ಹಿಂದಿ-ಅಮೆರಿಕದಲ್ಲಿ ಅತೀ ಹೆಚ್ಚು ಬಳಸುವ ಭಾರತೀಯ ಭಾಷೆ
ನ್ಯೂಯಾರ್ಕ್, ಸೆಪ್ಟೆಂಬರ್ 21: ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಅತೀ ಹೆಚ್ಚು ಜನರು ಮಾತನಾಡುವ ಭಾರತೀಯ ಭಾಷೆಯಗಳಲ್ಲಿ ಹಿಂದಿ ಅಗ್ರಸ್ಥಾನವನ್ನು ಕಾಯ್ದುಕೊಂಡಿದೆ.
ಅಮೆರಿಕನ್ ಕಮ್ಯುನಿಟಿ ಸರ್ವೆ ಡಾಟಾ(ಎಸಿಎಸ್) ಇತ್ತೀಚೆಗಷ್ಟೇ ಬಿಡುಗಡೆ ಮಾಡಿದ 2017 ರ ಯುಎಸ್ ಸೆನ್ಸಸ್ ಬ್ಯೂರೊ ಈ ಮಾಹಿತಿಯನ್ನು ಹೊರಹಾಕಿದೆ.
ಹಿಂದಿಯ ನಂತರ ಅತೀಹೆಚ್ಚು ಮಾತನಾಡುವ ಭಾರತೀಯ ಭಾಷೆಗಳಲ್ಲಿ ಕ್ರಮವಾಗಿ ಗುಜರಾತಿ ಮತ್ತು ತೆಲುಗು ಭಾಷೆಗಳು ಎರಡು ಮತ್ತು ಮೂರನೇ ಸ್ಥಾನಗಳನ್ನು ಪಡೆದಿವೆ.
ಈ ಸಮೀಕ್ಷೆಯ ಪ್ರಕಾರ ಶೇ.21.8 ರಷ್ಟು ಅಮೆರಿಕ ನಿವಾಸಿಗಳು ಇಂಗ್ಲಿಷ್ ಗೆ ಹೊರತಾದ ಬೇರೆ ಭಾಷೆಯನ್ನು ಮಾತನಾಡುತ್ತಾರೆ.
ಒಟ್ಟು 30.5 ಕೋಟಿ ಜನಸಂಖ್ಯೆಯ ಅಮೆರಿಕದಲ್ಲಿ 6.7 ಕೋಟಿಯಷ್ಟು ಜನರು ವಿದೇಶಿ ಭಾಷೆಯನ್ನು ಮಾತನಾಡುತ್ತಾರೆ. ಇದರಲ್ಲಿ 8.63 ಲಕ್ಷ ಜನ ಹಿಂದಿ ಭಾಷೆಯನ್ನು ಮಾತನಾಡಿದರೆ, ಗುಜರಾತಿ ಭಾಷೆಯನ್ನು 4.34 ಲಕ್ಷ ಮತ್ತು ತೆಲುಗು ಭಾಷೆಯನ್ನು 4.15 ಲಕ್ಷ ಜನ ಮಾತನಾಡುತ್ತಾರೆ. ಬೆಂಗಾಲಿ, ತಮಿಳು ಭಾಷೆಗಳು ಅಗ್ರ ಮೂರು ಸ್ಥಾನದಲ್ಲಿಲ್ಲ. ಜೊತೆಗೆ ಕನ್ನಡ ಭಾಷೆಯನ್ನು ಮಾತನಾಡುವವರ ಸಂಖ್ಯೆ ಎಷ್ಟು ಎಂಬ ಬಗ್ಗೆಯೂ ಇದರಲ್ಲಿ ಮಾಹಿತಿ ಇಲ್ಲ.
ಅಮೆರಿಕದಲ್ಲಿ ಅತೀ ಹೆಚ್ಚು ಬಳಕೆಯಲ್ಲಿರುವ ಭಾರತೀಯ ಭಾಷೆಗಳ ಕುರಿತ ಚಿತ್ರ ಮಾಹಿತಿ ಇಲ್ಲಿದೆ.













Click it and Unblock the Notifications