರಿ, ಎಂ.ಎಸ್.ಆಫೀಸ್ ಬಳಕೆಯಲ್ಲಿ ಪ್ರಾವೀಣ್ಯತೆ ಹೊಂದಿರಬೇಕು. ಅಭ್ಯರ್ಥಿಗಳಿಗೆ ಮಾಸಿಕ 20 ಸಾವಿರ ರೂ. ಗೌರವಧನ ನಿಗದಿ ಮಾಡಲಾಗಿದೆ.

ತಾಲ್ಲೂಕು ಯೋಜನಾ ಸಹಾಯಕರ ಹುದ್ದೆಗೆ ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಸ್ಥಳೀಯ ಸಂಸ್ಥೆಗಳೊಂದಿಗೆ ಕನಿಷ್ಠ 1 ವರ್ಷ ಕೆಲಸ ನಿರ್ವಹಿಸಿದ ಅನುಭವ, ಕನ್ನಡ ಭಾಷೆಯಲ್ಲಿ ಪ್ರಾವೀಣ್ಯತೆ, ಕ್ಷೇತ್ರ ಕಾರ್ಯ ನಿರ್ವಹಣೆ ಮತ್ತು ಸ್ಥಳೀಯ ಅಭ್ಯರ್ಥಿ ಕಡ್ಡಾಯ. ಅಭ್ಯರ್ಥಿಗಳಿಗೆ ಮಾಸಿಕ 15 ಸಾವಿರ ರೂ. ಗೌರವಧನ ನೀಡಲಾಗುತ್ತದೆ.

ಹುದ್ದೆಗಳ ನೇಮಕಾತಿಯು 11 ತಿಂಗಳ ಅವಧಿಯಾಗಿದ್ದು, ಕೆಲಸ ನಿರ್ವಹಣೆಯ ಆಧಾರದ ಮೇರೆಗೆ ನವೀಕರಿಸಲಾಗುವುದು. ಅರ್ಹ ಅಭ್ಯರ್ಥಿಗಳು ಸ್ವ ವಿವರಗಳೊಂದಿಗೆ ನಿಗದಿಪಡಿಸಿದ ವಿದ್ಯಾರ್ಹತೆಯ ಅಂಕಪಟ್ಟಿಗಳು ಮತ್ತು ಅನುಭವ ಪ್ರಮಾಣ ಪತ್ರಗಳೊಂದಿಗೆ ಅರ್ಜಿ ಸಲ್ಲಿಸಬೇಕು.

ಅರ್ಜಿಗಳನ್ನು ಸಲ್ಲಿಕೆ ಮಾಡಲು ಫೆಬ್ರವರಿ, 15ರ ಸಂಜೆ 5 ಗಂಟೆ ಕೊನೆಯ ದಿನವಾಗಿದೆ. ಅರ್ಜಿಗಳನ್ನು ಉಪ ನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ ಇಲ್ಲಿಗೆ ಸಲ್ಲಿಕೆ ಮಾಡಬಹುದಾಗಿದೆ.

ಅಪ್ರೆಂಟಿಸ್ ತರಬೇತಿ; ಕೊಪ್ಪಳ ತಾಲ್ಲೂಕಿನ ಕಿರ್ಲೋಸ್ಕರ್ ಫೆರಸ್ ಇಂಡಸ್ಟ್ರೀಜ್ ಪ್ರೈ ಲಿ. ವತಿಯಿಂದ ಐಟಿಐ ಪಾಸಾದ ಅಭ್ಯರ್ಥಿಗಳಿಗೆ ಕುಕನೂರಿನ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಫೆಬ್ರವರಿ 7ರಂದು ಒಂದು ವರ್ಷದ ಅವಧಿಯ ಅಪ್ರೆಂಟಿಸ್‌ಶಿಪ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನ ಏರ್ಪಡಿಸಲಾಗಿದೆ.

ಬೆಳಗ್ಗೆ 10 ಗಂಟೆಗೆ ಸಂದರ್ಶನ ಆರಂಭವಾಗಲಿದ್ದು, 18 ರಿಂದ 24 ವರ್ಷ ವಯೋಮಿತಿಯ ಐಟಿಐ ಎಲೆಕ್ಟ್ರಿಷಿಯನ್, ಫಿಟ್ಟರ್, ಟರ್ನರ್ ಮತ್ತು ವೆಲ್ಡರ್ ವೃತ್ತಿಯಲ್ಲಿ ಉತ್ತೀರ್ಣರಾಗಿರುವ ಹಾಗೂ ಡಿಸೆಂಬರ್-2021ರಲ್ಲಿ ನಡೆದ ಪರೀಕ್ಷೆಗಳ ಫಲಿತಾಂಶದ ನಿರೀಕ್ಷೆಯಲ್ಲಿರುವ ಅಂತಿಮ ವರ್ಷದ ವಿದ್ಯಾರ್ಥಿಗಳು ಸಂದರ್ಶನದಲ್ಲಿ ಪಾಲ್ಗೊಳ್ಳಬಹುದಾಗಿದೆ.

ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ತರಬೇತಿ ಸಮಯದಲ್ಲಿ ಪ್ರತಿ ತಿಂಗಳು 10,000 ರೂ. ಶಿಷ್ಯವೇತನ, ಕ್ಯಾಂಟೀನ್, ಸಾರಿಗೆ, ಮತ್ತು ಯುನಿಫಾರ್ಮ್ ಸೌಲಭ್ಯಗಳನ್ನು ಕಂಪನಿಯಿಂದ ನೀಡಲಾಗುತ್ತದೆ.

ಆಸಕ್ತ ಅಭ್ಯರ್ಥಿಗಳು ಹತ್ತನೇ ತರಗತಿ ಅಂಕಪಟ್ಟಿ, ಐಟಿಐ ಪಾಸಾದ ಅಂಕಪಟ್ಟಿಗಳು, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಬ್ಯಾಂಕ್ ಪಾಸ್ ಬುಕ್ ಮತ್ತು ಇತ್ತೀಚಿನ ಪಾಸ್ ಪೋರ್ಟ್ ಅಳತೆಯ ಫೋಟೋಗಳೊಂದಿಗೆ ಸಂದರ್ಶನಕ್ಕೆ ಹಾಜರಾಗಬೇಕು.

ಹೆಚ್ಚಿನ ಮಾಹಿತಿಗಾಗಿ 9480715898, 9449517426, 9964247098, 8618952961 ಸಂಖ್ಯೆಗಳಿಗೆ ಕರೆ ಮಾಡಬಹುದಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+