ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ಕರ್ನಾಟಕ ತಾಪಮಾನ ವರದಿ: ಯಾವ ಜಿಲ್ಲೆಯಲ್ಲಿ ಚಳಿ ಹೆಚ್ಚು

By ಒನ್ಇಂಡಿಯಾ ಡೆಸ್ಕ್
|
Google Oneindia Kannada News

ಬೆಂಗಳೂರು, ಡಿಸೆಂಬರ್ 29: ರಾಜ್ಯದ ಹಲವು ಭಾಗಗಳಲ್ಲಿ ಹೊಸ ವರ್ಷಾಚರಣೆಯ ಸಿದ್ಧತೆ ಜೊತೆಗೆ ಚಳಿ ತೀವ್ರತೆ ಹೆಚ್ಚಾಗುತ್ತಿದೆ. ಡಿಸೆಂಬರ್ ಅಂತ್ಯದವರೆಗೂ ಚಳಿ ತೀವ್ರತೆ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೀದರ್, ವಿಜಯಪುರ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಚಳಿಯು ಹೆಚ್ಚಾಗಿ ಸಾಮಾನ್ಯಕ್ಕಿಂತ 3 ರಿಂದ 5 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಚಳಿಯು ಸಹಜ ತಾಪಮಾನಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಆದರೆ, ಇಂದು ಮಂಗಳೂರು (31 ಡಿಗ್ರಿ ಸೆಲ್ಸಿಯಸ್) ಕಾರವಾರದಲ್ಲಿ 33.2 ಡಿಗ್ರಿ ತಾಪಮಾನ ದಾಖಲಿದೆ.

ಆದರೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಡಿಸೆಂಬರ್ 22, 2020 ರಂದು ಬೆಂಗಳೂರಿನಲ್ಲಿ ಕನಿಷ್ಠ ಕನಿಷ್ಠ 14.20 ದಾಖಲಾಗಿತ್ತು. ಹಾಸನ ಜಿಲ್ಲೆಯಲ್ಲಿ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.

ಡಿ.29ರ ತಾಪಮಾನ ವರದಿ: ಕರ್ನಾಟಕದಲ್ಲಿ ಮೈ ಕೊರೆಯುವ ಚಳಿಡಿ.29ರ ತಾಪಮಾನ ವರದಿ: ಕರ್ನಾಟಕದಲ್ಲಿ ಮೈ ಕೊರೆಯುವ ಚಳಿ

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ 27 ಮತ್ತು ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಮಲೆನಾಡು, ಉತ್ತರ ಕರ್ನಾಟಕ ಭಾಗದಲ್ಲಂತೂ ಮಂಜು ಕವಿದ ಚಳಿಗೆ ಜನರು ತತ್ತರಿಸಿದ್ದಾರೆ. ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತಾಪಮಾನ ತಗ್ಗಿಲ್ಲ ಹಾಗೂ ಮೈ ನಡುಗುವಷ್ಟು ಚಳಿ ಉಂಟಾಗಿಲ್ಲ, ಚೆನ್ನಾಗಿ ಬಿಸಿಲು ಜೊತೆಗೆ ಗಾಳಿ ಬೀಸುತ್ತಿದೆ.

ಕರ್ನಾಟಕದಲ್ಲಿ ದಾಖಲೆಯ ಚಳಿ

ಕರ್ನಾಟಕದಲ್ಲಿ ದಾಖಲೆಯ ಚಳಿ

ಬೆಂಗಳೂರು, ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲೂ ದಾಖಲೆಯ ಚಳಿ ಉಂಟಾಗಿದೆ. ಇನ್ನೆರಡು ದಿನಗಳ ಕಾಲ ರಾಜ್ಯಾದ್ಯಂತ ಚಳಿ ಗಾಳಿ ಹೆಚ್ಚಾಗಲಿದೆ ಎಂಬ ವರದಿ ಬಂದಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಬೆಳಗ್ಗೆ ಸುಮಾರು 9 ಗಂಟೆವರೆಗೂ ದಟ್ಟವಾದ ಮಂಜು ಆವರಿಸಿ ಮಲೆನಾಡಿನ ಅನುಭವ ನೀಡುತ್ತಿದೆ. ಬಳ್ಳಾರಿ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಮತ್ತು ಗದಗ ಜಿಲ್ಲೆಗಳಲ್ಲಿ ಆವರಿಸುತ್ತಿರುವ ಮಂಜಿನಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಬೆಳೆ ಹಾಳಾಗುವ ಭಯದಲ್ಲಿದ್ದಾರೆ. ಮಧ್ಯಾಹ್ನದ ನಂತರ ಎಂದಿನಂತೆ ಸೂರ್ಯದೇವ ಅಬ್ಬರಿಸಲಿದ್ದಾನೆ.

