Infographics: ನ.04ರಂದು ಯಾವ ಪಟ್ಟಣದಲ್ಲಿ ಪೆಟ್ರೋಲ್ ಬೆಲೆ ಎಷ್ಟು ಇಳಿಕೆ?

ಬೆಂಗಳೂರು, ನವೆಂಬರ್ 04: ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಬುಧವಾರ ಆದೇಶ ಹೊರಡಿಸಿದೆ. ಹಾಗೆಯೇ ರಾಜ್ಯ ಸರ್ಕಾರವು ಕೂಡ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದೆ.

ಕೇಂದ್ರ ಸರಕಾರ ಪೆಟ್ರೋಲ್‌ ಮೇಲಿನ ಅಬಕಾರಿ ಸುಂಕವನ್ನು 5 ರೂ., ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು 10 ರೂ. ಇಳಿಕೆ ಮಾಡಿದ್ರೆ, ಇದರ ಬೆನ್ನಿಗೆ ರಾಜ್ಯ ಸರಕಾರವೂ ಡೀಸೆಲ್‌ ಮತ್ತು ಪೆಟ್ರೋಲ್ ದರವನ್ನು ತಲಾ 7 ರೂ. ಕಡಿತಗೊಳಿಸಲು ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ಟೀಟ್ ಮೂಲಕ ತಿಳಿಸಿದ್ದರು.

ತಮಿಳುನಾಡಿನ ಬಜೆಟ್‌ನಲ್ಲಿ ಪೆಟ್ರೋಲ್ ಮೇಲಿನ ರಾಜ್ಯ ತೆರಿಗೆಯನ್ನು ಪ್ರತಿ ಲೀಟರ್ ಮೇಲೆ 3 ರು ತಗ್ಗಿಸಿತ್ತು. ತಮಿಳುನಾಡಿನಂತೆ ಪುದುಚೇರಿ ಸರ್ಕಾರ ಕೂಡಾ ಪೆಟ್ರೋಲ್ ಮೇಲಿನ ತೆರಿಗೆ ತಗ್ಗಿಸಿದೆ. ಇದರಿಂದ ಪ್ರತಿ ಲೀಟರ್ ಮೇಲೆ ಸರಾಸರಿ 3 ರು ತಗ್ಗಿತ್ತು. ಹೀಗಾಗಿ ಇತರೆ ರಾಜ್ಯಗಳಿಗೆ ಹೋಲಿಸಿದರೆ ಇಲ್ಲಿ ಬೆಲೆ ಕಡಿಮೆಯಿದೆ.

Petrol Rates Decreased On November 04 Across Karnataka

ಜಾಗತಿಕವಾಗಿ ಕಚ್ಚಾತೈಲ ಬೆಲೆ ತೀವ್ರ ಏರಿಳಿತ ನಡುವೆಯೂ ಇಂಧನ ದರದಲ್ಲಿ ವ್ಯತ್ಯಾಸ ಕಂಡು ಬಂದಿರಲಿಲ್ಲ. ಪ್ರತಿ ಬ್ಯಾರೆಲ್ ಬೆಲೆ 66 ಯುಎಸ್ ಡಾಲರ್‌ಗಿಂತಲೂ ಕಡಿಮೆ ಮೊತ್ತಕ್ಕೂ ಕುಸಿದಿತ್ತು. ಆದರೆ, ನಂತರ ಚೇತರಿಸಿಕೊಂಡು 85 ಪ್ಲಸ್ ಡಾಲರ್ ಮೇಲಕ್ಕೇರಿತ್ತು.

ಬೆಲೆ ಇಳಿಕೆ ಮಾಡಿದ ನಂತರ ಇಂದು ಗುರುವಾರ ದೇಶದ ಪ್ರಮುಖ ನಗರಗಳಲ್ಲಿನ ತೈಲ ಬೆಲೆಯ ಬಗ್ಗೆ ನೋಡೋದಾದರೆ ಬೆಂಗಳೂರಿನಲ್ಲಿ ನಿನ್ನೆ 113.93ರೂ. ಇದ್ದ ಪೆಟ್ರೋಲ್‌ ದರ ಇಂದು ಬೆಳಗ್ಗಿನ ವೇಳೆಗೆ 6.29 ರೂ. ಪೈಸೆ ಕಡಿಮೆಯಾಗಿ 107.64 ರೂಪಾಯಿಗೆ ಇಳಿದಿದೆ. ಅಂತೆಯೇ ಪಟ್ರೋಲ್‌ ದರ ನಿನ್ನೆ 104.50ರೂ., ಇದ್ದರೆ, ಇಂದು ಕೂಡ ಅದೇ ಬೆಲೆ ಮುಂದುವರಿದಿದೆ.

