ರಾಯಚೂರು : 2013ರ ಚುನಾವಣೆ ಫಲಿತಾಂಶ

ರಾಯಚೂರು, ಮಾರ್ಚ್ 01 : ಸೂರ್ಯ ನಗರಿ, ಬಿಸಿಲ ನಗರಿ ಎಂದೆಲ್ಲಾ ಹೆಸರು ಗಳಿಸಿದೆ ಗಡಿನಾಡು ರಾಯಚೂರು. ಕೃಷ್ಣ ಮತ್ತು ತುಂಗಭದ್ರಾ ನದಿಗಳ ತಟದಲ್ಲಿರುವ ರಾಯಚೂರು ಹೈದರಾಬಾದ್-ಕರ್ನಾಟಕ ಭಾಗದ ಪ್ರಮುಖ ಜಿಲ್ಲೆ.

ಭತ್ತದ ಮಿಲ್, ಹತ್ತಿಯ ಮಿಲ್, ರಸಗೊಬ್ಬರ ಹಾಗೂ ರಾಸಾಯನಿಕ ವಸ್ತುಗಳ ಕೈಗಾರಿಕೆಗಳು ಜಿಲ್ಲೆಯಲ್ಲಿವೆ. ಉಷ್ಣವಿದ್ಯುತ್ ಸ್ಥಾವರವನ್ನು ಜಿಲ್ಲೆ ಹೊಂದಿದ್ದು, ನಾಡಿಗೆ ಬೆಳಕು ನೀಡು ಕಾರ್ಯವನ್ನು ಮಾಡುತ್ತಿದೆ.

2011ರ ಜನಗಣತಿ ಪ್ರಕಾರ ಜಿಲ್ಲೆಯ ಜನಸಂಖ್ಯೆ 2,34,073. 2ವೈದ್ಯಕೀಯ ಕಾಲೇಜು, ಕೃಷಿ ವಿಶ್ವವಿದ್ಯಾಲಯಗಳನ್ನು ಜಿಲ್ಲೆ ಒಳಗೊಂಡಿದೆ. ರಾಜಕೀಯವಾಗಿಯೂ ಜಿಲ್ಲೆ ಭಾರೀ ಮಹತ್ವ ಪಡೆದುಕೊಂಡಿದೆ.

ರಾಯಚೂರು, ದೇವದುರ್ಗ, ಮಸ್ಕಿ, ರಾಯಚೂರು ಗ್ರಾಮಾಂತರ, ಲಿಂಗಸಗೂರು, ಮಾನ್ವಿ, ಸಿಂಧನೂರು ವಿಧಾನಸಭಾ ಕ್ಷೇತ್ರಗಳನ್ನು ರಾಯಚೂರು ಒಳಗೊಂಡಿದೆ.

2013ರ ಚುನಾವಣೆಯಲ್ಲಿ ರಾಯಚೂರು ಜಿಲ್ಲೆಯಲ್ಲಿ 2ಕ್ಷೇತ್ರಗಳಲ್ಲಿ ಜೆಡಿಎಸ್ ಪಕ್ಷ ಜಯಗಳಿಸಿತ್ತು. ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್, ಎರಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯಗಳಿಸಿದ್ದರು. ಆದರೆ, ಜೆಡಿಎಸ್‌ ಪಕ್ಷದ ಇಬ್ಬರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಇದರಿಂದಾಗಿ ಈ ಬಾರಿಯ ಚುನಾವಣೆ ಕುತೂಹಲಕ್ಕೆ ಕಾರಣವಾಗಿದೆ.

Raichur district 2013 assembly elections result
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+