ಗದಗ; ಕೆಲಸ ಖಾಲಿ ಇದೆ, ಹುದ್ದೆಯ ವಿವರ, ಅರ್ಜಿ ಹಾಕಿ
ಗದಗ, ನವೆಂಬರ್ 28; ಗದಗದಲ್ಲಿ ಅನುದಾನಿತ ಸಹಾಯಕ ಪ್ರಾಧ್ಯಪಕ, ದೈಹಿಕ ಶಿಕ್ಷಣ ನಿರ್ದೇಶಕ ಹುದ್ದೆಗಳ ನೇರ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹರು ಆಫ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕಿದೆ.
ಕರ್ನಾಟಕ ವಿದ್ಯಾವರ್ಧಕ ಸಮಿತಿ, ಅಳವಂಡಿ. ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ, ಗದಗ ನೇಮಕಾತಿ ಪ್ರಕಟಣೆಯನ್ನು ಹೊರಡಿಸಿದೆ. ಕರ್ನಾಟಕ ವಿದ್ಯಾವರ್ಧಕ ಸಮಿತಿ, ಅಳವಂಡಿ, ಇದರ ಅಡಿಯಲ್ಲಿ ಬರುವ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ, ಗದಗ ಇಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತಿದೆ.

ಸಹಾಯಕ ಪ್ರಾಧ್ಯಪಕರು 3, ದೈಹಿಕ ಶಿಕ್ಷಣ ನಿರ್ದೇಶಕರು 1 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳು ಭಾರತೀಯ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಇಡಿ. ಪದವಿಯಲ್ಲಿ ಕನಿಷ್ಠ ಶೇ. 55 ಅಂಕ ಪಡೆದಿರಬೇಕು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.50) ಹಾಗೂ ಸಂಬಂಧಿಸಿದ ಶಾಲಾ ವಿಷಯದಲ್ಲಿ ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಟ ಶೇ.55 ರಷ್ಟು ಅಂಕಗಳನ್ನು ಪಡೆದಿರಬೇಕು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.50).
ಎನ್.ಇ.ಟಿ/ ಎಸ್.ಎಲ್.ಇ.ಟಿ/ ಎಸ್.ಇ.ಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಕೋರ್ಸ್ ವರ್ಕನೊಂದಿಗೆ ಪಿ.ಹೆಚ್.ಡಿ. ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಎನ್.ಇ.ಟಿ/ ಎಸ್.ಎಲ್.ಇ.ಟಿ/ ಎಸ್.ಇ.ಟಿ ಪರೀಕ್ಷೆಯಿಂದ ವಿನಾಯತಿ ಇರುತ್ತದೆ. ದಿನಾಂಕ 11/7/2009ರ ಪೂರ್ವದಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿದ್ದಲ್ಲಿ / ಪಿ.ಹೆಚ್.ಡಿ. ಪದವಿಗೆ ನೋಂದಣಿ ಮಾಡಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳು ದಿನಾಂಕ 4/5/2016ರ ಯು.ಜಿ.ಸಿ ಅಧಿಸೂಚನೆಯಲ್ಲಿ ಹೊರಡಿಸಿರುವ ನಿಯಮಗಳನ್ನು ಪೂರೈಸಿರುವ ಷರತ್ತಿಗೊಳಪಟ್ಟಿರುತ್ತಾರೆ. ಇತಿಹಾಸ, ಜೀವಶಾಸ್ತ್ರ ಮತ್ತು ಇಂಗ್ಲೀಷ್ ಬೋಧನಾಶಾಸ್ತ್ರ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆ; ಅಭ್ಯರ್ಥಿಗಳು ಭಾರತೀಯ ಅಂಗೀಕೃತ ವಿಶ್ವವಿದ್ಯಾಲಯದಿಂದ ಎಂ.ಪಿ.ಇಡಿ. ಪದವಿಯಲ್ಲಿ ಕನಿಷ್ಠ ಶೇ. 55 ಅಂಕ ಪಡೆದಿರಬೇಕು (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಶೇ.50), ಎನ್.ಇ.ಟಿ/ ಎಸ್.ಎಲ್.ಇ.ಟಿ/ ಎಸ್.ಇ.ಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು. ಅಥವಾ ಕೋರ್ಸ್ ವರ್ಕನೊಂದಿಗೆ ಪಿ.ಹೆಚ್.ಡಿ. ಪದವಿ ಪಡೆದಿರುವ ಅಭ್ಯರ್ಥಿಗಳಿಗೆ ಎನ್.ಇ.ಟಿ/ ಎಸ್. ಎಲ್.ಇ.ಟಿ/ ಎಸ್.ಇ.ಟಿ ಪರೀಕ್ಷೆಯಿಂದ ವಿನಾಯತಿ ಇರುತ್ತದೆ.
