19952 RPF ಕಾನ್‌ ಸ್ಟೆಬಲ್ ನೇಮಕಾತಿ ಸುಳ್ಳು: ನೈರುತ್ಯ ರೈಲ್ವೆ ಸ್ಪಷ್ಟನೆ

ಹುಬ್ಬಳ್ಳಿ, ಸೆಪ್ಟೆಂಬರ್ 27 : 19,952 ಆರ್‌.ಪಿ.ಎಫ್‌ ಕಾನ್‌ ಸ್ಟೆಬಲ್ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ ಎಂಬ ಅಧಿಸೂಚನೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವುದು ನಕಲಿಯಾಗಿದೆ ಎಂದು ನೈರುತ್ಯ ರೈಲ್ವೆ ಸ್ಪಷ್ಟಪಡಿಸಿದೆ..

ಮುಗ್ಧ ಅಭ್ಯರ್ಥಿಗಳನ್ನು ವಂಚಿಸುವ ದೃಷ್ಟಿಯಿಂದ ಕಿಡಿಗೇಡಿಗಳು ನಕಲಿ ಅಧಿಸೂಚನೆ ಹೊರಡಿಸಿದ್ದು, ಇಂತಹ ಪೋಸ್ಟ್‌ ಗಳನ್ನು ನಂಬಬೇಡಿ ಎಂದು ನೈರುತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಇ. ವಿಜಯಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

19952 posts of RPF constables recruitment notification fake-south western railway confirm

'01/2017 ಸಂಖ್ಯೆಯ ಈ ನಕಲಿ ಅಧಿಸೂಚನೆ ಹೊರಡಿಸಲಾಗಿದ್ದು, ಇದರಲ್ಲಿ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆ, ನೇಮಕಾತಿ ವಿಧಾನ, , ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್‌ 14 ಎಂದು ನಮೂದಿಸಲಾಗಿದೆ.

ಆದರೆ, ಈ ಅಧಿಸೂಚನೆಯನ್ನು ಭದ್ರತಾ ನಿರ್ದೇಶನಾಲಯವಾಗಲಿ, ರೈಲ್ವೆ ಮಂಡಳಿಯಾಗಲಿ ಅಥವಾ ರೈಲ್ವೆ ವಲಯದ ಮುಖ್ಯ ಭದ್ರತಾ ಆಯುಕ್ತರಾಗಲಿ ಹೊರಡಿಸಿಲ್ಲ' ಎಂದು ಅವರು ಸ್ಪಷ್ಟಪಡಿಸಿದ್ದಾರೆ.

19952 posts of RPF constables recruitment notification fake-south western railway confirm

ರೈಲ್ವೆ ಹಸರಿನಲ್ಲಿ ನಕಲಿ ಅಧಿಸೂಚನೆ ಹೊರಡಿಸಿರುವ ವ್ಯಕ್ತಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ವಿಜಯಾ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+