ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

Infographics: ರಾಜ್ಯ ಹವಾಮಾನ ವರದಿ, ಯಾವ ಜಿಲ್ಲೆಯಲ್ಲಿ ಎಷ್ಟು ಉಷ್ಣಾಂಶ?

|
Google Oneindia Kannada News

ಬೆಂಗಳೂರು, ನವೆಂಬರ್ 12: ರಾಜ್ಯದಲ್ಲಿ ಮುಂದಿನ ಮೂರು ದಿನಗಳ ಕಾಲ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ರಾಜಧಾನಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಗುರುವಾರ ಮುಂಜಾನೆಯಿಂದಲೇ ಜಿಟಿಜಿಟಿ ಮಳೆ ನಿರಂತರವಾಗಿ ಬೀಳುತ್ತಿದೆ. ಹವಾಮಾನ ಮುನ್ಸೂಚನೆ ಪ್ರಕಾರ ಮುಂದಿನ ಎರಡು ದಿನ ಜಿಟಿಜಿಟಿ ಮಳೆ ಮುಂದುವರೆಯುವ ಸಾಧ್ಯತೆಗಳಿವೆ.

ಇದರಿಂದ ದೈನಂದಿನ ಕೆಲಸ ಕಾರ್ಯಗಳಿಗೆ ಹೋಗುವವರಿಗೆ ತೊಂದರೆ ಉಂಟಾಗಿ ಕೊಡೆ, ರೈನ್‍ಕೋಟ್, ಜರ್ಕಿನ್‍ಗಳ ಆಶ್ರಯ ಪಡುವಂತಾಯಿತು. ಆಗಾಗ ಬೀಳುವ ತುಂತುರು ಮಳೆಯ ಜೊತೆಗೆ ತಂಪಾದ ಮೇಲ್ಮೈ ಗಾಳಿ ಬೀಸುವುದರಿಂದ ಮೈ ಕೊರೆಯುವಂತಹ ಚಳಿಯ ವಾತಾವರಣ ನಿರ್ಮಾಣವಾಗಿದೆ. ಚಾಮರಾಜನಗರ, ಕೋಲಾರ, ರಾಮನಗರ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಭಾರೀ ಮಳೆಯಾದ ವರದಿಯಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿ ಪ್ರಕಾರ ಚನ್ನಪಟ್ಟಣದಲ್ಲಿ 130 ಮಿ.ಮೀ, ಯಳಂದೂರು ತಾಲ್ಲೂಕಿನ ಅಗರ ಹೋಬಳಿಯಲ್ಲಿ 65 ಮಿ.ಮೀ, ಯಳಂದೂರು ಹೋಬಳಿಯಲ್ಲಿ 64.5 ಮಿ.ಮೀ ದುಗ್ಗಹಟ್ಟಿಯಲ್ಲಿ 65 ಮಿ.ಮೀ, ಚಾಮರಾಜನಗರ ತಾಲ್ಲೂಕಿನ ಕೂಡಲೂರು ಗ್ರಾಮಪಂಚಾಯ್ತಿಯಲ್ಲಿ 67.5 ಮಿ.ಮೀ, ಕೆಂಪನಪುರ ಗ್ರಾಪಂನಲ್ಲಿ 66 ಮಿ.ಮೀ, ಹೆಬ್ಬಸೂರು ಗ್ರಾಪಂನಲ್ಲಿ 65.5 ಮಿ.ಮೀ, ಚಂದಕವಾಡಿಯಲ್ಲಿ 65.5 ಮಿ.ಮೀ ಕೊಳ್ಳೆಗಾಲ ತಾಲ್ಲೂಕಿನ ಮಂಗಳ ಗ್ರಾಮಪಂಚಾಯ್ತಿಯಲ್ಲಿ 65.5 ಮಿ.ಮೀ, ಶ್ರೀನಿವಾಸಪುರ ತಾಲ್ಲೂಕಿನ ನೆಲವಂಕಿ ಹೋಬಳಿಯಲ್ಲಿ 64.5 ಮಿ.ಮೀ, ಮುದಿಮಡಗು ಗ್ರಾಮಪಂಚಾಯ್ತಿಯಲ್ಲಿ 71.5 ಮಿ.ಮೀ , ಕೋಡಿಪಲ್ಲಿಯಲ್ಲಿ 65.5 ಮಿ.ಮೀನಷ್ಟು ಮಳೆಯಾಗಿದೆ.

