Infographics: ಕರ್ನಾಟಕ ತಾಪಮಾನ: ಶಿವರಾತ್ರಿ ತನಕ ಚಳಿ ಚಳಿ

ಬೆಂಗಳೂರು, ಫೆಬ್ರವರಿ 07: ರಾಜ್ಯದ ಹಲವು ಭಾಗಗಳಲ್ಲಿ ಚಳಿ ಗಾಳಿ, ಮಂಜು ಕವಿದ ವಾತಾವರಣವಿದೆ. ಇನ್ನು ಕೆಲವೆಡೆ ಬಿಸಿಲು ನಿಧಾನಗತಿಯಲ್ಲಿ ಏರುತ್ತಿದೆ. ರಥಸಪ್ತಮಿಯ ನಂತರ ಬಿಸಿಲು ಏರಿದರೂ ಶಿವರಾತ್ರಿ(ಮಾರ್ಚ್ 1) ತನಕ ಕೆಲ ಪ್ರದೇಶಗಳಲ್ಲಿ ಚಳಿ ಜೋರಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು, ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲೂ ದಾಖಲೆಯ ಚಳಿ ಉಂಟಾಗಿದೆ.

ಬೀದರ್, ವಿಜಯಪುರ, ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ, ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಈಗಾಗಲೇ ಚಳಿಯು ಹೆಚ್ಚಾಗಿ ಸಾಮಾನ್ಯಕ್ಕಿಂತ 2 ರಿಂದ 3 ಡಿಗ್ರಿ ಸೆಲ್ಸಿಯಸ್ ಕಡಿಮೆ ದಾಖಲಾಗಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಚಳಿಯು ಸಹಜ ತಾಪಮಾನಕ್ಕಿಂತ 1-2 ಡಿಗ್ರಿ ಸೆಲ್ಸಿಯಸ್ ಕಡಿಮೆಯಾಗಿದೆ. ಮಲೆನಾಡು, ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಬೆಳಗಿನ ಜಾವ ದಟ್ಟ ಮಂಜು ಆವರಿಸುತ್ತಿದೆ.

ಇನ್ನು ರಾಜಧಾನಿ ಬೆಂಗಳೂರಿನಲ್ಲಿ ಗರಿಷ್ಠ ಗರಿಷ್ಠ 30 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದು, ಸಂಜೆ ವೇಳೆಗೆ ತಂಪಾದ ಗಾಳಿ ಬೀಸುತ್ತಿದೆ. ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ತಾಪಮಾನ ತಗ್ಗಿಲ್ಲ ಹಾಗೂ ಮೈ ನಡುಗುವಷ್ಟು ಚಳಿ ಉಂಟಾಗಿಲ್ಲ, ಮಧ್ಯಾಹ್ನದ ವೇಳೆಗೆ ಚೆನ್ನಾಗಿ ಬಿಸಿಲು ಜೊತೆಗೆ ಗಾಳಿ ಬೀಸುತ್ತಿದೆ.

ಕರ್ನಾಟಕದಲ್ಲಿ ದಾಖಲೆಯ ಚಳಿ

ಕರ್ನಾಟಕದಲ್ಲಿ ದಾಖಲೆಯ ಚಳಿ

ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಇನ್ನೆರಡು ದಿನ ಚಳಿ ಹೆಚ್ಚಾಗಲಿದ್ದು, ಮಲೆನಾಡು, ಕರಾವಳಿ, ಕೊಡಗು, ಬೆಂಗಳೂರು, ಮೈಸೂರು, ಉತ್ತರ ಕರ್ನಾಟಕದಲ್ಲಿ ಫೆ.10ರ ಬಳಿಕ ಕರ್ನಾಟಕದಲ್ಲಿ ಶೀತ ಗಾಳಿ ಕಡಿಮೆಯಾಗುವ ಸಾಧ್ಯತೆಯಿದೆ. ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಬೆಳಗ್ಗೆ ಸುಮಾರು 9 ಗಂಟೆವರೆಗೂ ದಟ್ಟವಾದ ಮಂಜು ಆವರಿಸಿ ಮಲೆನಾಡಿನ ಅನುಭವ ನೀಡುತ್ತಿದೆ. ಮಂಜು ಆವರಿಸುತ್ತಿರುವ ಮಂಜಿನಿಂದ ರೈತರು ಆತಂಕಕ್ಕೆ ಒಳಗಾಗಿದ್ದು, ಬೆಳೆ ಹಾಳಾಗುವ ಭಯದಲ್ಲಿದ್ದಾರೆ. ಮಧ್ಯಾಹ್ನದ ನಂತರ ಎಂದಿನಂತೆ ಸೂರ್ಯದೇವ ಅಬ್ಬರಿಸಲಿದ್ದಾನೆ.

