ಅಮುಲ್ ಸಂಸ್ಥೆಯಲ್ಲಿ ಕೆಲಸ ಖಾಲಿ ಇದೆ: ಜೂನ್ 2ರೊಳಗೆ ಅರ್ಜಿ ಸಲ್ಲಿಸಿ
ಬೆಂಗಳೂರು, 19: ಪ್ರಪಂಚದ ಅತಿ ದೊಡ್ಡ ಹಾಲು ಸಹಕಾರಿ ಸಂಸ್ಥೆ ಅಮುಲ್ ಸಂಸ್ಥೆ ಅಕೌಂಟ್ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿ ಕರೆದಿದೆ. ಅರ್ಜಿ ಸಲ್ಲಿಸಲು ಜೂನ್ 2 ಕೊನೆಯ ದಿನಾಂಕವಾಗಿದ್ದು ವಾಣಿಜ್ಯ ಪದವಿ ಅಥವಾ ವಾಣಿಜ್ಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದಾಗಿದೆ.
ಹುದ್ದೆಯ ವಿವರಗಳು
ಸಂಸ್ಥೆ ಹೆಸರು: ಅಮುಲ್
ಖಾಲಿ ಇರುವ ಉದ್ದೆಗಳು : 3
ಕೆಲಸದ ಸ್ಥಳ: ಲಕ್ನೊ, ಜಮ್ಶೆಡ್‌ಪುರ್
ವೇತನ ಸೌಲಭ್ಯ: ವರ್ಷಕ್ಕೆ 4,00,000 ದಿಂದ 5 ಲಕ್ಷದವರೆಗೆ
ಆಯ್ಕೆ ವಿಧಾನ: ಲಿಖಿತ ಪರೀಕ್ಷೆ , ವೈದ್ಯಕೀಯ ಪರೀಕ್ಷೆ ಹಾಗೂ ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ವಿದ್ಯಾರ್ಹತೆ; ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ವಾಣಿಜ್ಯ ವಿಭಾಗಗಳಾದ ಬಿಕಾಂ, ಎಂಕಾಂ, ಬಿಬಿಎ ಮತ್ತು ಎಂಬಿಎಗಳಲ್ಲಿ ಪದವಿಗಳನ್ನು ಪ್ರಥಮ ದರ್ಜೆಯಲ್ಲಿ ಪಡೆದಿರಬೇಕು.
ನೇಮಕಾತಿ ಮತ್ತು ಅರ್ಹತಾ ಮಾನದಂಡ
* ಲೆಕ್ಕಪತ್ರ ನಿರ್ವಹಣೆ, ತೆರಿಗೆ, ಹಣಕಾಸು ನಿರ್ವಹಣೆ ಮತ್ತು ಇತರ ಸಂಬಂಧಿತ ಕ್ಷೇತ್ರಗಳಲ್ಲಿ 2 ರಿಂದ ನಾಲ್ಕು ವರ್ಷ ಅನುಭವ ಹೊಂದಿರಬೇಕು.
* ಕಂಪ್ಯೂಟರ್ ಕೌಶಲ್ಯವನ್ನು ಹೊಂದಿರಬೇಕು
* ವಯಸ್ಸು 28 ಮೀರಿರಬಾರದು
* ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರು ಅರ್ಜಿ ಸಲ್ಲಿಸಬಹುದು

ಅರ್ಜಿ ಸಲ್ಲಿಸುವ ವಿಧಾನ
* ಅಮುಲ್ ನೇಮಕಾತಿ ಅಧಿಸೂಚನೆಯನ್ನು ಓದಿಕೊಂಡು, ಸಂಪೂರ್ಣವಾಗಿ ಪರಿಶೀಲಿಸಿ 2022, ಜೂನ್ 2ರೊಳಗೆ ಅರ್ಜಿ ಸಲ್ಲಿಸಬೇಕು.
* ಅಮುಲ್ ಅಧಿಕೃತ ವೆಬ್‌ಸೈಟ್‌ಗೆ ಹೋಗಿ ಅರ್ಜಿ ಹಾಕಬಹುದು
* ಅಧಿಕೃತ ಅಮುಲ್ ವೆಬ್‌ಸೈಟ್‌ನಲ್ಲಿ 2022 ಅಮುಲ್ ನೇಮಕಾತಿ ಅಧಿಸೂಚನೆಯನ್ನು ಕ್ಲಿಕ್ ಮಾಡಿ
* ಸಂಬಂಧಿತ ಪೋಸ್ಟ್ ಅಕೌಂಟ್ ಅಸಿಸ್ಟೆಂಟ್ ಅನ್ನು ಆಯ್ಕೆ ಮಾಡಿ
* ವಿದ್ಯಾರ್ಹತೆಗಳು, ಉದ್ಯೋಗ, ಸ್ಥಳ ಮತ್ತು ಇತರೆ ಎಲ್ಲಾ ವಿವರಗಳನ್ನು, ಅರ್ಜಿ ನಮೂನೆಯಲ್ಲಿ ಅಗತ್ಯವಿರುವ ಎಲ್ಲಾ ವಿವರಗಳನ್ನು ಅಪ್‌ಡೇಟ್ ಮಾಡಿ ಅರ್ಜಿ ಸಲ್ಲಿಸಿ.