ಶಿವಮೊಗ್ಗದಲ್ಲಿ ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಹಾಕಿ...

ಶಿವಮೊಗ್ಗ, ಅಕ್ಟೋಬರ್ 10: ಶಿವಮೊಗ್ಗ ಜಿಲ್ಲೆಯಲ್ಲಿ ಖಾಲಿ ಇರುವ ಯುವ ಪರಿವರ್ತಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಸರ್ಕಾರ ಮತ್ತು ಜನ ಆರೋಗ್ಯ ಕೇಂದ್ರವು ಬೆಂಗಳೂರಿನ ನಿಮಾನ್ಸ್ ಎಪಿಡೀಮಿಯಾಲಜಿ ವಿಭಾಗದ ಸಂಯುಕ್ತಾಶ್ರಯದೊಂದಿಗೆ ಎಲ್ಲಾ ಜಿಲ್ಲೆಗಳಲ್ಲಿ ಯುವ ಸ್ಪಂದನ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಶಿವಮೊಗ್ಗದ ಯುವಸ್ಪಂದನ ಕೇಂದ್ರದಲ್ಲಿನ ಯುವ ಪರಿವರ್ತಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಗೌರವಧನದ ಆಧಾರದ ಮೇಲೆ ಕಾರ್ಯನಿರ್ವಹಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕರ್ನಾಟಕ ರಾಜ್ಯ ಯುವ ನೀತಿ-2012ರನ್ವಯ ನಡೆಯುತ್ತಿರುವ ಈ ಕಾರ್ಯಕ್ರಮದಲ್ಲಿ, ಯುವಜನರ ಮಾನಸಿಕ ಆರೋಗ್ಯಕ್ಕೆ ಪೂರಕ ಸೇವೆಗಳನ್ನು ಒದಗಿಸಲು ಯುವ ಪರಿವರ್ತಕರ ತರಬೇತಿ ನೀಡಲಾಗುವುದು.

ಅರ್ಜಿ ಸಲ್ಲಿಸಲು ಬಯಸುವ ಯುವಕ-ಯುವತಿಯರು 35ರ ವಯೋಮಿತಿಯೊಳಗಿನವರಾಗಿದ್ದು, ಯಾವುದೇ ಪದವಿ ಹಾಗೂ ಮೇಲ್ಪಟ್ಟು ವಿದ್ಯಾರ್ಹತೆಯನ್ನು ಹೊಂದಿರಬೇಕು. ಕನ್ನಡ ಸ್ಪಷ್ಟವಾಗಿ ಮಾತನಾಡಲು ಬರುವಂತಹವರಾಗಿದ್ದು, ಸಂವಹನ ಕಲೆ ಕೌಶಲ್ಯ ಹೊಂದಿರಬೇಕು ಹಾಗೂ ಸಮುದಾಯದಲ್ಲಿ ಕಾರ್ಯನಿರ್ವಹಿಸಿದ ಅನುಭವ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು.

Applications Invited For Yuva Parivartak Jobs In Shivamogga

ಆಸಕ್ತರು ತಮ್ಮ ಪ್ರಸ್ತಾವನೆಯೊಂದಿಗೆ ಮೂಲ ದಾಖಲಾತಿಗಳನ್ನು ಕೂಡಲೇ ನೆಹರೂ ಕ್ರೀಡಾಂಗಣದ ಯುವಸ್ಪಂದನ ಕೇಂದ್ರಕ್ಕೆ ಸಲ್ಲಿಸಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾತ್ರ ಸಂದರ್ಶನಕ್ಕೆ ಬರಲು ಸೂಚಿಸಲಾಗುವುದು. ಮಾಹಿತಿಗಾಗಿ ಮೊ.9353180519ನ್ನು ಸಂಪರ್ಕಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+