ರಾಜ್ಯದ ನಗರಗಳ ಹವಾಮಾನ ವರದಿ

ರಾಜ್ಯದ ನಗರಗಳ ಹವಾಮಾನ ವರದಿ

ರಾಜ್ಯದ ನಗರಗಳ ಹವಾಮಾನ ವರದಿ ಹೀಗಿದೆ: ಬೆಂಗಳೂರು 29-16, ಮೈಸೂರು 32-18, ಚಾಮರಾಜನಗರ 32-18, ರಾಮನಗರ 32-17, ಮಂಡ್ಯ 32-18, ಬೆಂಗಳೂರು ಗ್ರಾಮಾಂತರ 29-16, ಚಿಕ್ಕಬಳ್ಳಾಪುರ 28-15, ಕೋಲಾರ 29-16, ಹಾಸನ 31-17, ಚಿಕ್ಕಮಗಳೂರು 31-16, ದಾವಣಗೆರೆ 33-18, ಶಿವಮೊಗ್ಗ 34-18, ಕೊಡಗು 31-16, ತುಮಕೂರು 31-17, ಉಡುಪಿ 31-23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಮಂಗಳೂರು 31-23, ಉತ್ತರ ಕನ್ನಡ 34-17, ಧಾರವಾಡ 33-17, ಹಾವೇರಿ 33-18, ಹುಬ್ಬಳ್ಳಿ 33-18, ಬೆಳಗಾವಿ 32-17, ಗದಗ 33-18, ಕೊಪ್ಪಳ 32-19, ವಿಜಯಪುರ 33-19, ಬಾಗಲಕೋಟ 34-19, ಕಲಬುರಗಿ 33-19, ಬೀದರ್ 32-18, ಯಾದಗಿರಿ 33-19, ರಾಯಚೂರ 33-20, ಬಳ್ಳಾರಿ 33-19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಭಾರತದೆಲ್ಲೆಡೆ ಚಳಿ

ಭಾರತದೆಲ್ಲೆಡೆ ಚಳಿ

ಪಂಜಾಬ್, ಹರ್ಯಾಣ, ಉತ್ತರ ಪ್ರದೇಶ ರಾಜ್ಯಗಳಲ್ಲಿ ಮಂಜು ಕವಿದ ವಾತಾವರಣ ಮುಂದುವರೆಯಲಿದ್ದು, ಇನ್ನೂ ಐದು ದಿನಗಳ ಕಾಲ ಚಳಿ ಗಾಳಿ ಹೊಡೆತಕ್ಕೆ ಜನರು ಮೈಯೊಡ್ಡಬೇಕಾಗತ್ತದೆ. ಕಣಿವೆ ರಾಜ್ಯದಲ್ಲಿ ಚಳಿ ಬಾಧಿಸುತ್ತಿದ್ದು, ಶ್ರೀನಗರದಲ್ಲಿ ಇಂದು 2 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ದೆಹಲಿಯಲ್ಲಿ ಹೊಂಜು, ಮಂಜು ಕವಿದ ವಾತಾವರಣದಿಂದ ಸಂಚಾರ ಕಷ್ಟವಾಗಿದೆ. ಬೆಂಗಳೂರು ಹಾಗೂ ಕರ್ನಾಟಕದ ದಕ್ಷಿಣ ಒಳನಾಡಿನಲ್ಲಿ ಇದೇ ಪರಿಸ್ಥಿತಿ ಮುಂಜಾನೆ ವೇಳೆ ಕಾಣಿಸಲಿದೆ.

Recommended Video

    West Indies ವಿರುದ್ಧದ ಎರಡನೇ ಪಂದ್ಯಕ್ಕೆ ಈ ಆಟಗಾರರ ಸೇರ್ಪಡೆ | Oneindia Kannada
    ಕರ್ನಾಟಕದಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ

    ಕರ್ನಾಟಕದಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ

    ಕರ್ನಾಟಕದಲ್ಲಿ ಚಳಿಯ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಹಾಸನ, ಮಂಡ್ಯ, ಮೈಸೂರು, ಬೆಂಗಳೂರು, ಚಿಕ್ಕಬಳ್ಳಾಪುರ, ಶಿವಮೊಗ್ಗದ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಎಂದಿನಂತೆ ಬೆಳಗ್ಗೆ ಚುಮುಚುಮು ಚಳಿ ಸಹ ಇರಲಿದೆ. ರಾಜ್ಯದಲ್ಲಿ ಬೇಸಿಗೆ ವಾತಾವರಣ ಇರಲಿದ್ದು, ಜಲಾಶಯಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವ ಲಕ್ಷಣಗಳಿವೆ. ಹಲವು ಜಲಾಶಯಗಳ ಒಳ ಹರಿವು ಬಹುತೇಕ ನಿಂತುಹೋಗಿದೆ.

    Notifications
    Settings
    Clear Notifications
    Notifications
    Use the toggle to switch on notifications
    • Block for 8 hours
    • Block for 12 hours
    • Block for 24 hours
    • Don't block
    Gender
    Select your Gender
    • Male
    • Female
    • Others
    Age
    Select your Age Range
    • Under 18
    • 18 to 25
    • 26 to 35
    • 36 to 45
    • 45 to 55
    • 55+