ವ್ಯಕ್ತಿಚಿತ್ರ: ಔರಾದಿನ ಬಂಜಾರ ಸಮುದಾಯದ ನಾಯಕ ಪ್ರಭು ಚೌಹಾಣ್

ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದಲ್ಲಿ ವ್ಯಾಪಕವಾಗಿರುವ ಬಂಜಾರ ಸಮುದಾಯಕ್ಕೆ ತನ್ನದೇ ಆದ ವಿಶಿಷ್ಟತೆ ಇದೆ. ತಮ್ಮ ಸಂಪ್ರದಾಯವನ್ನು ಬಿಂಬಿಸಲು ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೂ ಪ್ರಭು ಚೌಹಾಣ್ ಅವರು ಬಂಜಾರ ದಿರಿಸಿನಲ್ಲಿ ಬಂದು ಕಂಗೊಳಿಸಿದರು. ಬಿ.ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ಕೊನೆಗೂ ವಿಸ್ತರಣೆಯಾಗಿದೆ. ಮೊದಲ ಹಂತದಲ್ಲಿ 17 ಮಂದಿ ಶಾಸಕರನ್ನು ತಮ್ಮ ಕ್ಯಾಬಿನೆಟ್ ಗೆ ಸೇರಿಸಿಕೊಂಡಿದ್ದಾರೆ.

ಯಡಿಯೂರಪ್ಪ ಅವರ ಕ್ಯಾಬಿನೆಟ್ ನಲ್ಲಿ ಹೊಸ ಮುಖವಾಗಿ, ಅಚ್ಚರಿಯ ಆಯ್ಕೆ ಎನಿಸಿಕೊಂಡವರು ಪ್ರಭು ಚೌಹಾಣ್. ಔರದ್ ವಿಧಾನಸಭಾ ಕ್ಷೇತ್ರದ ಶಾಸಕ ಪ್ರಭು ಚೌಹಾಣ್ ಅವರು ಕನ್ನಡ ಮಾತನಾಡಲು ತಡವರಿಸುತ್ತಾರೆ. ಹಿಂದಿ, ಲಮಾಣಿ ಭಾಷೆಯಲ್ಲೇ ಸುಲಲಿತವಾಗಿ ಸಂಭಾಷಿಸುತ್ತಾರೆ ಎಂಬ ದೂರಿದೆ. ಆದರೆ, ಪ್ರಮಾಣ ವಚನದಲ್ಲಿ ಸ್ಪಷ್ಟವಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.

ಪ್ರಭು ಚೌಹಾಣ್
* ಮೂರು ಬಾರಿ ಶಾಸಕ
* ಔರಾದ್ ಕ್ಷೇತ್ರ
* ವಯಸ್ಸು: 50 (16.07.1969)
* ಬೊಂಥಿ ತಾಂಡಾದಲ್ಲಿ ಜನನ.
* ವಿದ್ಯಾರ್ಹತೆ: ಬಿ.ಎ
* ವೃತ್ತಿ: ವ್ಯವಸಾಯ, ವ್ಯವಹಾರ
* ವಿಧಾನಸಭೆ ಮೊದಲ ಪ್ರವೇಶ: 2008
* 2008 ರಿಂದ 2013 ವಿಧಾನಸಭಾ ಸದಸ್ಯರು.
* 2013- 2018 ವಿಧಾನಸಭಾ ಸದಸ್ಯರು.
* 2018ರಲ್ಲಿ 15ನೇ ವಿಧಾನಸಭೆಗೆ ಆಯ್ಕೆಯಾಗಿರುತ್ತಾರೆ.

* ಬೀದರ್ ಜಿಲ್ಲಾ ಬಿಜೆಪಿ ಅಧ್ಯಕ್ಷ, ಬಂಜಾರ ಸಮಾಜ ರಾಷ್ಟ್ರೀಯ ಉಪಾಧ್ಯಕ್ಷ ಸ್ಥಾನದಲ್ಲಿ ಕಾರ್ಯ ನಿರ್ವಹಿಸಿದ ಅನುಭವ.
* ಹವ್ಯಾಸ: ಕಬಡ್ಡಿಮ್ ಖೋ-ಖೋ, ವಾಲಿಬಾಲ್ ಪಟು
* ಪತ್ನಿ ಸಕ್ಕುಬಾಯಿ, ಇಬ್ಬರು ಮಕ್ಕಳು

Karnataka Cabinet minister Prabhu Chauhan Profile
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+