ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉದ್ಯೋಗಾಕಾಂಕ್ಷಿಗಳಿಗೆ ಬಂಪರ್‌: ಸರ್ಕಾರದಿಂದ 400 ಎಂಜಿನಿಯರ್‌ಗಳ ನೇಮಕ

ನೀರಾವರಿ ಇಲಾಖೆಯು ಕನಿಷ್ಠ 1,000 ಎಂಜಿನಿಯರ್‌ಗಳ ನೇಮಕಾತಿಗೆ ಅನುಮತಿ ಕೋರಿ ಪ್ರಸ್ತಾವನೆಯನ್ನು ಕಳುಹಿಸಿದ್ದು, ಅದರೆ ಆರ್ಥಿಕ ಇಲಾಖೆಯು 400 ಮಂದಿಯನ್ನು ನೇಮಿಸಿಕೊಳ್ಳಲು ಅನುಮತಿ ನೀಡಿದೆ.

|
Google Oneindia Kannada News

ಬೆಂಗಳೂರು, ಫೆಬ್ರವರಿ 4: ರಾಜ್ಯದಲ್ಲಿ ನಡೆಯುತ್ತಿರುವ ನೀರಾವರಿ ಯೋಜನೆಗಳನ್ನು ತ್ವರಿತವಾಗಿ ಮುಗಿಸಲು ಗುತ್ತಿಗೆ ಆಧಾರದ ಮೇಲೆ 400 ಎಂಜಿನಿಯರ್‌ಗಳ ನೇರ ನೇಮಕಾತಿಗೆ ಹಣಕಾಸು ಇಲಾಖೆ ಅನುಮತಿ ನೀಡಿದೆ ಎಂದು ಜಲಸಂಪನ್ಮೂಲ ಸಚಿವ ಗೋವಿಂದ್ ಕಾರಜೋಳ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕಾರಜೋಳ, ನೀರಾವರಿ ಇಲಾಖೆಯು ಕನಿಷ್ಠ 1,000 ಎಂಜಿನಿಯರ್‌ಗಳ ನೇಮಕಾತಿಗೆ ಅನುಮತಿ ಕೋರಿ ಪ್ರಸ್ತಾವನೆಯನ್ನು ಕಳುಹಿಸಿದ್ದು, ಅದರೆ ಆರ್ಥಿಕ ಇಲಾಖೆಯು 400 ಮಂದಿಯನ್ನು ನೇಮಿಸಿಕೊಳ್ಳಲು ಅನುಮತಿ ನೀಡಿದೆ. ಈ 400 ಹುದ್ದೆಗಳಲ್ಲಿ 300 ಸಹಾಯಕ ಎಂಜಿನಿಯರ್‌ಗಳು ಮತ್ತು 100 ಕಿರಿಯ ಎಂಜಿನಿಯರ್‌ಗಳು ಸೇರಿದ್ದಾರೆ ಎಂದು ಅವರು ಹೇಳಿದರು.

ಕಲ್ಯಾಣ-ಕರ್ನಾಟಕ ಭಾಗದ ನೇರ ನೇಮಕಾತಿ, ಸುತ್ತೋಲೆಕಲ್ಯಾಣ-ಕರ್ನಾಟಕ ಭಾಗದ ನೇರ ನೇಮಕಾತಿ, ಸುತ್ತೋಲೆ

ಹಲವಾರು ವರ್ಷಗಳಿಂದ ಆನ್ ಸೈಟ್ ಎಂಜಿನಿಯರ್‌ಗಳ ಕೊರತೆಯಿಂದಾಗಿ ಅನುಷ್ಠಾನಗೊಂಡ ಯೋಜನೆಗಳ ಮೇಲ್ವಿಚಾರಣೆಯಲ್ಲಿ ವಿಳಂಬವಾಗುತ್ತಿದೆ. ಕೇಂದ್ರ ಸರ್ಕಾರವು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಗಳನ್ನು ಮಂಜೂರು ಮಾಡಿರುವುದು ಮತ್ತು ಕೃಷ್ಣಾ ಮೇಲ್ದಂಡೆ ಯೋಜನೆ ಮತ್ತು ಕಳಸಾ-ಬಂಡೂರಿಯಂತಹ ಇತರ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮತಿ ಪಡೆದಿರುವುದರಿಂದ ಇಲಾಖೆಗೆ ಸಿವಿಲ್ ಎಂಜಿನಿಯರ್‌ಗಳ ಅವಶ್ಯಕತೆಯಿದೆ ಎಂದು ಸಚಿವರು ವಿವರಿಸಿದರು.

