ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಚಿತ್ರ ಮಾಹಿತಿ: ಸಂಖ್ಯೆಗಳಲ್ಲಿ 'ಬಾಹುಬಲಿ' ರಾಕೆಟ್- ಚಂದ್ರಯಾನ-2

|
Google Oneindia Kannada News

ಬೆಂಗಳೂರು, ಜುಲೈ 22: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮಹತ್ವದ ಯೋಜನೆ ಚಂದ್ರಯಾನ 2 ಯೋಜನೆ ಮಹತ್ವದ ಮೈಲಿಗಲ್ಲು ಮುಟ್ಟಿದೆ. ಅಧ್ಯಯನ ನೌಕೆಗಳನ್ನು ಹೊತ್ತ ರಾಕೆಟ್ ಇಂದು ಯಶಸ್ವಿಯಾಗಿ ಉಡಾವಣೆಯಾಗಿದೆ ಎಂದು ಇಸ್ರೋ ಅಧ್ಯಕ್ಷ ಕೆ ಶಿವನ್ ಘೋಷಿಸಿದ್ದಾರೆ.

2009ರಲ್ಲಿ ನಡೆದಿದ್ದ ಚಂದ್ರಯಾನ 1 ರ ಯಶಸ್ಸೇ ಚಂದ್ರಯಾನ 2 ಕ್ಕೆ ಸ್ಫೂರ್ತಿಯಾಗಿದ್ದು, ಆಗಲೂ ಚಂದ್ರನ ಮೇಲಿರುವ ವಾಸಯೋಗ್ಯ ವಾತಾವರಣ, ನೀರು ಮತ್ತಿತರ ಖನಿಜಗಳ ಬಗ್ಗೆ ಅಧ್ಯಯನ ನಡೆಸಲಾಗಿತ್ತು. ಚಂದ್ರಯಾನ 1 ರಲ್ಲಿ ಆರ್ಬಿಟರ್ ಘಟಕವನ್ನು ಬಳಸಲಾಗಿತ್ತಾದರೂ, ರೋವರ್ ಘಟಕವನ್ನು ಬಳಸಲಾಗಿರಲಿಲ್ಲ.

Live Updates: ಚಂದ್ರಯಾನ-2: ಯಶಸ್ವಿಯಾಗಿ ನಭಕ್ಕೆ ಹಾರಿದ ಬಾಹುಬಲಿLive Updates: ಚಂದ್ರಯಾನ-2: ಯಶಸ್ವಿಯಾಗಿ ನಭಕ್ಕೆ ಹಾರಿದ ಬಾಹುಬಲಿ

ಅಧ್ಯಯನ ನೌಕೆ: ಐದು ಕಾಲುಗಳುಳ್ಳ ಗ್ರಹನೌಕೆ 'ವಿಕ್ರಂ' ಅಧ್ಯಯನ ನೌಕೆ ಚಂದಿರನ ಅಂಗಳದಲ್ಲಿ ಸೆಪ್ಟೆಂಬರ್ 7ರ ಸುಮಾರಿಗೆ ಇಳಿಯಲಿದೆ. ಅದರ ಜತೆಗೆ ರೊಬೊಟಿಕ್ ರೋವರ್ 'ಪ್ರಜ್ಞಾನ್', ಚಂದ್ರನ ಪ್ರದೇಶದಲ್ಲಿ ಸುತ್ತುಹೊಡೆದು ಅಧ್ಯಯನ ನಡೆಸಲಿದೆ.

