ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಅನಂತ್ ಕುಮಾರ್ ಕಾರಣ
ನವದೆಹಲಿ, ಸೆ 10: ಕರ್ನಾಟಕದಲ್ಲಿ ನಾವು ಅಧಿಕಾರಕ್ಕೆ ಬರಲು ಪರೋಕ್ಷವಾಗಿ ನಿಮ್ಮ ಸಹಕಾರವೂ ಇದೆ. ನೀವು ಪಕ್ಷದೊಳಗೆ ಹುಟ್ಟು ಹಾಕಿದ ಆಂತರಿಕ ಕಲಹ ನಮಗೆ ಲಾಭವಾಗಿ ಪರಿಣಮಿಸಿತು.
ಅದಕ್ಕಾಗಿ ಪಕ್ಷದ ಪರವಾಗಿ ನಿಮಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರು ಬಿಜೆಪಿ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರನ್ನು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಪಕ್ಷ ನಿಮಗೆ ಆಭಾರಿಯಾಗಿದೆ. ಕರ್ನಾಟಕದಲ್ಲಿ ನಮ್ಮ ಪಕ್ಷದ ಜಯಭೇರಿಗೆ ಎಲ್ಲರಿಗಿಂತಲೂ ಅನಂತ್ ಕುಮಾರ್ ಸಹಕಾರ ಅತ್ಯಮೂಲ್ಯವಾದದ್ದು. ನಾವು ನಿಮಗೆ ಈ ಸಂದರ್ಭದಲ್ಲಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಲೋಕಸಭೆಯಲ್ಲಿ ಚಿದಂಬರಂ, ಅನಂತ್ ಕುಮಾರಿಗೆ ವ್ಯಂಗ್ಯವಾಗಿ ಚಾಟಿ ಬೀಸಿದ್ದಾರೆ.
ಪೂರಕ ಅನುದಾನದ ವಿಚಾರದಲ್ಲಿ (ಸೆ 5) ಪ್ರತಿಪಕ್ಷಗಳ ಪ್ರಶ್ನೆಗೆ ಉತ್ತರಿಸುತ್ತಿದ್ದ ಚಿದು, ಕರ್ನಾಟಕದಲ್ಲಿ ಉತ್ತಮ ಶಕ್ತಿಯಾಗಿರುವ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಜೆಪಿಯಿಂದ ನಿರ್ಗಮಿಸಲು ನೀವೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.
ಮುಂದೆ ಓದಿ...

ಯಡಿಯೂರಪ್ಪ
ಯಡಿಯೂರಪ್ಪ ಬಿಜೆಪಿ ತೊರೆದು ಹೊಸ ಪಕ್ಷ ಸ್ಥಾಪಿಸಿದ್ದು ಚುನಾವಣೆಯಲ್ಲಿ ನಮಗೆ ಅನುಕೂಲವಾಯಿತು ಎಂದು ಚಿದಂಬರಂ ಹೇಳಿದಾಗ ಅನಂತ್ ಕುಮಾರ್ ಸಹಿತ ಬಿಜೆಪಿ ಸದಸ್ಯರು ದಿವ್ಯ ಮೌನಕ್ಕೆ ಶರಣಾದರು.

ಚಿದು VS ಅನಂತ್
ಸದ್ಯದ ಆರ್ಥಿಕ ದುಸ್ಥಿತಿಗೆ ವಿತ್ತ ಸಚಿವ ಚಿದಂಬರಂ ಅವರೇ ನೇರ ಹೊಣೆ. ಅವರನ್ನು 'ಅನರ್ಥ ಶಾಸ್ತ್ರಿ' ಎಂದು ಕರೆಯಬಹುದು. ಅವರಿಗೆ ಇಲಾಖೆ ನಡೆಸಲು ಆಗದಿದ್ದಲ್ಲಿ, ಅಧಿಕಾರ ಬಿಟ್ಟು ತೊಲಗಲಿ ಎಂದು ಅನಂತ್ ಹೇಳಿದ್ದರು.

ಲೋಕಸಭೆಯಲ್ಲಿ ಅನಂತ್
ಯುಪಿಎ ಸರಕಾರದ ನಿರ್ಲಕ್ಷ್ಯದಿಂದಾಗಿ ದೇಶದಲ್ಲಿ ಹಣದುಬ್ಬರ ಹೆಚ್ಚಾಗಿದೆ. ವಿತ್ತೀಯ ಕೊರತೆ, ರೂಪಾಯಿ ಅಪಮೌಲ್ಯ ದೇಶವನ್ನು ಕಾಡುತ್ತಿದೆ, ಕೇಂದ್ರ ಹಣಕಾಸು ಸಚಿವರು ಏನು ಮಾಡುತ್ತಿದ್ದಾರೆ ಎಂದು ಅನಂತ್ ಕುಮಾರ್ ಪ್ರಶ್ನಿಸಿದ್ದರು.

ಪೂರಕ ಅನುದಾನ ಮಸೂದೆ
ಸೂಕ್ತ ಕ್ರಮ ಕೈಗೊಳ್ಳ ಬೇಕಾದ ಸರಕಾರ ವಿಪಕ್ಷಗಳನ್ನು ಬೈಯುವುದರಲ್ಲೇ ಕಾಲ ತಳ್ಳುತ್ತಿದೆ. ಯುಪಿಎ ಸರಕಾರದ ಅವಧಿಯಲ್ಲಿ ದೇಶ ಪ್ರಗತಿ ಸಾಧಿಸುವ ಬದಲು ತೀವ್ರ ಹಿನ್ನಡೆ ಅನುಭವಿಸುತ್ತಿದೆ ಎಂದು ಅನಂತ್ ಕುಮಾರ್ ಸರಕಾರವನ್ನು ಮತ್ತು ಚಿದಂಬರಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು.

ಚಿದಂಬರಂ
NDA ಅಧಿಕಾರದ ಅವಧಿಯಲ್ಲೂ ದೇಶದಲ್ಲಿ ರೂಪಾಯಿ ಮೌಲ್ಯ ಕುಸಿತ ಕಂಡಿತ್ತು ಎಂದು ಸರಕಾರ ತೆಗೆದು ಕೊಂಡಿರುವ ಕ್ರಮವನ್ನು ವಿವರಿಸುತ್ತಾ ಚಿದಂಬರಂ 'ಯಡಿಯೂರಪ್ಪ' ವಿಚಾರ ತೆಗೆದು ಅನಂತ್ ಕುಮಾರ್ ಬಾಯಿ ಮುಚ್ಚಿಸಿದರು.












Click it and Unblock the Notifications