Get Updates
Get notified of breaking news, exclusive insights, and must-see stories!

Infographics: ಚಿನ್ನ ಮತ್ತಷ್ಟು ದುಬಾರಿ, ಅ.8ರಂದು ವಿವಿಧ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ?

ಬೆಂಗಳೂರು, ಅಕ್ಟೋಬರ್ 08: ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ಬೆಂಗಳೂರಿನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನದ ದರ 43,900 ರೂಪಾಯಿಗೆ ಏರಿಕೆ ಆಗಿದೆ.
ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ 47,890 ರೂಪಾಯಿ ಆಗಿದೆ.

ಬೆಂಗಳೂರು, ಚೆನ್ನೈ ಸೇರಿದಂತೆಯೇ ದೆಹಲಿ, ಜೈಪುರ ಮುಂಬೈ, ಹೈದರಾಬಾದ್​ ಹೀಗೆ ಎಲ್ಲಾ ಕಡೆಗಳಲ್ಲಿಯೂ ಸಹ ಇಂದು ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಏರಿಕೆ ಕಂಡಿದೆ. ಬೆಳ್ಳಿ ಬೆಲೆಯಲ್ಲಿಯೂ ಸಹ ಏರಿಕೆ ಕಂಡು ಬಂದಿದೆ. ನವರಾತ್ರಿ ಹಬ್ಬ ನಡೆಯುತ್ತಿರುವುದರಿಂದ ಆಭರಣ ಖರೀದಿಸಲು ಮುಂದಾಗಿದ್ದರೆ, ದರ ವಿವರ ಪರಿಶೀಲಿಸಿ, ನೀವು ಕೂಡಿಟ್ಟ ಹಣದಲ್ಲಿ ಚಿನ್ನ, ಬೆಳ್ಳಿಯನ್ನು ಖರೀದಿಸಬಹುದು ಎಂದೆನಿಸಿದರೆ ಆ ಕುರಿತಾಗಿ ಯೋಚಿಸಿ.

ದೈನಂದಿನ ದರ ಬದಲಾವಣೆಯಲ್ಲಿ ಗಮನಿಸಿದಾಗ ಚಿನ್ನ, ಬೆಳ್ಳಿ ದರ ಏರಿಳಿತ ಕಾಣುತ್ತಿರುವುದು ಸರ್ವೇ ಸಾಮಾನ್ಯ. ಆದರೂ ಸಹ ಚಿನ್ನದ ದರ ಇಳಿಕೆಯತ್ತ ಸಾಗಿದ್ದಾಗಲೇ ಆಭರಣ ಖರೀದಿಸಬೇಕು ಎಂಬ ಆಸೆ ಇದ್ದೇ ಇರುತ್ತದೆ. ನಿನ್ನೆ ಪ್ರಮುಖ ಎಲ್ಲಾ ಮಹಾನಗರಗಳಲ್ಲಿಯೂ ಸಹ ಚಿನ್ನದ ದರ ಅಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿತ್ತು. ಬೆಳ್ಳಿ ದರದಲ್ಲಿ ಕೊಂಚ ಏರಿಕೆಯಾಗಿತ್ತು. ಇಂದು (ಅಕ್ಟೋಬರ್​ 8, ಶುಕ್ರವಾರ) ಚಿನ್ನದ ದರ ಏರಿಕೆ ಆಗಿದೆ. ಬೆಳ್ಳಿ ಬೆಲೆಯೂ ಸಹ ಏರಿದೆ.

gold-and-silver-rate-increased-in-india-s-major-cities-on-october-08-2021

ಚೆನ್ನೈನಲ್ಲಿ 22 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 44,130ರೂಪಾಯಿ, ಅದೇ ರೀತಿ 24 ಕ್ಯಾರೆಟ್ 10 ಗ್ರಾಂ ಚಿನ್ನಕ್ಕೆ 48,140 ರೂಪಾಯಿ ನಿಗದಿಯಾಗಿದೆ.

ಒಟ್ಟಾರೆ ಇಂದು ಬೆಳಗ್ಗಿನ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಹಲವು ನಗರಗಳಲ್ಲಿ ಏರಿಕೆ ಕಂಡು ಬಂದಿದ್ದರೆ, ಇನ್ನು ಬೆಳ್ಳಿ ಬೆಲೆಯಲ್ಲಿಯೂ ಕೆಲವು ಕಡೆಗಳಲ್ಲಿ ಏರಿಕೆ ಕಂಡು ಬಂದು ಉಳಿದೆಡೆ ಏಕರೂಪವಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಸ್ಪಾಟ್ ಗೋಲ್ಡ್ ಪ್ರತಿ ಔನ್ಸ್‌(1 ounce=28.3495 ಗ್ರಾಂ)ಗೆ ಶೇ 0.21ರಷ್ಟು ಏರಿಕೆಯಾಗಿ 1,758.77 ಯುಎಸ್ ಡಾಲರ್‌ನಷ್ಟಿದೆ. ಬೆಳ್ಳಿ ಪ್ರತಿ ಔನ್ಸ್ ಬೆಲೆ ಶೇ 0.35% ಇಳಿಕೆಯಾಗಿ 22.51 ಯುಎಸ್ ಡಾಲರ್ ಆಗಿದೆ.

ಶುಕ್ರವಾರ, ಅಕ್ಟೋಬರ್ 08ರಂದು ನವದೆಹಲಿಯಲ್ಲಿ 10 ಗ್ರಾಂ ಚಿನ್ನದ ಬೆಲೆ 45,960 ರೂ ಆಗಿದೆ. ಅಪರಂಜಿ ಚಿನ್ನದ ಬೆಲೆ 10 ಗ್ರಾಂಗೆ 50,140 ರೂ ಆಗಿದೆ.

ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 1,755.83 ಡಾಲರ್‌ನಲ್ಲಿ ಸ್ಥಿರವಾಗಿದೆ. ಈ ವಾರದಲ್ಲಿ, ಇದು 0.3%ರಷ್ಟು ಕಡಿಮೆಯಾಗಿದೆ. ಇತರ ಬೆಲೆಬಾಳುವ ಲೋಹಗಳ ಪೈಕಿ, ಸ್ಪಾಟ್ ಬೆಳ್ಳಿ ಪ್ರತಿ ಔನ್ಸ್‌ಗೆ 0.4% ಇಳಿಕೆಯಾಗಿ $ 22.48 ಕ್ಕೆ ಇಳಿದಿದ್ದರೆ, ಪ್ಲಾಟಿನಂ 0.2% ನಷ್ಟು ಪ್ರತಿ ಔನ್ಸ್‌ಗೆ $ 981.37 ಕ್ಕೆ ತಲುಪಿದೆ.

ಭಾರತದ ಮಾರುಕಟ್ಟೆಯಲ್ಲಿ ಇಳಿಮುಖಗೊಂಡಿದ್ದ ಹಳದಿ ಲೋಹದ ಬೆಲೆ ಸತತ ಎರಡು ದಿನಗಳು ಏರಿಕೆ ದಾಖಲಿಸಿದೆ. ಶುಕ್ರವಾರ (ಅ.08) ನವದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನ 10 ಗ್ರಾಂ 46,050 ರೂಪಾಯಿಗೆ ತಲುಪಿದ್ದು, ಶುದ್ಧ ಚಿನ್ನ 10 ಗ್ರಾಂ 50,240 ರೂಪಾಯಿ ದಾಖಲಾಗಿದೆ. ಬೆಳ್ಳಿ ಬೆಲೆಯು ಪ್ರತಿ ಕೆಜಿಗೆ 61,200 ರೂಪಾಯಿಗೆ ತಲುಪಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+