ರಾಜ್ಯದ ನಗರಗಳ ಹವಾಮಾನ ವರದಿ ಹೀಗಿದೆ

ರಾಜ್ಯದ ನಗರಗಳ ಹವಾಮಾನ ವರದಿ ಹೀಗಿದೆ

ರಾಜ್ಯದ ನಗರಗಳ ಹವಾಮಾನ ವರದಿ ಹೀಗಿದೆ: ಬೆಂಗಳೂರು 27-15, ಮೈಸೂರು 29-16, ಚಾಮರಾಜನಗರ 29-16, ರಾಮನಗರ 29-16, ಮಂಡ್ಯ 27-20, ಬೆಂಗಳೂರು ಗ್ರಾಮಾಂತರ 27-15, ಚಿಕ್ಕಬಳ್ಳಾಪುರ 26-14, ಕೋಲಾರ 27-16, ಹಾಸನ 28-14, ಚಿಕ್ಕಮಗಳೂರು 28-14, ದಾವಣಗೆರೆ 31-17, ಶಿವಮೊಗ್ಗ 32-17, ಕೊಡಗು 29-13, ತುಮಕೂರು 30-19, ಉಡುಪಿ 31-22, ಮಂಗಳೂರು 32-22 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಉತ್ತರ ಕನ್ನಡ 32-17

ಉತ್ತರ ಕನ್ನಡ 32-17

ಉತ್ತರ ಕನ್ನಡ 32-17, ಧಾರವಾಡ 30-16, ಹಾವೇರಿ 32-17,. ಹುಬ್ಬಳ್ಳಿ 31-16, ಬೆಳಗಾವಿ 29-15, ಗದಗ 30-16, ಕೊಪ್ಪಳ 29-17, ವಿಜಯಪುರ 30-17, ಬಾಗಲಕೋಟ 31-17, ಕಲಬುರಗಿ 29-17, ಬೀದರ್ 27-15, ಯಾದಗಿರಿ 29-17, ರಾಯಚೂರು 30-17, ಬಳ್ಳಾರಿ 31-18 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಕರ್ನಾಟಕದಲ್ಲಿ ಮೈ ನಡುಗುವ ಚಳಿ

ಕರ್ನಾಟಕದಲ್ಲಿ ಮೈ ನಡುಗುವ ಚಳಿ

ಕರ್ನಾಟಕದಲ್ಲಿ ಮೈ ನಡುಗುವ ಚಳಿ ಕರ್ನಾಟಕದಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಕೊಡಗು, ಶಿವಮೊಗ್ಗ, ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಚಳಿ ವಿಪರೀತ ಹೆಚ್ಚಾಗಿದೆ. ಸದಾ ಬಿಸಿಲಿನಿಂದ ಕೂಡಿರುವ ಉತ್ತರ ಕರ್ನಾಟಕದಲ್ಲೂ ಚಳಿ ವಿಪರೀತವಾಗಿದೆ. ಉತ್ತರ ಕರ್ನಾಟಕದ ಧಾರವಾಡ, ಹುಬ್ಬಳ್ಳಿ, ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ಇನ್ನೂ 3 ದಿನ ಚಳಿ ಹೆಚ್ಚಾಗಲಿದೆ.

Recommended Video

IndiGo ವಿಮಾನದಲ್ಲಿ ಕೇಳಿಬಂತು ತುಳುಭಾಷೆಯಲ್ಲಿ ಅನೌನ್ಸ್ಮೆಂಟ್ | Oneindia Kannada

English summary
Infographics: Weather and Temperature forecast as on December 29: Dry weather will prevail over Karnataka this week, Cold waves grips Across South interior part says IMD report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X