400 Engineers Direct Recruitment by Irrigation Department

ಇದರಿಂದ ಪರಿಸ್ಥಿತಿಯ ತುರ್ತು ಅನಿವಾರ್ಯ ಅರಿತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೆಲ ಸಮಯದ ಹಿಂದೆ ನೀರಾವರಿ ಇಲಾಖೆಯ ಸಭೆಯಲ್ಲಿ ಪರಿಶೀಲನೆ ನಡೆಸಿದ ನಂತರ ಎಂಜಿನಿಯರ್‌ಗಳ ನೇಮಕಾತಿ ಪ್ರಸ್ತಾವನೆಯನ್ನು ತೆರವುಗೊಳಿಸುವಂತೆ ಹಣಕಾಸು ಇಲಾಖೆಗೆ ಸೂಚಿಸಿದ್ದರು. ಒಂದು ವರ್ಷದಲ್ಲಿ ಅಪ್ಪರ್‌ ಭದ್ರಾ ಯೋಜನೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. 74 ಲಕ್ಷಕ್ಕೂ ಹೆಚ್ಚು ಜನರು ಇದರ ನೇರ ಪ್ರಯೋಜನ ಪಡೆಯಲಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ತಿಳಿಸಿದರು.

ನರೇಗಾ ಯೋಜನೆ ಬಡ, ಶ್ರಮಿಕರಿಗೆ ಒಂದು ವರದಾನನರೇಗಾ ಯೋಜನೆ ಬಡ, ಶ್ರಮಿಕರಿಗೆ ಒಂದು ವರದಾನ

ರಾಜ್ಯದಲ್ಲಿ ಬೃಹತ್‌ ನೀರಾವರಿ ಯೋಜನೆಗಳು ಹಲವು ಹಂತಗಳಲ್ಲಿ ಜಾರಿಯಾಗುತ್ತಿವೆ. ಹೀಗಾಗಿ ಎಂಜಿನಿಯರ್‌ಗಳ ಅಗತ್ಯ ತುಂಬಾ ಇದೆ. ಇಲಾಖೆಯಲ್ಲಿ 1000 ಎಂಜಿನಿಯರ್‌ಗಳ ಹುದ್ದೆ ಖಾಲಿ ಇದೆ. ಎಂಜಿನಿಯರ್‌ಗಳನ್ನು ತ್ವರಿತವಾಗಿ ನೇಮಿಸಿಕೊಳ್ಳಬೇಕಿರುವುದರಿಂದ ಕೆಪಿಎಸ್‌ಸಿ ಇಲ್ಲವೇ ಯಾವುದೇ ನೇಮಕಾತಿ ಆಯೋಗಕ್ಕೆ ಪ್ರಕ್ರಿಯೆಯನ್ನು ಕೊಡದೆ ಇಲಾಖೆಯಿಂದಲೇ ನೇರವಾಗಿ ನೇಮಕಾರಿ ಮಾಡಿಕೊಳ್ಳಲಾಗುತ್ತಿದೆ.

ರಾಜ್ಯ ಸರ್ಕಾರದಲ್ಲಿ ಖಾಲಿ ಇದ್ದ ಶೇ.90ರಷ್ಟು ಬ್ಯಾಕ್‌ಲಾಗ್‌ ಹುದ್ದಗಳನ್ನು ಭರ್ತಿ ಮಾಡಿಕೊಳ್ಳಲಾಗಿದೆ. ಮೆರಿಟ್‌ ಆಧಾರದಲ್ಲೇ ಈ ನೇಮಕಾತಿಗಳು ನಡೆದಿದೆ ಎಂದು ಅವರು ತಿಳಿಸಿದ್ದಾರೆ.

English summary
Water Resources Minister Govind Karajola has said that the Finance Department has given permission for direct recruitment of 400 engineers on contract basis for speedy completion of ongoing irrigation projects in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X