ರಾಜ್ಯದೆಲ್ಲೆಡೆ ಮಳೆ ಅಬ್ಬರ, ಜಲಾಶಯಗಳ ನೀರಿನ ಮಟ್ಟ?

ಮಲೆನಾಡು, ಕರಾವಳಿ ಪ್ರದೇಶದಲ್ಲಿ ಮಳೆ ಅಬ್ಬರ ಹೆಚ್ಚಾಗಿದೆ. ಅವಿಭಜಿತ ಕನ್ನಡ ಜಿಲ್ಲೆ , ಚಿಕ್ಕಮಗಳೂರು, ಕೊಡಗು ಜಿಲ್ಲೆಗಳು ಮಳೆಯಿಂದ ತತ್ತರಿಸಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮುಲ್ಕಿ ಹೋಬಳಿಯಲ್ಲಿ ಕೃತಕ ನೆರೆ ಉಂಟಾಗಿದ್ದು, ಹಲವೆಡೆ ಮಳೆ ನೀರು ಮನೆಗಳಿಗೆ ನುಗ್ಗಿದೆ. ಗ್ರಾಮೀಣ ಭಾಗದ ಕೃಷಿ ಭೂಮಿಗಳು ಜಲಾವೃತಗೊಂಡಿದ್ದು, ಕಿನ್ನಿಗೋಳಿಯಲ್ಲಿ ಗ್ರಾಮ ಸಂಪರ್ಕಿಸುವ ಸೇತುವೆ ಸಂಪರ್ಕ ಕಡಿತಗೊಂಡಿದೆ.

ರಾಯಚೂರು, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಮಳೆ ಮುಂದುವರೆದಿದ್ದು, ಜಲಾಶಯಗಳ ಹೊರ ಹರಿವು ಹೆಚ್ಚಳವಾಗಿದ್ದು, ಹೊಸಪೇಟೆಯಲ್ಲಿ ಸೇತುವೆ ಮುಳುಗಡೆಯಾಗುವ ಭೀತಿಯಲ್ಲಿದೆ. ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಮಳೆಯ ಅಬ್ಬರ ಇನ್ನೆರಡು ದಿನ ಮುಂದುವರೆಯಲಿದ್ದು, ಅಣೆಕಟ್ಟುಗಳ ಒಳ ಹರಿವು ಹೆಚ್ಚಾಗುತ್ತಿದೆ.

ಮಹಾರಾಷ್ಟ್ರದ ಉಜನಿ, ಮೀರ್ ಜಲಾಶಯದ ಹೊರ ಹರಿವು ಹೆಚ್ಚಾಗಿದ್ದು, ಭೀಮಾ ನದಿಗೆ ನೀರು ಹೆಚ್ಚುವರಿಯಾಗಿ ಸೇರುತ್ತಿದ್ದು, 8 ಬ್ಯಾರೇಜ್ ಪ್ರದೇಶ ಜಲಾವೃತವಾಗಿದೆ.

ಬಿಬಿಎಂಪಿ ಮಳೆ ಮುನ್ಸೂಚನೆ: ಬಿಬಿಎಂಪಿ ವ್ಯಾಪ್ತಿ ಪ್ರದೇಶಗಳಲ್ಲಿ ವ್ಯಾಪಕವಾಗಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಕಳೆದ 24 ಗಂಟೆಗಳಲ್ಲಿ ಅತ್ಯಧಿಕ ಮಳೆ 344ಮಿ.ಮೀನಷ್ಟು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಬಳಕೂರ ಎಂಬಲ್ಲಿ ದಾಖಲಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೇಳಿದೆ.

ಮಳೆ ಮುನ್ಸೂಚನೆ: ರಾಜ್ಯದ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕವಾಗಿ ಉತ್ತಮ ಮಳೆ ಹಾಗೂ ಚದುರಿದಂತೆ ಅಲ್ಲಲ್ಲಿ ಅಧಿಕದಿಂದ ಅತ್ಯಧಿಕ ಭಾರಿ ಮಳೆ. ಉತ್ತರ ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಗುಡುಗು ಸಹಿತ ವ್ಯಾಪಕವಾಗಿ ಸಾಧಾರಣ ಮಳೆ ಹಾಗೂ ಅಲ್ಲಲ್ಲಿ ಉತ್ತಮದಿಂದ ಅಧಿಕ ಮಳೆಯಾಗುವ ಸಾಧ್ಯತೆಯಿದೆ

ಈ ನಡುವೆ ಕರ್ನಾಟಕದಲ್ಲಿ ಇಂದಿನ (ಸೆ. 21) ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಇಲ್ಲಿ ತಿಳಿಯಿರಿ...ಕೃಷ್ಣರಾಜಸಾಗರ, ಹೇಮಾವತಿ, ಲಿಂಗನಮಕ್ಕಿ, ಭದ್ರಾ, ಬಸವಸಾಗರ(ನಾರಾಯಣಪುರ), ಹಾರಂಗಿ, ಕಬಿನಿ, ತುಂಗಭದ್ರಾ, ಆಲಮಟ್ಟಿ, ಸೂಪಾ, ಘಟಪ್ರಭಾ, ಮಲಪ್ರಭಾ ಅಣೆಕಟ್ಟಿನ ಪೂರ್ಣ ಮಟ್ಟ ಹಾಗೂ ಇಂದಿನ ಮಟ್ಟದ ವಿವರ ಇಲ್ಲಿದೆ..

ಅಣೆಕಟ್ಟಿನ ಪ್ರತಿದಿನ ನೀರಿನ ಮಟ್ಟ(ಸೆ. 21 ಅಂಕಿ ಅಂಶ ಕೃಪೆ: KSNMDC) ತಿಳಿಯಲು ಕ್ಲಿಕ್ ಮಾಡಿ: ವಿನ್ಯಾಸ: ಭರತ್ ಎಚ್. ಸಿ.

Karnataka Major Dams Water Level Today September 21

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+