Get Updates
Get notified of breaking news, exclusive insights, and must-see stories!

Infographics; ಯುವ ಮತದಾರರು ಹೆಚ್ಚಿರುವ ಟಾಪ್ 5 ಜಿಲ್ಲೆಗಳು

ಬೆಂಗಳೂರು, ಜನವರಿ 10; ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗೆ ಸಿದ್ಧತೆಗಳು ನಡೆಯುತ್ತಿವೆ. ರಾಜ್ಯ ಚುನಾವಣಾ ಆಯೋಗ 221 ವಿಧಾನಸಭಾ ಕ್ಷೇತ್ರಗಳ ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಿದೆ.

ರಾಜ್ಯದಲ್ಲಿ 224 ವಿಧಾನಸಭಾ ಕ್ಷೇತ್ರಗಳಿವೆ. ಈಗ ಚುನಾವಣಾ ಆಯೋಗ 221 ಕ್ಷೇತ್ರಗಳ ಪರಿಷ್ಕೃತ ಮತದಾರರ ಪಟ್ಟಿ ಪ್ರಕಟಿಸಿದೆ. ಚಿಕ್ಕಪೇಟೆ, ಶಿವಾಜಿನಗರ, ಮಹಾದೇವಪುರ ಕ್ಷೇತ್ರದ ಪಟ್ಟಿ ಜನವರಿ 15 ರಂದು ಪ್ರಕಟವಾಗಲಿದೆ ಎಂದು ಹೇಳಿದೆ.

ಚುನಾವಣಾ ಆಯೋಗದ ಮಾಹಿತಿ ಪ್ರಕಾರ ಪ್ರಸ್ತುತ ಬಿಡುಗಡೆ ಮಾಡಿರುವ ಅಂತಿಮ ಮತದಾರರ ಪಟ್ಟಿಯ ಅನ್ವಯ 7 ಲಕ್ಷ ಯುವ ಮತದಾರರು ಹೊಸದಾಗಿ ಸೇರ್ಪಡೆಗೊಂಡಿದ್ದಾರೆ.

ಯಾವ ಜಿಲ್ಲೆಯಲ್ಲಿ ಹೆಚ್ಚು ಮತದಾರರು ಸೇರ್ಪಡೆಗೊಂಡಿದ್ದಾರೆ ಎಂದು ಚುನಾವಣಾ ಆಯೋಗ ಟಾಪ್ 5 ಜಿಲ್ಲೆಗಳ ಪಟ್ಟಿಯನ್ನು ನೀಡಿದೆ. ಬೆಳಗಾವಿ ಮೊದಲ ಸ್ಥಾನದಲ್ಲಿದ್ದರೆ, ಹಾವೇರಿ ಜಿಲ್ಲೆ 5ನೇ ಸ್ಥಾನದಲ್ಲಿದೆ.

Karnataka Voters List Top 5 Districts Of Highest Number Of Youth Voters Enrolled

ಯಾವ ಜಿಲ್ಲೆಯಲ್ಲಿ ಎಷ್ಟು?; ಬೆಳಗಾವಿಯಲ್ಲಿ 32,145 ಪುರುಷ, 22,667 ಮಹಿಳೆ, 8 ತೃತೀಯ ಲಿಂಗಿಗಳು ಸೇರಿ ಒಟ್ಟು 54,820 ಯುವ ಮತದಾರರು ನೋಂದಣಿ ಮಾಡಿಕೊಂಡಿದ್ದಾರೆ. 2ನೇ ಸ್ಥಾನದಲ್ಲಿ ತುಮಕೂರು ಜಿಲ್ಲೆ ಇದೆ. ಜಿಲ್ಲೆಯ ಒಟ್ಟು ಮತದಾರರು 34,628. ಇವರಲ್ಲಿ ಪುರುಷರು 19,227, ಮಹಿಳೆಯರು 15,393 ಮತ್ತು ತೃತೀಯ ಲಿಂಗಿಗಳು 8.

ಮೈಸೂರು ಜಿಲ್ಲೆ ಟಾಪ್ 3 ಸ್ಥಾನದಲ್ಲಿದೆ. ಒಟ್ಟು ಮತದಾರರು 30,650 ಆಗಿದೆ. ಇವರಲ್ಲಿ 16,428 ಪುರುಷ, 14,216 ಮಹಿಳೆ ಮತ್ತು 6 ತೃತೀಯ ಲಿಂಗಿಗಳು ಸೇರಿದ್ದಾರೆ. ಚಿತ್ರದುರ್ಗ ಜಿಲ್ಲೆ 31,050 ಒಟ್ಟು ಮತದಾರರ ಮೂಲಕ 4ನೇ ಸ್ಥಾನದಲ್ಲಿದೆ. ಹಾವೇರಿ ಜಿಲ್ಲೆ 27,045 ಹೊಸ ಮತದಾರರ ನೋಂದಣಿ ಮೂಲಕ 5ನೇ ಸ್ಥಾನದಲ್ಲಿದೆ.

ಇನ್ನು 221 ವಿಧಾನಸಭಾ ಕ್ಷೇತ್ರಗಳ ಪೈಕಿ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಅಂದರೆ 6,50,532 ಮತದಾರರು, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಕಡಿಮೆ ಎಂದರೆ 1,66,521 ಮತದಾರರು ಇದ್ದಾರೆ.

ಅಂತಿಮ ಮತದಾರರ ಪಟ್ಟಿ ಪ್ರಕಟವಾಗಿದ್ದು, ಮತದಾರರ ಪಟ್ಟಿಯಲ್ಲಿ ಸಾರ್ವಜನಿಕರು ತಮ್ಮ ಹೆಸರು ಇರುವುದನ್ನು ಖಚಿತಪಡಿಸಿಕೊಳ್ಳಲು www.nvsp.in ವೆಬ್‌ಸೈಟ್‌ಗೆ ಭೇಟಿ ನೀಡಬಹುದಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+