ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾದಲ್ಲಿ 156 ಹುದ್ದೆಗಳಿವೆ

ಬೆಂಗಳೂರು, ಸೆ.4: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ) ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ 2022-23ನೇ ಸಾಲಿನ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಜ್ಯೂನಿಯರ್ ಸಹಾಯಕ ಹಾಗೂ ಹಿರಿಯ ಸಹಾಯಕ ಹುದ್ದೆಗಳಿಗೆ ಆಯ್ಕೆಯಾಗ ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 30, 2022 ರೊಳಗೆ ಅರ್ಜಿ ಸಲ್ಲಿಸುವಂತೆ ಕೋರಲಾಗಿದೆ.

ಸಂಸ್ಥೆಯ ಹೆಸರು: ಏರ್ ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(ಎಎಐ)
ಹುದ್ದೆ: Junior Assistant and Senior Assistant
ಒಟ್ಟು ಹುದ್ದೆ: 156
ಉದ್ಯೋಗ ಸ್ಥಳ: ಕರ್ನಾಟಕ, ತಮಿಳುನಾಡು,ಆಂಧ್ರಪ್ರದೇಶ,ತೆಲಂಗಾಣ, ಕೇರಳ, ಪಾಂಡಿಚೇರಿ ಹಾಗೂ ಲಕ್ಷದೀಪ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 30, 2022

ಹುದ್ದೆಗಳು-ಹುದ್ದೆಗಳ ಸಂಖ್ಯೆ
ಜ್ಯೂನಿಯರ್ ಸಹಾಯಕ (Fire Service): 132 ಹುದ್ದೆ
ಜ್ಯೂನಿಯರ್ ಸಹಾಯಕ (ಕಚೇರಿ): 10 ಹುದ್ದೆ
ಹಿರಿಯ ಸಹಾಯಕ (ಅಕೌಂಟ್ಸ್): 13 ಹುದ್ದೆ
ಹಿರಿಯ ಸಹಾಯಕ (Official Language): 1 ಹುದ್ದೆ

AAI Recruitment 2022 Apply for 156 Assistant and other posts
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಡಿಪ್ಲೋಮಾ, ಪದವಿ.

ಜ್ಯೂನಿಯರ್ ಸಹಾಯಕ (Fire Service): ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ 10ನೇ ತರಗತಿ ಮೂರುವರ್ಷಗಳ ರೆಗ್ಯುಲರ್ ಡಿಪ್ಲೋಮಾ ಮೆಕ್ಯಾನಿಕಲ್/ಆಟೋಮೊಬೈಲ್/ಅಗ್ನಿಶಾಮಕ. 12ನೇ ತರಗತಿಯಲ್ಲಿ ಹಾಗೂ ಡಿಪ್ಲೋಮಾ ಶೇ50ರಷ್ಟು ಅಂಕಗಳೊಂದಿಗೆ ಪಾಸಾಗಿರಬೇಕು.

ಜ್ಯೂನಿಯರ್ ಸಹಾಯಕ (ಕಚೇರಿ): ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಇಂಗ್ಲೀಷ್ ಟೈಪಿಂಗ್ 30 wpm, ಹಿಂದಿ 25 wpm.
ಹಿರಿಯ ಸಹಾಯಕ (ಅಕೌಂಟ್ಸ್): ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಬಿ.ಕಾಂ ಪದವಿ. 3 ರಿಂದ 6 ತಿಂಗಳುಗಳ ಕಾಲ ಕಂಪ್ಯೂಟರ್ ತರಬೇತಿ.

ಹಿರಿಯ ಸಹಾಯಕ (Official Language): ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ, ಹಿಂದಿ ಸ್ನಾತಕೋತ್ತರ ಪದವಿ, ಇಂಗ್ಲೀಷ್ ಭಾಷಾ ವಿಷಯ ಪಠ್ಯದಲ್ಲಿರಬೆಕು.

ವಯೋಮಿತಿ:
ಎಎಐ ನೇಮಕಾತಿ ಅಧಿಸೂಚನೆಯಂತೆ ಕನಿಷ್ಠ 18 ರಿಂದ 30 ವರ್ಷಗಳ ತನಕ ವಯೋಮಿತಿಯಿದೆ(ಆಗಸ್ಟ್ 25ರಂತೆ)

ಎಸ್ ಸಿ/ ಎಸ್ಟಿ/ ಮಾಜಿಯೋಧ: ಗರಿಷ್ಠ ವಯೋಮಿತಿಯಲ್ಲಿ 5 ವರ್ಷ ವಿನಾಯತಿ, ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ

ನೇಮಕಾತಿ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಟೈಪಿಂಗ್ ಟೆಸ್ಟ್, ದೈಹಿಕ ಸಾಮರ್ಥ್ಯ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ

ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಮಹಿಳಾ ಅಭ್ಯರ್ಥಿ: 170 ರು
ಇತರೆ ಎಲ್ಲಾ ಅಭ್ಯರ್ಥಿ: 1000ರು
ಅಂಗವಿಕಲ/ ಎಎಐ ಅಪ್ರೆಂಟಿಸ್: ಯಾವುದೇ ಶುಲ್ಕವಿಲ್ಲ

ಅಪ್ರೆಂಟಿಸ್ ಕಾಯಿದೆ 1961 ರ ಪ್ರಕಾರ, ಅಂಗವಿಕಲ ವ್ಯಕ್ತಿಗಳು ಮತ್ತು AAI ನಲ್ಲಿ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಅಪ್ರೆಂಟಿಸ್‌ಗಳಿಗೆ ವಿನಾಯಿತಿ ನೀಡಲಾಗುತ್ತದೆ.

ಪ್ರಮುಖ ದಿನಾಂಕ:
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 30/09/2022

ಅರ್ಜಿ ಸಲ್ಲಿಸುವುದು ಹೇಗೆ:
ಎಎಐ ನ ಅಧಿಕೃತ ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಎಎಐ ನ ಅಧಿಕೃತ ವೆಬ್ ಸೈಟ್ aai.aero ನಲ್ಲಿಉದ್ಯೋಗ ಕುರಿತ ಮಾಹಿತಿಗಾಗಿ ಕ್ಲಿಕ್ ಮಾಡಿ
ಮುಖಪುಟದಲ್ಲಿ ಲಭ್ಯವಿರುವ ಸಂಬಂಧಪಟ್ಟ ಹುದ್ದೆಯ ಲಿಂಕ್ ಮೇಲೆ ಕ್ಲಿಕ್ ಮಾಡಿ
ಅರ್ಜಿ ನಮೂನೆಯನ್ನು ಭರ್ತಿ ಮಾಡಿ
ಅರ್ಜಿ ಶುಲ್ಕವನ್ನು ಪಾವತಿಸಿ
ಫಾರ್ಮ್ ಅನ್ನು ಸಲ್ಲಿಸಿ ಮತ್ತು ಸ್ವೀಕೃತಿ ಪತ್ರವನ್ನು ಸೇವ್ ಮಾಡಿಕೊಳ್ಳಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+