• search
  • Live TV
keyboard_backspace

ರಫೇಲ್‌ ಸಂಸ್ಥೆಯಿಂದ 2007-12 ರಲ್ಲಿ ಭಾರತದ ಮಧ್ಯವರ್ತಿಗೆ 7.5 ಮಿ. ಯುರೋ ಲಂಚ!

Google Oneindia Kannada News

ಪ್ಯಾರಿಸ್‌, ನವೆಂಬರ್‌ 09: ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳ ಖರೀದಿ ಒಪ್ಪಂದವನ್ನು ಮಾಡಿಕೊಡಲು ಫ್ರಾನ್ಸ್‌ನ ಡಾಸೋ ಏವಿಯೇಷನ್‌ ಸಂಸ್ಥೆಯು 2007-12 ರವೆರೆಗೆ ಭಾರತದ ಮಧ್ಯವರ್ತಿ ಸುಶೇನ್‌ ಗುಪ್ತಾರ ಇಂಟರ್‌ಸ್ಟೆಲರ್‌ ಟೆಕ್ನಾಲಜೀಸ್‌ಗೆ ಸುಮಾರು 7.5 ಮಿಲಿಯನ್‌ ಯುರೋ ಹಣವನ್ನು ನೀಡಿತ್ತು ಎಂದು ಫ್ರಾನ್ಸ್‌ನ ಮಾಧ್ಯಮವೊಂದು ದೂರಿದೆ.

ಈ ಮಧ್ಯವರ್ತಿಯು ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿಯೂ ಭಾಗಿಯಾಗಿದ್ದನು. ಭಾರತದ ಸಿಬಿಐ ಹಾಗೂ ಜಾರಿ ನಿರ್ದೇಶನಾಯಲಯದ ಬಳಿ ಈತ ಲಂಚ ಪಡೆದಿರುವ ಬಗ್ಗೆ ಅಗತ್ಯ ಮಾಹಿತಿಗಳು ಇದೆ. ಆದರೂ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯವು ಯಾವುದೇ ತನಿಖೆಯನ್ನು ಆರಂಭ ಮಾಡಿಲ್ಲ ಎಂದು ಕೂಡಾ ಫ್ರಾನ್ಸ್‌ನ ಮೀಡಿಯಾಪಾರ್ಟ್ ಪೋರ್ಟಲ್‌ ವರದಿಯಲ್ಲಿ ಗಂಭೀರ ಆರೋಪ ಮಾಡಿದೆ.

ರಫೇಲ್ ಒಪ್ಪಂದದಲ್ಲಿ ಭಾರತದ ಮಧ್ಯವರ್ತಿಗೆ 1 ಮಿಲಿಯನ್ ಯುರೋ ಹಣ: ಫ್ರಾನ್ಸ್ ಪತ್ರಿಕೆ ಸ್ಫೋಟಕ ವರದಿರಫೇಲ್ ಒಪ್ಪಂದದಲ್ಲಿ ಭಾರತದ ಮಧ್ಯವರ್ತಿಗೆ 1 ಮಿಲಿಯನ್ ಯುರೋ ಹಣ: ಫ್ರಾನ್ಸ್ ಪತ್ರಿಕೆ ಸ್ಫೋಟಕ ವರದಿ

ಭಾರತದ ಮಧ್ಯವರ್ತಿ ಸುಶೇನ್‌ ಗುಪ್ತಾ ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದಲ್ಲಿ ಭಾಗಿಯಾಗಿದ್ದಾನೆ. ಆತ ರಫೇಲ್‌ ಖರೀದಿ ಒಪ್ಪಂದದಲ್ಲಿಯೂ ಲಂಚವನ್ನು ಪಡೆದಿದ್ದಾನೆ. ಬೇರೆ ದೇಶಗಳಲ್ಲಿ ಇರುವ ಕಂಪನಿಗಳು ನಕಲಿ ಒಪ್ಪಂದಗಳು ಮತ್ತು ನಕಲಿ ಇನ್‌ವಾಯ್ಸ್‌ ಬಳಸಿಕೊಂಡು ಈ ಲಂಚ ಪಾವತಿ ಮಾಡಲಾಗಿದೆ ಎಂದು ದೂರಲಾಗಿದೆ.

 ದಾಖಲೆ ಇದ್ದರೂ ಪರಿಶೀಲಿಸಿದ ಸಿಬಿಐ!

ದಾಖಲೆ ಇದ್ದರೂ ಪರಿಶೀಲಿಸಿದ ಸಿಬಿಐ!

