₹1,000 ಮುಖಬೆಲೆ ನೋಟು ಮತ್ತೆ ಚಲಾವಣೆ ಬಗ್ಗೆ ಆರ್‌ಬಿಐ ಹೇಳಿದ್ದೇನು?
ನವದೆಹಲಿ, ಮೇ 22: ಇತ್ತೀಚೆಗಷ್ಟೇ ಭಾರತೀಯ ರಿಸರ್ವ್ ಬ್ಯಾಂಕ್ 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆಯುವ ಬಗ್ಗೆ ಘೋಷಣೆ ಮಾಡಿದೆ. ಇತ್ತ ಮರಳಿ 1,000 ರೂಪಾಯಿ ಮುಖಬೆಲೆಯ ನೋಟು ಪರಿಚಯಿಸುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿ ಬಂದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಆರ್‌ಬಿಐ ಗವರ್ನರ್ ಸ್ಪಷ್ಟ ಉತ್ತರ ನೀಡಿ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ಭಾರತೀಯ ರಿಸರ್ವ್ ಬ್ಯಾಂಕ್ (RBI) ಗವರ್ನರ್ ಶಕ್ತಿಕಾಂತ್ ದಾಸ್ ಪ್ರಕ್ರಿಯಿಸಿ, 2,000 ರೂ. ಮುಖಬೆಲೆಯ ನೋಟುಗಳನ್ನು ಹಿಂಪಡೆದ ನಂತರ ಸಮಸ್ಯೆ ಉಂಟಾಗಬಾರದೆಂದು ಆರ್‌ಬಿಐ ಪುನಃ 1,000 ರೂ. ನೋಟುಗಳನ್ನು ಮರು ಪರಿಚಯಿಸುತ್ತದೆ ಎಂಬ ಮಾತುಗಳು ಕೇಳಿವೆ ಬಂದಿವೆ. ಅವೆಲ್ಲವು ಊಹಾಪೋಹಗಳು. 1,000 ರೂ. ನೋಟು ಪರಿಚಯಿಸುವ ಯೋಜನೆ ಬ್ಯಾಂಕ್ ಹೊಂದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.

ರೂ. 2,000 ದೊಡ್ಡ ನೋಟು ಅಮಾನ್ಯೀಕರಣದ ನಂತರ ಆರ್ಥಿಕತೆಯ ಕರೆನ್ಸಿ ಅಗತ್ಯವನ್ನು ತ್ವರಿತಗತಿಯಲ್ಲಿ ಪೂರೈಸಲು ನವೆಂಬರ್ 2016ರಲ್ಲಿ 2,000 ರೂ. ನೋಟನ್ನು ಬ್ಯಾಂಕ್ ಪರಿಚಯಿಸಿತು. ಆ ಸಮಯದಲ್ಲಿ ಚಲಾವಣೆಯಲ್ಲಿದ್ದ ಎಲ್ಲಾ ಹಳೆಯ ₹500 ಮತ್ತು ಸಂಪೂರ್ಣವಾಗಿ ₹1,000 ಮುಖ ಬೆಲೆ ನೋಟುಗಳ ಕಾನೂನು ಟೆಂಡರ್ ಸ್ಥಿತಿ ಹಿಂಪಡೆಯಲಾಯಿತು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಬ್ಯಾಂಕ್‌ನ ಈ ನಿರ್ಧಾರದಿಂದ ರೂ.10 ಲಕ್ಷ ಕೋಟಿ ಒಂದೇ ರಾತ್ರಿಯಲ್ಲಿ ಚಲಾವಣೆ (ವಹೀವಾಟು) ಕಳೆದುಕೊಂಡಿತು ಎಂದು ಹೇಳಾಗುತ್ತದೆ.
ನೋಟುಗಳ ಅಗತ್ಯತೆ ಪೂರೈಕೆ ಉದ್ದೇಶವನ್ನು ಈಡೇರಿಸಲು ಇತರ (₹500, ₹200, ₹50, ₹20, ₹10) ಮುಖಬೆಲೆ ನೋಟು ಮುದ್ರಿಸಲಾಯಿತು. ನಂತರ 2018-19 ರಲ್ಲಿ 2000 ರೂ. ನೋಟುಗಳನ್ನು ಬ್ಯಾಂಕ್ ಮುದ್ರಣವನ್ನು ನಿಲ್ಲಿಸಲಾಯಿತು ಆರ್‌ಬಿಐ ತಿಳಿಸಿದೆ.
ದೊಡ್ಡ ನೋಟು ಶೇ.10.8ರಷ್ಟು ಚಲಾವಣೆಯಲ್ಲಿದೆ
ಸದ್ಯ ದೊಡ್ಡ ನೋಟನ್ನು ಹಿಂಪಡೆದಿದ್ದೇವೆ. ಆದರೆ ಸಾರ್ವಜನಿಕರು ತಮ್ಮ ಬಳಿ ಇರುವ ರೂ. 2,000 ಮೌಲ್ಯದ ನೋಟುಗಳನ್ನು ಹಿಂತಿರುಗಿಸಲು ಇಲ್ಲವೇ ಬ್ಯಾಂಕ್ ನಲ್ಲಿ ವಿನಿಮಯ ಮಾಡಿಕೊಳ್ಳವು ವಿಚಾರದಲ್ಲಿ ಆತುರ ಮತ್ತು ಆತಂಕ ಪಡಬಾರದು. ಸಾಕಷ್ಟು ಕಾಲಾವಕಾಶ ಇದೆ. ಸೆಪ್ಟೆಂಬರ್ 30 ರವರೆಗೂ ನೋಟು ವಿನಿಮಯ ಮಾಡಿಕೊಳ್ಳಬಹುದು ಎಂದು ಅವರು ಸಲಹೆ ನೀಡಿದರು.