ಎಲ್ಲಾ ರಾಜ್ಯಗಳಲ್ಲಿನ ಸೆಸ್, ವ್ಯಾಟ್ ಅಧಿಕವಾಗಿರುವುದರಿಂದ ಯಾವ ರಾಜ್ಯದಲ್ಲೂ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಮೇಲೆ 110 ರು ಗಿಂತ ತಗ್ಗಿರಲಿಲ್ಲ. ಈಗ 9-10 ರಾಜ್ಯಗಳಲ್ಲಿ ಇಂದು ಬೆಲೆ ಇಳಿಕೆಯಾಗಲಿದೆ. ಮೇ 4ರಿಂದ ಇಂದಿನ ತನಕ ಪೆಟ್ರೋಲ್ ಒಟ್ಟು 56 ಬಾರಿ ಹಾಗೂ ಡೀಸೆಲ್ 51 ಬಾರಿ ಏರಿಕೆಯಾಗಿದೆ. ಮೇ 4ರಿಂದ ಪೆಟ್ರೋಲ್ 13 ರು ಪ್ರತಿ ಲೀಟರ್ ಹಾಗೂ ಡೀಸೆಲ್ 11 ರು ಪ್ರತಿ ಲೀಟರ್ ಆಗಿದೆ.

Petrol Rates Decreased On November 04 Across Karnataka

ದೇಶದಲ್ಲಿ ನಿರಂತರವಾಗಿ ಹೆಚ್ಚಳ ಕಾಣುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸದ್ಯಕ್ಕೆ ಸ್ವಲ್ಪ ಮಟ್ಟಿಗೆ ಇಳಿಕೆಯಾಗಿದೆ. ಪೂರೈಕೆ ಹಾಗೂ ಬೇಡಿಕೆಗೆ ಸಂಬಂಧಿಸಿದ ಸಮಸ್ಯೆಗಳ ವಿಚಾರದಲ್ಲಿ ವಿವಿಧ ತೈಲ ರಫ್ತು ದೇಶಗಳೊಂದಿಗೆ ಭಾರತ ಸರ್ಕಾರ ಮಾತುಕತೆ ನಡೆಸುತ್ತಿದೆ. ಆದರೆ ದರದಲ್ಲಿ ಇಲ್ಲಿಯವರೆಗೆ ಯಾವುದೇ ಇಳಿಕೆಯಾಗಿರಲಿಲ್ಲ.

ಕಚ್ಚಾ ತೈಲದ ಬೆಲೆ ಕಡಿಮೆ ಇದ್ದಾಗಲೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆರಿಗೆ ಕಡಿತದ ಔದಾರ್ಯ ಪ್ರದರ್ಶಿಸಿರಲಿಲ್ಲ. ಪೆಟ್ರೋಲ್ ಹಾಗೂ ಡೀಸೆಲ್ ದರಗಳು ರಾಜ್ಯಗಳ ಸುಂಕ ಹಾಗೂ ತೆರಿಗೆಗಳ ಮೇಲೆ ಅವಲಂಬಿತವಾಗಿರುತ್ತದೆ. ಹೀಗಾಗಿ ಪ್ರದೇಶದಿಂದ ಪ್ರದೇಶಕ್ಕೆ ತೈಲ ದರದಲ್ಲಿ ಬದಲಾವಣೆ ಇರುತ್ತದೆ.

ನವದೆಹಲಿ
ಪೆಟ್ರೋಲ್: 103.97 ರೂ. ಡೀಸೆಲ್: 98.42 ರೂ

ಪಶ್ಚಿಮ ಬಂಗಾಳದ ಕೋಲ್ಕತ್ತಾ
ಪೆಟ್ರೋಲ್ : 104.67 ರೂ, ಡೀಸೆಲ್ : 101.56 ರೂ
ಮುಂಬೈ
ಪೆಟ್ರೋಲ್ : 109.98 ರೂ, ಡೀಸೆಲ್ : 106.62 ರೂ

ಚೆನ್ನೈ
ಪೆಟ್ರೋಲ್ : 101.40 ರೂ, ಡೀಸೆಲ್ : 102.69 ರೂ

ಬೆಂಗಳೂರು

ಪೆಟ್ರೋಲ್: 107.64 ರೂ., ಡೀಸೆಲ್: 104.50 ರೂ

ಮಂಗಳೂರು
ಪೆಟ್ರೋಲ್: 107.56 ರೂ, ಡೀಸೆಲ್: 104.16 ರೂ

ಮೈಸೂರು
ಪೆಟ್ರೋಲ್: 107.72ರೂ , ಡೀಸೆಲ್: 104.59ರೂ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+