ದಿನಾಂಕ 11/7/2009ರ ಪೂರ್ವದಲ್ಲಿ ಪಿ.ಹೆಚ್.ಡಿ. ಪದವಿ ಪಡೆದಿದ್ದಲ್ಲಿ ಪಿ.ಹೆಚ್.ಡಿ. ಪದವಿಗೆ ನೋಂದಣಿ ಮಾಡಿಸಿದ್ದಲ್ಲಿ ಅಂತಹ ಅಭ್ಯರ್ಥಿಗಳು ದಿನಾಂಕ 4/5/2016ರ ಯು.ಜಿ.ಸಿ ಅಧಿಸೂಚನೆಯಲ್ಲಿ ಹೊರಡಿಸಿರುವ ನಿಯಮಗಳನ್ನು ಪೂರೈಸಿರುವ ಷರತ್ತಿಗೊಳಪಟ್ಟಿರುತ್ತಾರೆ.
ಅರ್ಜಿ ಸಲ್ಲಿಕೆ ಮಾಡುವ ಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕದಂದು ಗರಿಷ್ಠ ವಯೋಮಿತಿ ಮೀರಿರಬಾರದು. (20/6/2018ರ ಸರ್ಕಾರಿ ಆದೇಶ ಪ್ರಕಾರ ಪ.ಜಾ., ಪ.ಪಂ, ಮತ್ತು ಪ್ರವರ್ಗ-1ರ ಅಭ್ಯರ್ಥಿಗಳು ಗರಿಷ್ಠ 45, ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳು ಗರಿಷ್ಠ 43 ಹಾಗೂ ಸಾಮಾನ್ಯ ವರ್ಗ ಅಭ್ಯರ್ಥಿಗಳು ಗರಿಷ್ಠ 40 ವರ್ಷಗಳು).
ದಿನಾಂಕ 13/12/2018ರ ಸರ್ಕಾರಿ ಆದೇಶದ ಸರ್ಕಾರದ ಸೇರ್ಪಡೆ ಆದೇಶದನ್ವಯ, ಖಾಸಗಿ ಅನುದಾನಿತ ಪದವಿ ಕಾಲೇಜುಗಳಲ್ಲಿ ಪೂರ್ಣಕಾಲಿಕ ಬೋಧನಾನುಭವ ಹೊಂದಿರುವ ಅಭ್ಯರ್ಥಿಗಳಿಗೆ ಮೇಲಿನಂತೆ ಗರಿಷ್ಠ ವಯೋಮಿತಿಯನ್ನು ನಿಗದಿಪಡಿಸಿರುವುದರೊಂದಿಗೆ ಅವರು ಬೋಧನಾನುಭವ ಹೊಂದಿರುವ ಸೇವಾವಧಿ ಅಥವಾ 5 ವರ್ಷಗಳು ಇವುಗಳಲ್ಲಿ ಯಾವುದು ಕಡಿಮೆಯೋ ಅಷ್ಟು ಅವಧಿಯನ್ನು ಗರಿಷ್ಠ ವಯೋಮಿತಿಯಲ್ಲಿ ವಿನಾಯತಿಯನ್ನು ಪಡೆಯಬಹುದು.
ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನ, ಭತ್ಯೆಗಳು ಮತ್ತು ಇತರೆ ನಿಬಂಧನೆಗಳು ಯು.ಜಿ.ಸಿ. ಮತ್ತು ಕರ್ನಾಟಕ ಸರ್ಕಾರದ ನಿಯಮಗಳನ್ವಯ ಇರುತ್ತವೆ ಎಂದು ತಿಳಿಸಲಾಗಿದೆ. ಸದರಿ ಖಾಲಿ ಹುದ್ದೆಗಳ ಭರ್ತಿಗೆ ನೀಡಿರುವ ಅನುಮತಿಯನ್ನು ಹಾಗೂ ಆಯ್ಕೆ ಪ್ರಕ್ರಿಯೆಯನ್ನು ಯಾವುದೇ ಹಂತದಲ್ಲಾದರೂ ರದ್ದುಪಡಿಸುವ ಅಧಿಕಾರವನ್ನು ಇಲಾಖೆ ಅಥವಾ ಸರ್ಕಾರ ಹೊಂದಿರುತ್ತದೆ. ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ ಅಥವಾ ಸಂದರ್ಶನಕ್ಕೆ ಹಾಜರಾದ ಮಾತ್ರಕ್ಕೆ ಸದರಿ ಹುದ್ದೆಗಳ ಅಭ್ಯರ್ಥಿಗಳು ಯಾವುದೇ ಹಕ್ಕನ್ನು ಹೊಂದಿರುವುದಿಲ್ಲ.
ಅರ್ಜಿ ಸಲ್ಲಿಸುವ ವಿಧಾನ: ಅರ್ಹ ಅಭ್ಯರ್ಥಿಗಳು ಅರ್ಜಿಯನ್ನು www.jpcedugdg.edu.in ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡು ಭರ್ತಿ ಮಾಡಿ, ಅಗತ್ಯ ಪ್ರಮಾಣಪತ್ರಗಳೊಂದಿಗೆ ತಮ್ಮ ಸಲ್ಲಿಸಬೇಕು.
ಅರ್ಜಿ ಸಲ್ಲಿಕೆ ಮಾಡಲು ವಿಳಾಸ. ಕಾರ್ಯದರ್ಶಿಗಳು, ಕರ್ನಾಟಕ ವಿದ್ಯಾವರ್ಧಕ ಸಮಿತಿಯ ಜಗದ್ಗುರು ಪಂಚಾಚಾರ್ಯ ಶಿಕ್ಷಣ ಮಹಾವಿದ್ಯಾಲಯ, ಹಾತಲಗೇರಿ ರೋಡ ಗದಗ - 582101, ತಾಲ್ಲೂಕ ಮತ್ತು ಜಿಲ್ಲೆ. ಗದಗ.
ಅರ್ಜಿಯೊಂದಿಗೆ ಪ.ಜಾ., ಪ.ಪಂ. ಮತ್ತು ಪ್ರವರ್ಗ-1 ಅಭ್ಯರ್ಥಿಗಳು ರೂ. 2000 ಮತ್ತು ಇತರೆ ಅಭ್ಯರ್ಥಿಗಳು ರೂ. 3000 ಗಳ ಶುಲ್ಕವನ್ನು ಪಾವತಿಸಬೇಕು. (ಶುಲ್ಕ ಹಿಂದಿರುಗಿಸಲಾಗುವುದಿಲ್ಲ). ಅರ್ಜಿ ಶುಲ್ಕದ ಬ್ಯಾಂಕ್ ಡಿಡಿಯನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಡಿ.ಡಿ.ಯನ್ನು SECRETARY, Karnataka Vidyavardhaka Samithi, Alwandi ಈ ಹೆಸರಿಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ಪಡೆದು
ಕೊಂಡಿರಬೇಕು.
ಅರ್ಜಿ ಶುಲ್ಕದ ಡಿಡಿ ಇಲ್ಲದ, ಅಪೂರ್ಣ ಮಾಹಿತಿ ಇರುವ, ಪ್ರಮಾಣಪತ್ರ ಮತ್ತು ಅಂಕಪಟ್ಟಿಗಳು ಇಲ್ಲದ ಅರ್ಜಿಗಳನ್ನು ಮಾನ್ಯ ಮಾಡುವುದಿಲ್ಲ. ಲಕೋಟೆ ಈ ಮೇಲ್ಬಾಗದಲ್ಲಿ ಸಹಾಯಕ ಪ್ರಾಧ್ಯಾಪಕರ/ ದೈಹಿಕ ಶಿಕ್ಷಣ ನಿರ್ದೇಶಕರ ಹುದ್ದೆಗಾಗಿ ಅರ್ಜಿ ಎಂದು ನಮೂದಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08372-400672.
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications