ದಾವಣಗೆರೆಯಲ್ಲಿ ಕೆಲಸ ಖಾಲಿ ಇದೆ; ಜೂ.26ರೊಳಗೆ ಅರ್ಜಿ ಹಾಕಿ
ದಾವಣಗೆರೆ, ಜೂನ್ 05 : ಚನ್ನಗಿರಿ ಹೊರತುಪಡಿಸಿ ದಾವಣಗೆರೆ ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಬಿ. ಎಫ್ ಟಿ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಜೂನ್ 26ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
Recommended Video
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ದಾವಣಗೆರೆ ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಕಾಮಗಾರಿಗಳನ್ನು ನಿರ್ವಹಿಸಲು ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಕಾಮಗಾರಿಗಳ ಮೇಲುಸ್ತುವಾರಿ ನಿರ್ವಹಿಸುವ ಬಿ. ಎಫ್. ಟಿ (ಬೇರ್‍ರೂಟ್ ಟೆಕ್ನಿಷಿಯನ್)ಗಳನ್ನು ಸ್ಕ್ರೀನಿಂಗ್ ಟೆಸ್ಟ್ ಮೂಲಕ ಗೌರವಧನ ಪಾವತಿಸುವ ನಿಬಂಧನೆ ಮೇಲೆ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ನರೇಗಾ ಕಾಮಗಾರಿಗಳನ್ನು ಗುರುತಿಸುವುದು, ತಾಂತ್ರಿಕ ಸಹಾಯಕರಿಗೆ ಸಹಾಯ ಮಾಡುವುದು, ಗ್ರಾಮಸಭೆ ಮಂಡಿಸುವುದು ಹಾಗೂ ಒಟ್ಟಾರೆಯಾಗಿ ಯೋಜನೆಯಡಿ ನಿರ್ವಹಿಸುವ ಎಲ್ಲಾ ಕಾಮಗಾರಿಗಳ ಮೇಲುಸ್ತುವಾರಿ ಮಾಡುವುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ ಎಸ್. ಎಸ್. ಎಲ್. ಸಿ ಉತ್ತೀರ್ಣರಾಗಿರಬೇಕು. ತಮ್ಮ ವ್ಯಾಪ್ತಿಯ ಗ್ರಾಮ ಪಂಚಾಯಿತಿಯಲ್ಲಿ ಕಡ್ಡಾಯವಾಗಿ ಉದ್ಯೋಗ ಚೀಟಿ ಹೊಂದಿರಬೇಕು. ವಯೋಮಿತಿ 45 ವರ್ಷದೊಳಗಿರಬೇಕು. ಕಳೆದ ಎರಡು ಆರ್ಥಿಕ ವರ್ಷಗಳಲ್ಲಿ ಯೋಜನೆಯಡಿ ಉದ್ಯೋಗ ನಿರ್ವಹಣೆ ಮಾಡಿರಬೇಕು.
ಅರ್ಜಿ ಸಲ್ಲಿಸಲು ಬಯಸುವವರು ಆಯಾ ತಾಲೂಕಿನ ತಾಲೂಕು ಪಂಚಾಯಿತಿಗಳಲ್ಲಿ ಕಚೇರಿ ಅವಧಿಯಲ್ಲಿ ಅರ್ಜಿ ಪಡೆಯಬೇಕು. ನಿಗದಿಪಡಿಸಿದ ದಾಖಲೆಗಳೊಂದಿಗೆ ಜೂನ್ 26 ರೊಳಗೆ ಸಿಲ್ ಮಾಡಿದ ಲಕೋಟೆಯಲ್ಲಿ ಖುದ್ದಾಗಿ ತಾಲೂಕು ಪಂಚಾಯಿತಿ ಕಚೇರಿಯ ನರೇಗಾ ಶಾಖೆಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಪಂಚಾಯತಿ ಉಚಿತ ಸಹಾಯವಾಣಿ 1800-425-2203ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.












Click it and Unblock the Notifications