ಶ್ರೀಹರಿಕೋಟಾದಿಂದ ಅತ್ಯಂತ ತೂಕವನ್ನು ಹೊರಬಲ್ಲ MkIII ರಾಕೆಟ್ ಮೂಲಕ ಅಧ್ಯಯನ ನೌಕೆಯನ್ನು ಉಡಾವಣೆ ಮಾಡಲಾಗಿದೆ. ಭಾರತದ ಅತಿ ಭಾರದ ರಾಕೆಟ್ 'ಬಾಹುಬಲಿ' ಎಂದು ಹೆಸರಿಸಲಾದ ಜಿಎಸ್​ಎಲ್​ವಿ ಎಂಕೆ-3, ಒಟ್ಟು 14 ವೈಜ್ಞಾನಿಕ ಉಪಕರಣಗಳನ್ನು ಹೊತ್ತೊಯ್ಯುತ್ತಿದೆ. ಒಟ್ಟು 3.8 ಟನ್ ಸಾಮರ್ಥ್ಯದ GSLV MKIII, ಗಗನನೌಕೆ 11 ಪೇ ಲೋಡ್ ಗಳನ್ನು ಹೊತ್ತೊಯ್ಯಲಿದ್ದು, ಇವುಗಳಲ್ಲಿ ಭಾರತದ 6, ಯುರೋಪಿನ 3, ಅಮೆರಿಕದ 2 ಪೇ ಲೋಡ್ ಗಳು ಇವೆ.

ಸಂಖ್ಯೆಗಳಲ್ಲಿ ಚಂದ್ರಯಾನ-2
3.8 ಟನ್- ಚಂದ್ರಯಾನ ನೌಕೆಯ ಒಟ್ಟು ತೂಕ
48 - ಒಟ್ಟು ದಿನಗಳ ಪ್ರಯಾಣ.ಚಂದ್ರನ ನೆಲ ಸ್ಪರ್ಶಿಸುವ ದಿನ- ಸೆಪ್ಟೆಂಬರ್ 7
978 -ಚಂದ್ರಯಾನ-2ರ ಒಟ್ಟು ವೆಚ್ಚ ಕೋಟಿ ರೂ ಗಳಲ್ಲಿ
386-ಚಂದ್ರಯಾನ-1ರ ಒಟ್ಟು ವೆಚ್ಚ ಕೋಟಿ ರೂ. ಗಳಲ್ಲಿ
14- ಒಟ್ಟು ಪೇ ಲೋಡ್(ನಾಸಾದ ವೈಜ್ಞಾನಿಕ ಉಪಕರಣ ಸೇರಿ)
16-ಭೂಮಿಯ ಮೇಲ್ಮೆ ಸುತ್ತಾ ಗಗನನೌಕೆ ತಿರುಗಾಡುವ ದಿನ
27-ಲ್ಯಾಂಡರ್ ಬೇರ್ಪಡೆಗೂ ಮುನ್ನ ಗಗನನೌಕೆ ಚಂದ್ರನ ಸುತ್ತಾ ತಿರುಗಾಡುವ ದಿನ
3,82,000- ಭೂಮಿ ಮತ್ತು ಚಂದ್ರನ ನಡುವಿನ ಅಂತರ ಕಿ.ಮೀಗಳಲ್ಲಿ
6- ಆರ್ಟಿಬರ್(2,379 ತೂಕ, 1,000 ವ್ಯಾಟ್ ಶಕ್ತಿ)
4- ಆರ್ಬಿಟರ್ ನಿಂಡ ಲ್ಯಾಂಡರ್ ಬೇರ್ಪಡಲು ತೆಗೆದುಕೊಳ್ಳುವ ದಿನ
3-ಲ್ಯಾಂಡರ್(ವಿಕ್ರಮ್) (1,471 ಕೆಜಿ, 650 ವ್ಯಾಟ್ ಶಕ್ತಿ)
2-ರೋವರ್ (ಪ್ರಜ್ಞಾನ್) (27ಕೆಜಿ, 50 ವ್ಯಾಟ್ ಶಕ್ತಿ)
1- ಚಂದ್ರನ ಒಂದು ದಿನ=ಭೂಮಿಯ 14ದಿನಕ್ಕೆ ಸಮ

Chandrayaan 2 in Numbers ISROs Moon mission
English summary
Chandrayaan 2 in Numbers: ISRO's Moon mission will make India 4th country after Russia, America and China to soft land rover on the surface of the moon.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X