Get Updates
Get notified of breaking news, exclusive insights, and must-see stories!

ಶಿವಮೊಗ್ಗ; ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಹುದ್ದೆ ಖಾಲಿ

ಶಿವಮೊಗ್ಗ, ಜುಲೈ 13; ಶಿವಮೊಗ್ಗ ತಾಲೂಕಿನ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಕರೆಯಲಾಗಿದೆ. ಅರ್ಹ ಮಹಿಳಾ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಬಹುದು.

ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು. ಜುಲೈ 13 ರಿಂದ ಆಗಸ್ಟ್ 13ರ ತನಕ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆ 1 ಹುದ್ದೆ ಖಾಲಿ ಇದೆ. ಮಿನಿ ಕಾರ್ಯಕರ್ತೆ 3 ಮತ್ತು 17 ಸಹಾಯಕಿಯರ ಹುದ್ದೆ ಖಾಲಿ ಇವೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18-35 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.

Apply For Anganwadi Worker Assistants Post In Shivamogga

ಅಂಗನವಾಡಿ ಕಾರ್ಯಕತ್ತೆ ಹುದ್ದೆಗೆ ಅರ್ಜಿ ಸಲ್ಲಿಸಲು ಎಸ್‍ಎಸ್‍ಎಲ್‍ಸಿ ಉತ್ತೀರ್ಣರಾಗಿರಬೇಕು. ಸಹಾಯಕಿಯರ ಹುದ್ದೆಗೆ ಕನಿಷ್ಟ 4ನೇ ತರಗತಿ ಗರಿಷ್ಟ 9ನೇ ತರಗತಿ ವಿದ್ಯಾರ್ಹತೆ ನಿಗದಿ ಮಾಡಲಾಗಿದೆ.

ಅಂಗನವಾಡಿ ಕಾರ್ಯಕರ್ತೆ ಹುದ್ದೆ ತ್ಯಾಜವಳ್ಳಿ, ಭಂಡಾರಿ ಕ್ಯಾಂಪ್ ಮಿನಿ, ಜ್ಯೋತಿನಗರ ಮಿನಿ, ಬಿದರೆ ರೈಲ್ವೇಸ್ಟೇಷನ್ ಮಿನಿಯಲ್ಲಿ ಖಾಲಿ ಇದೆ.

ಅಂಗನವಾಡಿ ಸಹಾಯಕಿಯರ ಹುದ್ದೆ ಕಲ್ಲೂರು, ಹೊಳೆಬೆಳಗಲು, ಗಾಜನೂರು-1, ಕುಸ್ಕೂರು, ಮುದುವಾಲ, ಚಿಕ್ಕದಾನವಂದಿ, ದುಮ್ಮಳ್ಳಿ-1, ಸಂತೆಕಡೂರು-2, ದೊಡ್ಡಿಮಟ್ಟಿ, ಘಾಟೆತೆವರು, ತಮ್ಮಡಿಹಳ್ಳಿ, ರಾಜೀವ್‍ಗಾಂಧಿ ಬಡಾವಣೆ, ಮಿಳಘಟ್ಟ-1, ಟಿಪ್ಪುನಗರ-2, ಶಾಂತಿನಗರ-3, ಗುರುಪುರ, ಪುರಲೆಯಲ್ಲಿ ಖಾಲಿ ಇದೆ.

ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ದಿ ಯೋಜನಾ ಕಚೇರಿ, 1ನೇ ತಿರುವು, ಬಸವನಗುಡಿ, ಆಫೀಸರ್ಸ್ ಕ್ಲಬ್ ಪಕ್ಕ, ಶಿವಮೊಗ್ಗ ಇವರನ್ನು ಸಂಪರ್ಕಿಸಬಹುದು.

ಅಭ್ಯರ್ಥಿಗಳು ಆನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ವೆಬ್‍ಸೈಟ್ ವಿಳಾಸ anganawadirecruit.kar.nic.in

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+