ಇನ್ನು ಈ ಬಗ್ಗೆ ಎಲ್ಲಾ ದಾಖಲೆಗಳನ್ನು ಮಾರಿಷಸ್‌ ಸರ್ಕಾರವು ಭಾರತದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ನೀಡಿದೆ. ಈ ದಾಖಲೆಗಳು ಭಾರತದ ತನಿಖಾ ಸಂಸ್ಥೆಗಳಿಗೆ 2018 ರ ಅಕ್ಟೋಬರ್‌ 11 ರಿಂದಲೇ ಲಭ್ಯವಿದೆ. ಆದರೆ ಭಾರತದ ತನಿಖಾ ಸಂಸ್ಥೆಗಳು ಮಾತ್ರ ಈ ಬಗ್ಗೆ ಈವರೆಗೂ ತನಿಖೆಯನ್ನು ಮಾಡಿಲ್ಲ ಎಂದು ಕೂಡಾ ಫ್ರಾನ್ಸ್‌ನ ಪೋರ್ಟಲ್‌ನಲ್ಲಿ ಉಲ್ಲೇಖ ಮಾಡಲಾಗಿದೆ.

 ರಕ್ಷಣಾ ಸಚಿವಾಲಯದಿಂದಲೇ ಅಗತ್ಯ ದಾಖಲೆ ಪಡೆದ ಮಧ್ಯವರ್ತಿ!

ರಕ್ಷಣಾ ಸಚಿವಾಲಯದಿಂದಲೇ ಅಗತ್ಯ ದಾಖಲೆ ಪಡೆದ ಮಧ್ಯವರ್ತಿ!

ರಫೇಲ್‌ ಒಪ್ಪಂದಕ್ಕೆ ಸಂಬಂಧಿಸಿ ಭ್ರಷ್ಟಾಚಾರ ನಡೆದಿದೆ ಎಂದು ದೂರು ದಾಖಲಾದ ಒಂದು ವಾರದಲ್ಲೇ ಈ ಬಗ್ಗೆ ಎಲ್ಲಾ ದಾಖಲೆಗಳು ಭಾರತದ ಸಿಬಿಐ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಲಭ್ಯವಾಗಿದೆ. ರಫೇಲ್‌ ಖರೀದಿ ಮಾತುಕತೆಯು ಕೊನೆಯ ಹಂತದಲ್ಲಿ ಇದ್ದ ಸಂದರ್ಭ ಅಂದರೆ 2015 ರಲ್ಲಿ ಈ ಭಾರತದ ಮಧ್ಯವರ್ತಿ ಸುಶೇನ್‌ ಗುಪ್ತಾ ಬಳಿ ಈ ಒಪ್ಪಂದಕ್ಕೆ ಸಂಬಂಧ ಪಟ್ಟ ಮಹತ್ವದ ದಾಖಲೆಗಳು ಇದ್ದವು. ಖರೀದಿ ವಿಚಾರದಲ್ಲಿ ರಕ್ಷಣಾ ಸಚಿವಾಲಯವು ಯಾವ ನಿರ್ಧಾರವನ್ನು ಕೈಗೊಂಡಿದೆ ಹಾಗೂ ವಿಮಾನಗಳ ಬೆಲೆ ಎಷ್ಟು ಎಂಬ ಬಗ್ಗೆ ದಾಖಲೆಗಳು ಸುಶೇನ್‌ ಗುಪ್ತಾ ಬಳಿ ಇದ್ದವು. ಈ ಎಲ್ಲಾ ದಾಖಲೆಗಳನ್ನು ಸುಶೇನ್‌ ಗುಪ್ತಾ ರಕ್ಷಣಾ ಸಚಿವಾಲಯದಿಂದಲೇ ಪಡೆದಿದ್ದಾರೆ.

 ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಆರೋಪ

ಕಾಂಗ್ರೆಸ್‌ ಸರ್ಕಾರದ ವಿರುದ್ಧವೂ ಆರೋಪ

"ಇನ್ನು 2007 ಮತ್ತು 2012 ರಲ್ಲಿ ಕಾಂಗ್ರೆಸ್‌ ಸರ್ಕಾರ ಇದ್ದ ಸಂದರ್ಭದಲ್ಲಿ ಯುಪಿಎ ಸರ್ಕಾರ ಇದ್ದ ಸಂದರ್ಭದಲ್ಲಿಯೂ ಸುಶೇನ್‌ ಗುಪ್ತಾಗೆ ಲಂಚ ನೀಡಲಾಗಿದೆ ಎಂಬುದಕ್ಕೆ ಸಂಬಂಧಿಸಿದ ದಾಖಲೆಗಳೂ ಇದೆ. ರಫೇಲ್‌ ಒಪ್ಪಂದಲ್ಲಿ ಸುಶೇನ್‌ ಲಂಚ ಪಡೆದಿದ್ದಾರೆ ಎಂಬುವುದು ಆಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಹಗರಣದ ತನಿಖೆ ವೇಳೆ ಪತ್ತೆಯಾಗಿದೆ. ಈ ಎಲ್ಲಾ ದಾಖಲೆಯನ್ನು ಮಾರಿಷಸ್ ಸರ್ಕಾರ ಸಿಬಿಐಗೆ ನೀಡಿದೆ. ಸುಮಾರು 12 ಸಾವಿರ ಪುಟಗಳ ದಾಖಲೆಗಳು ಸಿಬಿಐಗೆ ಲಭ್ಯವಾಗಿದೆ. ಈ ದಾಖಲೆಗಳು ನಮ್ಮ ಬಳಿಯೂ ಇದೆ," ಎಂದು ಫ್ರಾನ್ಸ್‌ನ ಮೀಡಿಯಾಪಾರ್ಟ್ ಪೋರ್ಟಲ್‌ ವರದಿಯಲ್ಲಿ ಹೇಳಿದೆ. ಆದರೆ ಒನ್‌ಇಂಡಿಯಾಕ್ಕೆ ದಾಖಲೆಗಳನ್ನು ಲಭ್ಯವಾಗಿಲ್ಲ.

 ಈ ಹಿಂದೆ ಕೇಳಿ ಬಂದಿತ್ತು ರಫೇಲ್‌ ಹಗರಣದ ಸುದ್ದಿ

ಈ ಹಿಂದೆ ಕೇಳಿ ಬಂದಿತ್ತು ರಫೇಲ್‌ ಹಗರಣದ ಸುದ್ದಿ

ಈ ಹಿಂದೆ ರಫೇಲ್‌ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಹಗರಣ ನಡೆದಿದೆ ಎಂದು ಇದೇ ಮಾಧ್ಯಮದ ವರದಿಗಳು ತಿಳಿಸಿದ್ದವು. ಭಾರತಕ್ಕೆ ರಫೇಲ್ ಯುದ್ಧ ವಿಮಾನಗಳನ್ನು ಮಾಡಿಕೊಡುತ್ತಿರುವ ಫ್ರಾನ್ಸ್‌ನ ವಿಮಾನ ತಯಾರಕ ಸಂಸ್ಥೆ ಡಸಾಲ್ಟ್, ಭಾರತ-ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನಕ್ಕೆ ಒಪ್ಪಂದ ನಡೆದ ಕೆಲವೇ ಸಮಯದ ಬಳಿಕ ಭಾರತದಲ್ಲಿನ ಮಧ್ಯವರ್ತಿಯೊಬ್ಬರಿಗೆ ಒಂದು ಮಿಲಿಯನ್ ಯುರೋ ಹಣ ನೀಡಿತ್ತು ಎಂದು ಫ್ರಾನ್ಸ್‌ನ 'ಮೀಡಿಯಾಪಾರ್ಟ್' ಆನ್‌ಲೈನ್ ಪತ್ರಿಕೆ ವರದಿ ಮಾಡಿದ್ದವು. 'ರಫೇಲ್ ಜೆಟ್‌ಗಳ 50 ಬೃಹತ್ ಪಡಿಯಚ್ಚುಗಳನ್ನು ತಯಾರಿಸುವ ಸಲುವಾಗಿ ಈ ಹಣವನ್ನು ಪಾವತಿ ಮಾಡಲಾಗಿದೆ ಎಂದು ಕಂಪೆನಿ ತಿಳಿಸಿದೆ. ಆದರೆ ಈ ಮಾದರಿಗಳನ್ನು ನಿರ್ಮಿಸಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆ ದೊರಕಿಲ್ಲ' ಎಂಬುದಾಗಿ ಮೀಡಿಯಾಪಾರ್ಟ್ ತಿಳಿಸಿದ್ದವು.

(ಒನ್‌ಇಂಡಿಯಾ ಸುದ್ದಿ)

English summary
From 2007-12, Rafale maker paid €7.5 mn to middleman: French portal report.
Related News
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
Desktop Bottom Promotion