ಹೀಗೆ ದಿಢೀರನೇ ನೋಟು ಹಿಂಡೆದರೆ ದೇಶದ ಆರ್ಥಿಕತೆಯ ಮೇಲೆ ಪರಿಣಾಮ ಬೀಳುವುದು ತೀರಾ ಕಡಿಮೆ. ಸದ್ಯ ಚಲಾವಣೆಯಲ್ಲಿರುವ ರೂ.2,000 ನೋಟುಗಳ ಒಟ್ಟು ಪ್ರಮಾಣ ಕೇವಲ 10.8 ಪ್ರತಿಶತದಷ್ಟಿದೆ ಎಂದು ಆರ್‌ಬಿಐ ಮುಖ್ಯಸ್ಥರು ತಿಳಿಸಿದ್ದಾರೆ.
ಒಟ್ಟು ಮುದ್ರಣದ ರೂ. 2,000 ಮುಖಬೆಲೆಯ ನೋಟುಗಳಲ್ಲಿ ಶೇಕಡ 89 ರಷ್ಟು ನೋಟುಗಳನ್ನು 2017ರಲ್ಲಿ ಮಾರ್ಚ್ ತಿಂಗಳ ಮೊದಲೇ ನೀಡಲಾಯಿತು. ಅವುಗಳ ಜೀವಿತಾವಧಿ ನಾಲ್ಕರಿಂದ ಐದು ವರ್ಷಗಳ ಎಂದು ಹೇಳಲಾಯಿತು. ಮರುವರ್ಷ 2018ರ ಮಾರ್ಚ್ ವೇಳೆಗೆ ಚಲಾವಣೆಯಲ್ಲಿರುವ ಈ ಬ್ಯಾಂಕ್ ನೋಟುಗಳ ಒಟ್ಟು ಮೌಲ್ಯವು ₹6.73 ಲಕ್ಷ ಕೋಟಿಯಿಂದ ₹ 3.62 ಲಕ್ಷ ಕೋಟಿಗೆ ಇಳಿಯಿತು. ಅಲ್ಲಿವರೆಗೆ ಶೇಕಡಾ 37.3ರಷ್ಟು ನೋಟುಗಳು ಚಲಾವಣೆಯಲ್ಲಿದ್ದವು.
ಇದೀಗ 2023ರ ಮಾರ್ಚ್ 31 ರ ವೇಳೆಗೆ ಚಲಾವಣೆಯಲ್ಲಿರುವ 2000 ರೂಪಾಯಿ ನೋಟುಗಳ ಕೇವಲ ಶೇಕಡಾ 10.8 ರಷ್ಟಿದೆ. ಇಷ್ಟು ಪ್ರಮಾಣದ ನೋಟುಗಳ ವಿನಿಮಯಕ್ಕೆ ಸುಮಾರು ನಾಲ್ಕು ತಿಂಗಳ ಕಾಲಾವಕಾಶ ನೀಡಲಾಗಿದೆ ಎಂದು ಆರ್‌ಬಿಐ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.











Click it and Unblock the Notifications