Infographics: ಸೋಂಕಿತರ ಪಟ್ಟಿಯಲ್ಲಿ ಭಾರತದ ಸ್ಥಾನವೆಷ್ಟು?
ಬೆಂಗಳೂರು, ಸೆ. 4: ಕೊವಿಡ್19 ಅತಿ ಹೆಚ್ಚು ಸೋಂಕಿತರ ಪಟ್ಟಿ ಹಾಗೂ ಸಾವಿನ ಸಂಖ್ಯೆಯಲ್ಲೂ ಭಾರತ ಮೇಲಕ್ಕೇರಿದೆ. ಹೆಚ್ಚು ಸೋಂಕಿತರನ್ನು ಹೊಂದಿರುವ ದೇಶಗಳಲ್ಲಿ ಚೇತರಿಕೆ ಪ್ರಮಾಣ ಕೂಡಾ ಹೆಚ್ಚಾಗುತ್ತಿದೆ. ಭಾರತದಲ್ಲಿ ಒಟ್ಟು ಚೇತರಿಕೆ ಕಂಡವರ ಸಂಖ್ಯೆ 30 ಲಕ್ಷಕ್ಕೇರಿದೆ. ಕೊವಿಡ್19 ಸಕ್ರಿಯ ಸೋಂಕು, ಮರಣ, ಗುಣಮುಖ ಹೊಂದಿರುವ ದೇಶಗಳ ಪೈಕಿ ಭಾರತ ಎಷ್ಟನೇ ಸ್ಥಾನದಲ್ಲಿದೆ ಎಂಬ ವಿವರ ಇಲ್ಲಿದೆ.
Recommended Video
ಸೆಪ್ಟೆಂಬರ್ 04ರಂದು ಈ ಸಮಯಕ್ಕೆ ವಿಶ್ವದೆಲ್ಲೆಡೆ 26,549,807 ಕೊವಿಡ್ 19 ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 874,500 ಕ್ಕೇರಿದೆ. ಒಟ್ಟಾರೆ, 18,733,086 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 6,942,221 ಸಕ್ರಿಯ ಪಾಸಿಟಿವ್ ಪ್ರಕರಣಗಳಿವೆ, 60,748 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ. 19,607,586 ಪ್ರಕರಣಗಳು ಮುಕ್ತಾಯಗೊಂಡಿವೆ. ಅತಿ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚು ಚೇತರಿಕೆಗೊಂಡವರು ಕೂಡಾ ಇದ್ದಾರೆ.
ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು, ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರು, ಅತಿ ಹೆಚ್ಚು ಚೇತರಿಕೆಗೊಂಡವರನ್ನು ಹೊಂದಿರುವ ಟಾಪ್ 10 ದೇಶಗಳ ಸಚಿತ್ರ ವಿವರ(ಸೆಪ್ಟೆಂಬರ್ 4ರಂತೆ) ಇಲ್ಲಿದೆ...ವಿನ್ಯಾಸ: ಭರತ್ ಎಚ್. ಸಿ

ಕೊರೊನಾವೈರಸ್ ಬಾಧಿತ ಟಾಪ್ 10 ದೇಶಗಳು:
ಯುಎಸ್ಎ: 6,339,403 ಪ್ರಕರಣಗಳು
ಬ್ರೆಜಿಲ್: 4,046,150
ಭಾರತ: 3,971,670
ರಷ್ಯಾ: 1,015,105
ಪೆರು: 670,145
ಕೊಲಂಬಿಯಾ: 641,574
ದಕ್ಷಿಣ ಆಫ್ರಿಕಾ: 633,015
ಮೆಕ್ಸಿಕೋ: 616,894
ಸ್ಪೇನ್: 488,513
ಅರ್ಜೆಂಟೀನಾ: 451,198
***

ಕೊರೊನಾವೈರಸ್ ನಿಂದ ಅತಿ ಹೆಚ್ಚು ಮೃತಪಟ್ಟವರನ್ನು ಹೊಂದಿರುವ ಟಾಪ್ 10 ದೇಶಗಳು:
ಯುಎಸ್ಎ: ಮೃತರ ಸಂಖ್ಯೆ 191,192
ಬ್ರೆಜಿಲ್: 124,729
ಭಾರತ: 68,878
ಮೆಕ್ಸಿಕೋ: 66,329
ಯುಕೆ: 41,527
ಇಟಲಿ: 35,507
ಫ್ರಾನ್ಸ್: 30,706
ಪೆರು: 29,405
ಸ್ಪೇನ್: 29,234
ಇರಾನ್: 22,044
***

ಕೊರೊನಾವೈರಸ್ ನಿಂದ ಅತಿ ಹೆಚ್ಚು ಗುಣಮುಖರಾದವರು ಟಾಪ್ 10 ದೇಶ:
ಯುಎಸ್ಎ: ಗುಣಮುಖರಾದವರ ಸಂಖ್ಯೆ 3,575,866
ಬ್ರೆಜಿಲ್: 3,247,610
ಭಾರತ: 3,067,672
ರಷ್ಯಾ: 832,747
ದಕ್ಷಿಣ ಆಫ್ರಿಕಾ: 554,887
ಪೆರು: 489,886
ಕೊಲಂಬಿಯಾ: 489,151
ಮೆಕ್ಸಿಕೋ: 430,287
ಚಿಲಿ: 389,409
ಇರಾನ್: 330,308












Click it and Unblock the Notifications