Infographics: ಅ.13ರಂದು ಚಿನ್ನದ ಬೆಲೆ ಎಷ್ಟು ಏರಿಳಿತ ಕಂಡಿದೆ?
ನವದೆಹಲಿ, ಅಕ್ಟೋಬರ್ 13: ದೇಶದ ಹಲವೆಡೆ ಕೋವಿಡ್ 19 ನಿರ್ಬಂಧ ಸಡಿಲಗೊಳಿಸಲಾಗುತ್ತಿದ್ದು, ವಾರಾಂತ್ಯದ ಕರ್ಫ್ಯೂ ಕೂಡಾ ತೆರವುಗೊಂಡಿದ್ದು, ದಸರಾ ಹಬ್ಬದ ಋತುವಿನಲ್ಲಿ ಚಿನಿವಾರ ಪೇಟೆಯಲ್ಲಿ ವಹಿವಾಟು ಹೆಚ್ಚಾಗುವ ನಿರೀಕ್ಷೆ ಹೊಂದಲಾಗಿದೆ. ಆದರೆ, ಕೆಲವೆಡೆ ವಹಿವಾಟು ಹೆಚ್ಚಿನ ಪ್ರಗತಿ ಕಾಣುತ್ತಿಲ್ಲ. ಅಕ್ಟೋಬರ್ 13ರಂದು ಭಾರತದ ಪ್ರಮುಖ ನಗರಗಳಲ್ಲಿನ ಚಿನ್ನ10 ಗ್ರಾಂ ಹಾಗೂ ಬೆಳ್ಳಿ ಕೆಜಿಗೆ ಬೆಲೆ ಏರಿಳಿತವಾಗಿದ್ದು, ದೇಶದ ಪ್ರಮುಖ ನಗರದಲ್ಲಿ ಬೆಲೆ ಎಷ್ಟಿದೆ ಎಂಬುದರ ಸಚಿತ್ರ ವರದಿ ಇಲ್ಲಿದೆ.
ಎಂಸಿಎಕ್ಸ್‌ನಲ್ಲಿ ಚಿನ್ನದ ದರ ದಿನದ ವಹಿವಾಟಿನ ಅಂತ್ಯಕ್ಕೆ ಪ್ರತಿ 10 ಗ್ರಾಂಗೆ ಏರಿಕೆಯಾಗಿ 47,670ರು ಆಗಿದೆ. ಬೆಳ್ಳಿ ದರ ಪ್ರತಿ 1 ಕೆ.ಜಿಗೆ ಬೇಡಿಕೆ ಹಿಗ್ಗಿ 62, 867ರು ನಷ್ಟಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಸತತವಾಗಿ ಚಿನ್ನ ಹಾಗೂ ಬೆಳ್ಳಿ ದರ ಏರಿಳಿತ ಕಂಡಿವೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್ (1 ounce=28.3495 ಗ್ರಾಂ) ಗೆ ಶೇ 1.68ರಷ್ಟು ಏರಿಕೆಯಾಗಿ 1,789.99 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 2.41ರಷ್ಟು ಏರಿಕೆಯಾಗಿ 23.09 ಯುಎಸ್ ಡಾಲರ್ ಆಗಿದೆ.
ಕಳೆದ 30 ದಿನಗಳಲ್ಲಿ ಸ್ಪಾಟ್ ಗೋಲ್ಡ್ ಗರಿಷ್ಠ 1803.78 ಡಾಲರ್ ಹಾಗೂ ಕನಿಷ್ಠ 1728.92 ಡಾಲರ್ ತಲುಪಿತ್ತು. ಇದೇ ಅವಧಿಯಲ್ಲಿ ಬೆಳ್ಳಿ ದರ ಗರಿಷ್ಠ 23.90 ಡಾಲರ್ ಹಾಗೂ ಕನಿಷ್ಠ 21.57 ಡಾಲರ್ ಮುಟ್ಟಿತ್ತು.
ಚೆನ್ನೈ, ದೆಹಲಿ, ಮುಂಬೈ, ಕೋಲ್ಕತಾ, ಹೈದರಾಬಾದ್, ಪುಣೆ, ಬರೋಡಾ, ಅಹಮದಾಬಾದ್, ಜೈಪುರ, ಲಕ್ನೋ, ಕೊಯಮತ್ತೂರು, ಮಧುರೈ, ವಿಜಯವಾಡ, ಪಾಟ್ನಾ, ನಾಗಪುರ, ಚಂಡೀಗಢ, ನಾಸಿಕ್, ಭುವನೇಶ್ವರ ಮುಂತಾದ ನಗರಗಳಲ್ಲಿ ಅಕ್ಟೋಬರ್ 13ರಂದು 22 ಹಾಗೂ 24 ಕ್ಯಾರೆಟ್ ಚಿನ್ನದ ದರ ಹೀಗಿದೆ. ಚಿತ್ರ ವಿನ್ಯಾಸ: ಭರತ್ ಎಚ್.ಸಿ.

ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಏರಿಳಿತ
ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನದ ಮೌಲ್ಯ ಏರಿಳಿತ ಪ್ರಮುಖ ಕಾರಣ ಯುರೋಪಿಯನ್ ಸೆಂಟ್ರಲ್ ಬ್ಯಾಂಕಿನ ಮುಂದಿನ ನಿರ್ಣಯದ ಬಗ್ಗೆ ಉಂಟಾಗಿರುವ ನಿರೀಕ್ಷೆ ಎನ್ನಬಹುದು, ಅ.13ರಂದು ಬೆಳಗ್ಗೆ ಎಂಸಿಎಕ್ಸ್ ನಲ್ಲಿ 47,215ರು ನಂತೆ ವಹಿವಾಟು ಆರಂಭಿಸಿ ಹಳದಿ ಲೋಹ ದಿನದ ಅಂತ್ಯಕ್ಕೆ ಹೆಚ್ಚು ಚೇತರಿಕೆ ಕಂಡಿದೆ. ಬೆಳ್ಳಿ ಆರಂಭದಲ್ಲಿ 61,760ರು ನಂತೆ ಆರಂಭವಾಗಿ ದಿನದ ಅಂತ್ಯಕ್ಕೆ ಏರಿಕೆಯಾಗಿದೆ.

ಚಿನ್ನದ ಏರಿಳಿತಕ್ಕೆ ಕಾರಣ
ಜಾಗತಿಕ ರಾಜಕೀಯ ವಿದ್ಯಮಾನ, ಡಾಲರ್ ಮೌಲ್ಯ ಏರಿಕೆ, ಕೊರೊನಾ ಲಸಿಕೆ ಅಭಿಯಾನ, ಕೊರೊನಾ ಲಾಕ್ ಡೌನ್, ಹವಾಮಾನ ವೈಪರೀತ್ಯ, ಜಾಗತಿಕ ಆರ್ಥಿಕ ಚೇತರಿಕೆ, ಹಲವು ಪ್ರಮುಖ ಬ್ಯಾಂಕುಗಳ ಆರ್ಥಿಕ ನೀತಿ ಎಲ್ಲವೂ ಚಿನ್ನದ ಏರಿಳಿತಕ್ಕೆ ಕಾರಣವಾಗಿವೆ ಎಂದು ಕೋಟಕ್ ಸೆಕ್ಯುರಿಟೀಸ್ ಉಪಾಧ್ಯಕ್ಷ ರವೀಂದ್ರ ರಾವ್ ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ ತಿಂಗಳಲ್ಲಿ ಚಿನ್ನದ ಆಮದು ಹೆಚ್ಚಿನ ಪ್ರಮಾಣದಲ್ಲಿದ್ದರೂ ದೇಶಿ ಮಾರುಕಟ್ಟೆಯಲ್ಲಿ ಬೇಡಿಕೆ ಹಿಗ್ಗಿಲ್ಲ, ಹಬ್ಬದ ಋತುವಿನಲ್ಲಿ ಹೆಚ್ಚಿನ ಹೂಡಿಕೆ, ವ್ಯವಹಾರದ ನಿರೀಕ್ಷೆಯಂತೂ ಇದ್ದೇ ಇದೆ.

ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ ದರ
ಬೆಂಗಳೂರಿನಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂಗೆ 44,150ರು ಬೆಲೆ ಹಾಗೂ ಅಪರಂಜಿ 10 ಗ್ರಾಂಗೆ 48,160ರು ನಷ್ಟಿದೆ. ಭಾರತದ ಪ್ರಮುಖ ನಗರಗಳಲ್ಲಿ ಬೆಳ್ಳಿ ದರ ಏರಿಕೆಯಾಗಿ 1. ಕೆ.ಜಿಗೆ: ಚೆನ್ನೈ, ಹೈದರಾಬಾದ್‌ನಲ್ಲಿ 65,800ರು, ಮುಂಬೈ, ದೆಹಲಿ, ಬೆಂಗಳೂರು ಪ್ರತಿ 1 ಕೆ.ಜಿಗೆ 62,100ರು ನಷ್ಟಿದೆ. ಉಳಿದ ನಗರಗಳ ಧಾರಣೆ ವಿವರ ಮುಂದಿದೆ.

ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?
ಪ್ರತಿ ದಿನ ಚಿನ್ನದ ಬೆಲೆಯನ್ನು ಹೇಗೆ ನಿರ್ಧರಿಸಲಾಗುತ್ತದೆ?: ಬೆಂಗಳೂರಿನಲ್ಲಿ ಆಯಾ ದಿನದ ಚಿನ್ನದ ಬೆಲೆಯನ್ನು ಚಿನ್ನದ ವ್ಯಾಪಾರಿಗಳ ಒಕ್ಕೂಟ ಅಥವಾ ಸ್ವತಃ ಚಿನ್ನದ ವ್ಯಾಪಾರಿಗಳು ನಿರ್ಧರಿಸುತ್ತಾರೆ. ದೈನಂದಿನ ಚಿನ್ನದ ಬೆಲೆ ಅಂತಾರಾಷ್ಟ್ರೀಯ ಟ್ರೆಂಡ್ ಮತ್ತು ಚಿನ್ನದ ಮೇಲಿನ ಆಮದು ಸುಂಕವನ್ನು ಆಧರಿಸಿರುತ್ತದೆ. ಡಾಲರ್ ಮೌಲ್ಯ ಹೆಚ್ಚಾದಂತೆ ಚಿನ್ನದ ಮೌಲ್ಯ ಕುಸಿತ ಕಾಣುವುದನ್ನು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಬಹುದು.
-
Gold Price: ಇಂದು ಚಿನ್ನದ ಬೆಲೆಯಲ್ಲಿ ದಾಖಲೆಯ ಕುಸಿತ, ಯುದ್ಧದ ಎಫೆಕ್ಟ್ನಿಂದ ಬಂಗಾರ-ಬೆಳ್ಳಿ ಮತ್ತಷ್ಟು ದುಬಾರಿ! ಮುನ್ಸೂಚನೆ -
Fuel Price: ತೀವ್ರಗೊಂಡ ಯುದ್ಧದ ಕಿಚ್ಚು, ಕಚ್ಚಾ ತೈಲ ದರ ಏರಿಕೆಯಾದರೂ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ -
ರಶ್ಮಿಕಾ ಮೊದಲ ಸಿನಿಮಾದಲ್ಲಿ ನಾನು ಹೀರೋ, ನೀನು ಬಾಲಿವುಡ್ಗೆ ಪಕ್ಕಾ ಹೋಗ್ತೀಯ ಎಂದಿದ್ದೆ: ನಟ ತ್ರಿವಿಕ್ರಮ್ -
ಇರಾನ್ ಸುಪ್ರೀಂ ಯತೊಲ್ಲಾ ಅಲಿ ಖಮೇನಿ ಅಂತ್ಯ: ವಿಶ್ವದ ಮೇಲೆ 5 ಪರಿಣಾಮ ಸಾಧ್ಯತೆ: ಆಶಿಶ್ ಸಾರಡ್ಕ ಬರಹ -
Thalapathy Vijay: 400 ಕೋಟಿ ಆಸ್ತಿಗೆ ಒಡತಿ, ಲಂಡನ್ ಬೆಡಗಿ: ಯಾವ ಸಿನಿಮಾಗೂ ಕಡಿಮೆ ಇಲ್ಲ ದಳಪತಿ ವಿಜಯ್-ಸಂಗೀತಾ ಲವ್ ಸ್ಟೋರಿ -
ಬೆಂಗಳೂರಿನ ಎಂ.ಎಸ್.ರಾಮಯ್ಯ ಕಾಲೇಜಿನಲ್ಲಿ ಹೇಗಿದ್ರು ನೋಡಿ ರಶ್ಮಿಕಾ ಮಂದಣ್ಣ, ವಿಡಿಯೋ ವೈರಲ್ -
Sanju Samson: ವೆಸ್ಟ್ ಇಂಡೀಸ್ ವಿರುದ್ಧ ಅಬ್ಬರ: ತೆಗಳಿದ ಬಾಯಲ್ಲೇ ಸಂಜು ಸ್ಯಾಮ್ಸನ್ಗೆ ಗೌತಮ್ ಗಂಭೀರ್ ಶಹಭಾಸ್ಗಿರಿ -
Lunar Eclipse 2026:ನಾಳೆ ಕೇತುಗ್ರಸ್ತ ಚಂದ್ರಗ್ರಹಣ: ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದರ್ಶನದ ಸಮಯ ಬದಲು, ಗ್ರಹಣ ಶಾಂತಿ ಹೋಮ -
Horoscope March 2: ಈ ರಾಶಿಯವರಿಗೆ ಸಕಾರಾತ್ಮಕ ಪ್ರಗತಿ, ಮೇಷ-ಮೀನ ರಾಶಿಯವರೆಗೆ ಇಂದಿನ ದಿನ ಭವಿಷ್ಯ -
ಮಧ್ಯಪ್ರಾಚ್ಯದಲ್ಲಿ ವಿಮಾನಗಳ ಸಂಚಾರ ವ್ಯತ್ಯಯ: ಕರ್ನಾಟಕದ ನಾಗರಿಕರಿಗೆ ಸರ್ಕಾರ ನೆರವು -
Gold Rate : ಆಭರಣ ಪ್ರಿಯರಿಗೆ ಬಿಗ್ ಶಾಕ್; ಭಾರಿ ಏರಿಕೆ ಕಂಡ ಚಿನ್ನ- ಬೆಳ್ಳಿ ದರ, ಇಲ್ಲಿದೆ ಇಂದಿನ ಬೆಲೆ ಪಟ್ಟಿ -
Iran Vs America, Israel ಯುದ್ಧ ತೀವ್ರ: ಗಲ್ಫ್ ರಾಷ್ಟ್ರಗಳಿಗೂ ವ್ಯಾಪಿಸಿದ ಸಂಕಷ್ಟ; ಈ ಕ್ಷಣದ 10 ಪ್ರಮುಖ ಬೆಳವಣಿಗೆಗಳು












Click it and Unblock the Notifications