ಅಟಲ್ ಬಿಹಾರಿ ವಾಜಪೇಯಿ ಬದುಕಿನ ಹೆಜ್ಜೆಗುರುತುಗಳು
ಮಾಜಿ ಪ್ರಧಾನಿ, ಭಾರತರತ್ನ, ಕವಿ ಹೃದಯದ ಶ್ರೇಷ್ಠ ವಾಗ್ಮಿ. ಚಿಂತಕ ಅಟಲ್ ಬಿಹಾರಿ ವಾಜಪೇಯಿ ಅವರು ಆಗಸ್ಟ್ 16(ಗುರುವಾರ) ತಮ್ಮ ಇಹಲೋಕ ಪಯಣ ಮುಗಿಸಿದ್ದಾರೆ. ಗ್ವಾಲಿಯರ್ ನ ಪುಟ್ಟ ಗ್ರಾಮದಲ್ಲಿ ಹುಟ್ಟಿ ಬೆಳೆದ ವಾಜಪೇಯಿ ಅವರು ಶ್ರೇಷ್ಠ ಸಂಸದೀಯ ಪಟು, ಶ್ರೇಷ್ಠ ಪ್ರಧಾನಿ ಎನಿಸಿಕೊಂಡು, ಮಾದರಿ ರಾಜಕಾರಣಿ ಎನಿಸಿಕೊಂಡವರು.
ನರೇಂದ್ರ ಮೋದಿ ಅವರಿಗೆ ರಾಜಧರ್ಮ ಪರಿಪಾಲನೆ ಪಾಠ ಮಾಡಿದ್ದ ಅಟಲ್ ಅವರು ದೇಶದ ಪ್ರಧಾನಿಯಾಗಿ ಎರಡು ಬಾರಿ ಕಾರ್ಯ ನಿರ್ವಹಿಸಿದ ಮೊದಲ ಅವಿವಾಹಿತ ಎನಿಸಿಕೊಂಡಿದ್ದಾರೆ. ಪ್ರಪ್ರಥಮ ಬಾರಿಗೆ ಅಟಲ್ ನೇತೃತ್ವದಲ್ಲಿ ಕಾಂಗ್ರೆಸ್ಸೇತರ ಸರ್ಕಾರವೊಂದು ಐದುವರ್ಷಗಳ ಕಾಲ ಆಡಳಿತ ನಡೆಸಿದ ಸಾಧನೆ ಮಾಡಿತು.
2005ರಲ್ಲಿ ಸಕ್ರಿಯ ರಾಜಕೀಯದಿಂದ ದೂರ ಉಳಿದಿರುವ ವಾಜಪೇಯಿ ಅವರನ್ನು ಬಿಜೆಪಿಯ ವಿರೋಧಿಸುವ ಮುಖಂಡರು ಕೂಡಾ ಗೌರವದಿಂದ ಕಾಣುತ್ತಾರೆ. 2014ರಲ್ಲಿ ಭಾರತರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರೋಖ್ರಾನ್ ಅಣು ಪರೀಕ್ಷೆ, ಪಾಕಿಸ್ತಾನದೊಂದಿಗೆ ಬಾಂಧವ್ಯ ಬೆಸೆಯುವ ಸಾರಿಗೆ ವ್ಯವಸ್ಥೆ, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ, ಸುವರ್ಣ ಚತುಷ್ಪಥ ಯೋಜನೆ, ಸರ್ವ ಶಿಕ್ಷಾ ಅಭಿಯಾನ ಮುಂತಾದವು ವಾಜಪೇಯಿ ಅವರ ದೂರದೃಷ್ಟಿತ್ವದ ಫಲವಾಗಿದೆ. ವಾಜಪೇಯಿ ಅವರ ಬದುಕಿನ ಮೈಲಿಗಲ್ಲುಗಳ ಚಿತ್ರವರದಿ ಇಲ್ಲಿದೆ













Click it and Unblock the Notifications