 ಬಳ್ಳಾರಿ, ವಿಜಯನಗರದಲ್ಲಿ ಮಳೆ

ಬಳ್ಳಾರಿ, ವಿಜಯನಗರದಲ್ಲಿ ಮಳೆ

ಬಳ್ಳಾರಿ, ವಿಜಯನಗರ ಜಿಲ್ಲೆಗಳಲ್ಲಿ ಭಾಗಶಃ ಮಳೆಯಾಗಿದ್ದು, ಚಿತ್ರದುರ್ಗ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಪ್ರಮಾಣದ ಮಳೆಯಾಗಿದೆ. ಮುಂಗಾರು ಹಂಗಾಮಿನ ರಾಗಿ, ಶೇಂಗಾ, ಭತ್ತ, ಕಾಫಿ ಮೊದಲಾದ ಬೆಳೆಗಳಿಗೆ ನಿರಂತರವಾಗಿ ಬೀಳುತ್ತಿರುವ ಮಳೆಯಿಂದ ಕೊಯ್ಲು ಮಾಡಲು ತೊಂದರೆಯಾಗಿದೆ. ಅಲ್ಲದೆ ಮೋಡ ಮುಸುಕಿದ ವಾತಾವರಣ ಕೊಯ್ಲು ಮಾಡಲು ಅಡ್ಡಿಯಾಗಿದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನಿವೃತ್ತ ವಿಶೇಷ ನಿರ್ದೇಶಕ ವಿ.ಎಸ್.ಪ್ರಕಾಶ್ ಅವರ ಪ್ರಕಾರ, ಬೆಂಗಳೂರಿನಲ್ಲಿ ಮಳೆ ಪ್ರಮಾಣ ಕಡಿಮೆಯಾಗಲಿದೆ. ನಾಳೆ ಸಂಜೆವರೆಗೂ ಆಗಾಗ್ಗೆ ತುಂತುರು ಮಳೆ ಮುಂದುವರೆಯಲಿದೆ. ಚಿತ್ರದುರ್ಗ, ಬಳ್ಳಾರಿಯಲ್ಲಿ ಈಗಾಗಲೇ ಜಿಟಿಜಿಟಿ ಮಳೆ ಆರಂಭವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ವಿಜಯಪುರ, ಕೊಪ್ಪಳ, ಗಂಗಾವತಿ, ಬಳ್ಳಾರಿ, ಪಾವಗಡ ಸೇರಿದಂತೆ ಕೆಲವು ಭಾಗಗಳಲ್ಲಿ ಇಂದು ಮತ್ತು ನಾಳೆ ಮಳೆ ಮುಂದುವರೆಯಲಿದೆ.

 ಬೆಂಗಳೂರು ಹವಾಮಾನ ವರದಿ

ಬೆಂಗಳೂರು ಹವಾಮಾನ ವರದಿ

ಬೆಂಗಳೂರಲ್ಲಿ ಮಳೆಯಾಗುತ್ತಿದ್ದು, 23 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 17 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಎಚ್‌ಎಎಲ್‌ನಲ್ಲಿ 19.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.7 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಬೆಂಗಳೂರು ನಗರದಲ್ಲಿ 19.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 16.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್‌ನಲ್ಲಿ 20.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 15.2 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

 ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್

ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

 ಈಶಾನ್ಯ ಮಾರುತ

ಈಶಾನ್ಯ ಮಾರುತ

ಕಳೆದ ಎರಡು ವರ್ಷಗಳಿಂದ ಈಶಾನ್ಯ ಮಾರುತಗಳು (ಅಕ್ಟೋಬರ್‌ 1 ರಿಂದ ಡಿಸೆಂಬರ್‌ 31ರ ಅವಧಿ) ರಾಜ್ಯಕ್ಕೆ ವಾಡಿಕೆಗಿಂತ ಹೆಚ್ಚು ಮಳೆ ಸುರಿಸುತ್ತಿವೆ. ಈ ಅವಧಿಯಲ್ಲಿ ರಾಜ್ಯದಲ್ಲಿ 182 ಮಿ.ಮೀ. ವಾಡಿಕೆ ಮಳೆಯಾಗುತ್ತದೆ. ಆದರೆ, 2019ರಲ್ಲಿ 288 ಮಿ.ಮೀ., 2020ರಲ್ಲಿ 190 ಮಿ.ಮೀ. ಮಳೆಯಾಗಿದೆ. ಈ ವರ್ಷ ಈಗಾಗಲೇ 207 ಮಿ.ಮೀ. ಮಳೆಯಾಗಿದೆ. ವಾಡಿಕೆ ಪ್ರಕಾರ ಅಕ್ಟೋಬರ್‌ 1 ರಿಂದ ನವೆಂಬರ್‌ 9ರ ವರೆಗೆ 150 ಮಿ.ಮೀ. ಮಳೆಯಾಗಬೇಕಿತ್ತು. ಆದರೆ ಅದಕ್ಕೂ ಶೇ. 25ಕ್ಕಿಂತ ಹೆಚ್ಚು ಮಳೆ ಈಗಾಗಲೇ ಸುರಿದಿದೆ.

Recommended Video

ಬಿಟ್ ಕಾಯಿನ್ ಧಂದೆ ಬಗ್ಗೆ ಜಗದೀಶ್ ಶೆಟ್ಟರ್ ಹೇಳಿಕೆ | Oneindia Kannada

English summary
Weather forecast on November 12: Rain expected in many districts, Yellow alert issued, Here is temperature detail across Karnataka.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X