ಡಿಸೆಂಬರ್ 06ರಂದು ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ
ಬೆಂಗಳೂರು, ಡಿಸೆಂಬರ್ 06: ರಾಜ್ಯದಲ್ಲಿ ಕಳೆದ ಒಂದೆರಡು ದಿನಗಳಿಂದ ಮಳೆಯ ಅಬ್ಬರ ಕೊಂಚ ಕಡಿಮೆಯಾಗಿದೆ.
ಜವಾದ್ ಚಂಡಮಾರುತದಿಂದಾಗಿ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ ಎರಡು ದಿನಗಳಿಂದ ಮೋಡಕವಿದ ವಾತಾವರಣವಿದ್ದು ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ.
ಈ ಬಾರಿ ಚಳಿಗಾಲ ಶುರುವಾದರೂ ಮಳೆಯು ಕಡಿಮೆಯಾಗದ ಕಾರಣ ಹಲವು ಜಲಾಶಯಗಳು ಭರ್ತಿಯಾಗಿವೆ. ಡಿಸೆಂಬರ್ 7ರಂದು ದಕ್ಷಿಣ ಒಳನಾಡಿನ ಬೆಂಗಳೂರು, ಹಾಸನ, ಕೊಡಗು, ಚಾಮರಾಜನಗರ ಮೈಸೂರು, ರಾಮನಗರ, ತುಮಕೂರು, ಬಳ್ಳಾರಿ, ಮಂಡ್ಯ ಜಿಲ್ಲೆಗಳ ಒಂದೆರಡು ಕಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ.
ಮಂಗಳವಾರ ಹಾಸನ, ಕೊಡಗು, ಮಂಡ್ಯ, ಮೈಸೂರು ಜಿಲ್ಲೆಯ ಒಂದೆರಡು ಕಡೆ ಮಳೆಯಾಗಲಿದ್ದು ಉಳಿದೆಡೆ ಒಣ ಹವೆ ಇರಲಿದೆ.
ಆ ಬಳಿಕ ಎರಡು ದಿನ ಕೊಡಗು ಮತ್ತು ಹಾಸನದ ಒಂದೆರಡು ಕಡೆ ಮಳೆಯಾಗಲಿದ್ದು ಉಳಿದಂತೆ ದಕ್ಷಿಣ ಒಳನಾಡಿನಲ್ಲಿ ಒಣ ಹವೆ ಇರಲಿದೆ.
ಉತ್ತರ ಒಳನಾಡಿನಲ್ಲಿ ಸೋಮವಾರದಿಂದ ಮುಂದಿನ ನಾಲ್ಕು ದಿನವೂ ಒಣ ಹವೆ ಇರಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿಯ ಒಂದೆರಡು ಕಡೆ ಮುಂದಿನ ನಾಲ್ಕು ದಿನಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉತ್ತರ ಕನ್ನಡದಲ್ಲಿ ಒಣ ಹವೆ ಇರಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಭಾನುವಾರ ಬೆಳಗ್ಗೆ 8.30ಕ್ಕೆ ಪೂರ್ಣಗೊಂಡ ಕಳೆದ 24 ಗಂಟೆ ಅವಧಿಯಲ್ಲಿ ರಾಜ್ಯದ ಒಳನಾಡಿನ ಕೆಲ ಭಾಗದಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆ ಮಳೆಯಾಗಿದೆ. ವಿಜಯಪುರದ ಆಲಮಟ್ಟಿ5 ಸೆಂ.ಮೀ., ಮಂಡ್ಯದ ಕೃಷ್ಣರಾಜಸಾಗರ, ಹಾಸನದ ಶ್ರವಣಬೆಳಗೊಳ, ತುಮಕೂರಿನ ಬರಗೂರಿನಲ್ಲಿ ತಲಾ 4 ಸೆಂ.ಮೀ. ಮಳೆಯಾಗಿದೆ.
ಇನ್ನು ಗಂಜಾಂ ಜಿಲ್ಲೆಯಲ್ಲಿ 15 ಸೆಂ.ಮೀ, ನಯಗಢದಲ್ಲಿ 10 ಸೆಂ.ಮೀ., ಛತ್ರಪುರದಲ್ಲಿ 8 ಸೆಂ.ಮೀ., ಭುವನೇಶ್ವರದಲ್ಲಿ 42.3 ಮಿ.ಮೀ ಮಳೆಯಾಗಿದೆ. ಇದರಿಂದ ಜನಜೀವನ ಅಸ್ತವ್ಯಸ್ತವಾಗಿದ್ದು, ಪ್ರವಾಸಿಗರು ಸೇರಿ ಎಲ್ಲರನ್ನೂ ಸಮುದ್ರ ಭಾಗದಿಂದ ತೆರವುಗೊಳಿಸಲಾಗಿದೆ.ಬಂಗಾಳದಲ್ಲಿ ಉತ್ತರ ಪರಗಣಸ್ ಜಿಲ್ಲೆಯಿಂದ ಹೂಗ್ಲಿ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ದೋಣಿಯಾನವನ್ನು ರದ್ದುಪಡಿಸಲಾಗಿದೆ.
ಜವಾದ್ ಅಬ್ಬರಕ್ಕೆ ತತ್ತರ: ಜವಾದ್ ಚಂಡಮಾರುತ ತೀವ್ರತೆ ಕಳೆದುಕೊಂಡು ವಾಯುಭಾರ ಕುಸಿತವಾಗಿ ಬದಲಾಗಿದ್ದರೂ, ಪರಿಣಾಮ ಒಡಿಶಾ ಮತ್ತು ಪಶ್ಚಿಮ ಬಂಗಾಳದಲ್ಲಿ ಭಾನುವಾರ ಧಾರಾಕಾರ ಮಳೆಯಾಗಿದೆ. ಭಾನುವಾರ ಬೆಳಗ್ಗೆ ಮಾಹಿತಿ ನೀಡಿದ ಭಾರತೀಯ ಹವಾಮಾನ ಇಲಾಖೆ, ಕಳೆದ 6 ಗಂಟೆಗಳಿಂದ ಪ್ರತೀ ಗಂಟೆಗೆ 20 ಕಿ.ಮೀ ವೇಗವಾಗಿ ಬೀಸುತ್ತಿರುವ ಜವಾದ್, ಗೋಪಾಲ್‌ಪುರದಿಂದ 90 ಕಿ.ಮೀ ವೇಗವಾಗಿ ಮತ್ತು ಪುರಿಯಿಂದ 120 ಕಿ.ಮೀ ಹಾಗೂ ಪರದೀಪ್‌ನಿಂದ 210 ಕಿ.ಮೀ ವೇಗವಾಗಿ ಚಲಿಸಲಿದೆ. ಹೀಗಾಗಿ ರಾಜ್ಯಾದ್ಯಂತ ಭಾನುವಾರ ಪೂರ್ತಿ ಮಳೆಯಾಗಿದೆ ಎಂದಿದೆ.
ಯಾವ ಜಲಾಶಯದಲ್ಲಿ ಎಷ್ಟು ನೀರು ಸಂಗ್ರಹ ಸಾಮರ್ಥ್ಯವಿದೆ, ಯಾವ ಜಲಾಶಯದಲ್ಲಿ ಈಗ ಎಷ್ಟು ನೀರಿದೆ ಎಂಬುದರ ಮಾಹಿತಿ ಇಲ್ಲಿದೆ. ವಿನ್ಯಾಸ ಭರತ್ ಎಚ್‌ಸಿ

ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ
ಲಿಂಗನಮಕ್ಕಿಯಲ್ಲಿ ಪೂರ್ಣಮಟ್ಟ 554.44 ಮೀಟರ್ ಇದ್ದು, ಇಂದು 552.21 ಮೀಟರ್ ಇದೆ. ಹಾರಂಗಿಯಲ್ಲಿ ಪೂರ್ಣಮಟ್ಟ 871.38 ಮೀಟರ್ ಇದ್ದು, ಇಂದು 870.44ರಷ್ಟಿದೆ. ಇನ್ನು ಹೇಮಾವತಿಯಲ್ಲಿ ನೀರಿನ ಮಟ್ಟ 890.58 ಮೀಟರ್ ಇದ್ದು ಇಂದು 888.12ಮೀಟರ್‌ನಷ್ಟಿದೆ.

ಕಬಿನಿ ಜಲಾಶಯದ ಮಟ್ಟ
ಕಬಿನಿಯಲ್ಲಿ ಪೂರ್ಣ ಮಟ್ಟ 696.13 ಮೀಟರ್‌ನಷ್ಟಿದ್ದು, ಇಂದು 696.03 ರಷ್ಟಿದೆ, ಕೆಆರ್‌ಎಸ್‌ನಲ್ಲಿ 38.04 ಸಾಮರ್ಥ್ಯವಿದ್ದು ನೀರಿನ ಮಟ್ಟ 38.04 ಮೀಟರ್‌ನಷ್ಟಿದೆ, ಭದ್ರಾದಲ್ಲಿ ನೀರಿನ ಸಾಮರ್ಥ್ಯ 657.73ರಷ್ಟಿದ್ದು, ಇಂದಿನ ಮಟ್ಟ 657.72ಷ್ಟಿದೆ.

ತುಂಗಭದ್ರಾ ಜಲಾಶಯ
ತುಂಗಭದ್ರದಲ್ಲಿ 497.71 ಮೀಟರ್ ಸಾಮರ್ಥ್ಯವಿದ್ದು, ಇಂದು 497.71 ಮೀಟರ್‌ನಷ್ಟು ನೀರಿದೆ, ಆಲಮಟ್ಟಿಯಲ್ಲಿ ಸಾಮರ್ಥ್ಯ 519.60ರಷ್ಟಿದ್ದರೂ ಇಂದು 519.08 ಮೀಟರ್‌ನಷ್ಟಿದೆ. ಇನ್ನು ನಾರಾಯಣಪುರದಲ್ಲಿ 492.25ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದರೂ 492.21ಮೀಟರ್‌ನಷ್ಟು ನೀರಿದೆ.

