ಕರ್ನಾಟಕದ ವಿವಿಧ ನಿಗಮ, ಮಂಡಳಿಯ ನೂತನ ಅಧ್ಯಕ್ಷರ ಪಟ್ಟಿ
ಕರ್ನಾಟಕ ರಾಜ್ಯ ಸಚಿವ ಸಂಪುಟ ಪುನರ್ ರಚನೆ ಅಥವಾ ಸಂಪುಟ ವಿಸ್ತರಣೆ ನಿರೀಕ್ಷೆಯಲ್ಲಿದ್ದವರಿಗೆ ಅಚ್ಚರಿ ಮೂಡುವಂತೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕರ್ನಾಟಕದ ವಿವಿಧ ನಿಗಮ, ಮಂಡಳಿಯ ನೂತನ ಅಧ್ಯಕ್ಷರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಸಾಮಾನ್ಯವಾಗಿ ಸಂಪುಟ ವಿಸ್ತರಣೆ ಬಳಿಕ ಕರ್ನಾಟಕದ ನಿಗಮ-ಮಂಡಳಿಗಳಿಗೆ ನೇಮಕಾತಿ ಮಾಡಲಾಗುತ್ತದೆ. ಆ ಮೂಲಕ ಸಚಿವ ಸ್ಥಾನ ವಂಚಿತರನ್ನು ಸಮಾಧಾನಗೊಳಿಸಲಾಗುತ್ತದೆ. ಆದರೆ, ಸಂಪುಟ ವಿಸ್ತರಣೆಗೆ ಹೈಕಮಾಂಡ್ ನಿಂದ ಹಸಿರು ನಿಶಾನೆ ಸಿಕ್ಕಿಲ್ಲ. ಯಡಿಯೂರಪ್ಪ ಅವರು ಸಂಪ್ರದಾಯ ಮುರಿದು ನಿಗಮ, ಮಂಡಳಿಗೆ ಕೆಲವು ಆಚ್ಚರಿಯ ಆಯ್ಕೆಯನ್ನು ಮಾಡಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬೀಗರಾದ ಎಸ್ಐ ಚಿಕ್ಕನಗೌಡ್ರು, ರಾಜಕೀಯ ಕಾರ್ಯದರ್ಶಿ ಎಸ್. ಆರ್ ವಿಶ್ವನಾಥ್, ವಿ. ವೈ ವಿಜಯೇಂದ್ರ ಅವರ ಆಪ್ತರಾದ ತಮ್ಮೇಶ್ ಗೌಡ ಅವರಿಗೆ ಮಣೆ ಹಾಕಲಾಗಿದೆ. ಕುಂದಗೋಳದ ಮಾಜಿ ಶಾಸಕ ಚಿಕ್ಕನಗೌಡ್ರು ಕಳೆದ ವಿಧಾನಸಭೆ ಚುನಾವಣೆ ಚುನಾವಣೆಯಲ್ಲಿ ಸೋಲು ಕಂಡಿದ್ದರು. ನಟಿ ಕಮ್ ರಾಜಕಾರಣಿ ತಾರಾ ಅನುರಾಧ ಅವರಿಗೆ ಅರಣ್ಯ ಅಭಿವೃದ್ಧಿ ನಿಗಮ ಒಲಿದು ಬಂದಿದೆ. ಮಿಕ್ಕಂತೆ 27ಕ್ಕೂ ಅಧಿಕ ಕರ್ನಾಟಕದ ವಿವಿಧ ನಿಗಮ, ಮಂಡಳಿಯ ನೂತನ ಅಧ್ಯಕ್ಷರ ಪಟ್ಟಿ ಇಲ್ಲಿದೆ. ಚಿತ್ರ ವಿನ್ಯಾಸ: ಭರತ್ ಎಚ್. ಸಿ














Click it and Unblock the Notifications