ಸೂಪಾ ಜಲಾಶಯದ ನೀರಿನ ಮಟ್ಟ
ಸೂಪಾ ಜಲಾಶಯದಲ್ಲಿ 564.00 ನೀರಿನ ಸಾಮರ್ಥ್ಯ ಹೊಂದಿದೆ, 554.53ರಷ್ಟು ನೀರು ಸಂಗ್ರಹವಾಗಿದೆ. ಘಟಪ್ರಭಾದಲ್ಲಿ 662.91 ಮೀಟರ್‌ನಷ್ಟು ನೀರಿನ ಸಾಮರ್ಥ್ಯವಿದ್ದು, 660.22ರಷ್ಟು ನೀರಿದೆ, ಮಲಪ್ರಭಾದಲ್ಲಿ 633.80 ಮೀಟರ್ ನೀರಿನ ಸಾಮರ್ಥ್ಯವಿದ್ದು, 633.13 ನೀರು ಸಂಗ್ರಹವಾಗಿದೆ.
Recommended Video
-
Bhagyalakshmi Serial: ಕೊನೆಗೂ ಭಾಗ್ಯಲಕ್ಷ್ಮೀ - ಆದಿ ಮದುವೆ, ಮೂರು ಕುಟುಂಬಗಳನ್ನು ಒಂದು ಮಾಡುವ ಟಾಸ್ಕ್ -
ಮದ್ಯಪಾನದ ಅಭ್ಯಾಸವನ್ನು ನಿಯಂತ್ರಿಸಲು ಬಯಸುತ್ತೀರಾ? ತಜ್ಞರ ಸರಳ ಸಲಹೆಗಳು ಇಲ್ಲಿವೆ -
Transfer: ಕರ್ನಾಟಕ ಶಿಕ್ಷಕರಿಗೆ ಸಿಹಿ ಸುದ್ದಿ: ವರ್ಗಾವಣೆ ನಿಯಮಗಳಲ್ಲಿ ಮಹತ್ವ ಬದಲಾವಣೆ, ಯಾರು ಅರ್ಹರು? -
ವೈಭವ್ ಸೂರ್ಯವಂಶಿ ಕುರಿತು ಬಿಸಿಸಿಐಗೆ ಹೋಯ್ತು ವಿಶೇಷ ಮನವಿ; ಟೀಮ್ ಇಂಡಿಯಾ ಸೇರ್ತಾರಾ ಯುವ ಪ್ರತಿಭೆ? -
ಒಂದು ಬಟನ್ ಒತ್ತಿದರೆ ಬದಲಾಗುತ್ತೆ BMW ಕಾರಿನ ನಂಬರ್ ಪ್ಲೇಟ್, ಹೈಟೆಕ್ ಕಳ್ಳಾಟದ ವಿಡಿಯೋ ಭಾರಿ ವೈರಲ್ -
Asha Bhosle: ಗಾನ ಕೋಗಿಲೆ ಆಶಾ ಭೋಸ್ಲೆ ನಿಧನ: ದೇಶವೇ ಶೋಕದಲ್ಲಿ, ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ಸ್ ಕಂಬನಿ -
ಮೈಸೂರು-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್ ಕೊಟ್ಟ ವಿ.ಸೋಮಣ್ಣ -
ವಾಂಖೆಡೆಯಲ್ಲಿ ಆರ್ಸಿಬಿ-ಮುಂಬೈ ಇಂಡಿಯನ್ಸ್ ಪಂದ್ಯಕ್ಕೆ ಮಳೆ ಅಡ್ಡಿಯಾಗಲಿದ್ಯಾ? ಹವಾಮಾನ ಇಲಾಖೆ ವರದಿ ಹೀಗಿದೆ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Duet Songs: ಆಶಾ ಭೋಸ್ಲೆ-ಲತಾ ಮಂಗೇಶ್ಕರ್ ಸಹೋದರಿಯರ ಕಂಠಸಿರಿಯಲ್ಲಿ ಅರಳಿದ ಮಾಧುರ್ಯ: ಒಟ್ಟಿಗೆ ಹಾಡಿದ ಹಿಟ್ ಹಾಡುಗಳಿವು -
ಎಪಿಎಂಸಿಯಲ್ಲಿ ಮೂಟೆಗಳು ಮೈಮೇಲೆ ಬಿದ್ದರೂ ಪವಾಡಸದೃಶ್ಯದಂತೆ ಬದುಕಿದ ಮಹಿಳೆ Video Viral -
BESCOM Mithra: 'ಬೆಸ್ಕಾಂ ಮಿತ್ರ' ಸೇವೆ ತಾತ್ಕಾಲಿಕ ಸ್ಥಗಿತ, ಸುಧಾರಿತ ವ್ಯವಸ್ಥೆ ಶೀಘ್ರವೇ ಲಭ್ಯ










Click it and Unblock the Notifications