ಲೈಫ್ ಎಂಜಾಯ್ ಮಾಡೋಕೆ, ವೈಫ್ ಜಗಳ ಆಡೋಕೆ!

ಇವತ್ತಿನ ದಿನ ಪ್ರೇಮಿಗಳಿಗೆ ಅದೇನು ವಿಶೇಷವೋ ಯಾವೊನಿಗ್ಗೊತ್ತು? ನಾನಂತೂ ನನ್ ಹೆಂಡ್ತೀ ಜೊತೆಗೆ ಬೆಳ್ಳಂಬೆಳಿಗ್ಗೆಯೇ ಸಖತ್ ಜಗಳ ಆಡಿಕೊಂಡು ಬಂದಿದ್ದೇನೆ. ಥತ್ತೇರೇಕಿ, ಕನಿಷ್ಠಪಕ್ಷ ಇವತ್ತಾದರೂ ಗಂಡ ಹೆಂಡತಿ ಇಬ್ಬರು, ಅಂದ್ರೆ ನಾವಿಬ್ಬರೂ ಜಗಳ ಆಡಬಾರದಿತ್ತು ಅಂತ ಅನಿಸಿದರೂ, ನನಗೆ ಈ ಪ್ರೇಮಿಗಳ ದಿನದ ಆಚರಣೆಯ ಬಗ್ಗೆ ನಂಬಿಕೆಯೇ ಇಲ್ಲ.

ಆಲ್ ಡೇಸ್ ಆರ್ ಈಕ್ವಲ್ ಟು ಮಿ. ಯಾಕಂದ್ರೆ, ಈಗ ಜಗಳಾಡಿರ್ತೀವಿ, ಸಂಜೆ ಹೊತ್ತಿಗೆ ಎಲ್ಲವೂ ತಣ್ಣಗಾಗಿರುತ್ತದೆ, ನಂತರ ಇಬ್ಬರೂ ಸಖತ್ ಜೋಕ್ ಕಟ್ ಮಾಡಿ ನಗ್ತೀವಿ. ಇದುವೇ ಜೀವನ ಅಲ್ವೆ? ಇನ್ನು ಗಿಫ್ಟು ಮಣ್ಣುಮಸಿ ಬಗ್ಗೆ ನನಗಂತೂ ನಂಬಿಕೆಯೇ ಇಲ್ಲ. ವೃಥಾ ವೇಸ್ಟು.

ವಾಟೆವರ್, ಇವತ್ತಂತೂ ಟ್ವಿಟ್ಟರಲ್ಲಿ, ಫೇಸ್‌ಬುಕ್ಕಲ್ಲಿ ಪ್ರೇಮದ ಸಂದೇಶಗಳು ಪುಂಖಾನುಪುಂಖವಾಗಿ ಹರಿದುಬರುತ್ತಿವೆ. ಕೆಲವು ತಮಾಷೆಯಿಂದ ಕೂಡಿರುತ್ತವೆ, ಕೆಲವು ಸಖತ್ ಸೀರಿಯಸ್ ವಿರಹ ಸಂದೇಶಗಳಾಗಿರುತ್ತವೆ. ಐ ಪಿಟಿ ದೋಸ್ ಪೀಪಲ್. ಲೈಫ್ ಇರೋದೇ ಎಂಜಾಯ್ ಮಾಡೋಕೆ, ವೈಫ್ ಇರೋದೆ ಜಗಳ ಆಡೋಕೆ. ಸಾರಿ ಟು ಮೈ ವೈಫ್, ಬಟ್ ಗಂಡನಿಗೂ ಇಂಥ ಪ್ರಾಸ ಇದ್ರೆ ಹೇಳಿರಿ. ಏನಂತೀರಿ?

ಏನೇ ಆಗಲಿ ನಕ್ಕುನಲಿ ಇದು ಜೀವನದ ಮಂತ್ರವಾಗಬೇಕು. ಅದಕ್ಕಾಗಿಯೇ, ಈ 5 ಜೋಕುಗಳು + ಸ್ನೇಹಿತರೊಬ್ಬರು ಟ್ವಿಟ್ಟರಲ್ಲಿ ಬರೆದಿರುವ ಪುಟ್ಟ ಕವನ, ನಿಮಗಾಗಿ.

ಕಾಲ್ ಮಿ ಡಾರ್ಲಿಂಗ್, ಪ್ಲೀಸ್!

ಕಾಲ್ ಮಿ ಡಾರ್ಲಿಂಗ್, ಪ್ಲೀಸ್!

ಪ್ರೇಮಿಗಳ ದಿನ ಲೇಡಿ ಲವ್ ಪೆದ್ದು ಹುಡುಗನಿಗಾಗಿ ಕಾಯುತ್ತಿರುತ್ತಾಳೆ. ಆತ ಸಿಕ್ಕಾಪಟ್ಟೆ ಲೇಟ್ ಲತೀಫ್ ಆಗಿರುತ್ತಾನೆ. ಮೊಬೈಲ್ ಎತ್ತಿಕೊಂಡವಳೆ.
ಹುಡುಗಿ, "ಕಾಲ್ ಮಿ ಡಾರ್ಲಿಂಗ್, ಪ್ಲೀಸ್" ಅನ್ನುತ್ತಾಳೆ.
ಹುಡುಗ, "ಡಾರ್ಲಿಂಗ್" ಎಂದು ಉತ್ತರಿಸುತ್ತಾನೆ.
ಹುಡುಗಿ, "ಕಾಲ್ ಮಿ ಹನಿ" ಅಂತ ಮತ್ತೆ ಹೇಳುತ್ತಾಳೆ.
ಹುಡುಗ, "ಹನಿ" ಎಂದುತ್ತರಿಸುತ್ತಾನೆ.
ಹುಡುಗಿ ರೊಚ್ಚಿಗೆದ್ದು, "ನಿಮ್ಮಜ್ಜಿ, ಕರೆನ್ಸಿ ಖಾಲಿ ಆಗಿದೆ, ಕಾಲ್ ಮಾಡಲೋ!"

ರೀ, ಈ ಕನಸಿನ ಅರ್ಥ ಏನ್ರೀ?

ರೀ, ಈ ಕನಸಿನ ಅರ್ಥ ಏನ್ರೀ?

ಹೆಂಡತಿ : ರೀ, ಪ್ರೇಮಿಗಳ ದಿನ ನನಗೆ ಡೈಮಂಡ್ ನೆಕ್ಲೇಸ್ ನೀಡಿದ ಕನಸು ಬಿದ್ದಿತ್ತು. ಈ ಕನಸಿನ ಅರ್ಥ ಏನ್ರೀ?
ಗಂಡ : ಇವತ್ತು ರಾತ್ರಿ ಗೊತ್ತಾಗುತ್ತದೆ.
ಗಂಡನ ಮಾತು ಕೇಳಿ ಖುಷಿಯಿಂದ ನಲಿದಾಡಿದ ಹೆಂಡತಿ, ಗಂಡನ ಬರುವಿಕೆಗಾಗಿ ಕಾಯುತ್ತಿರುತ್ತಾಳೆ. ರಾತ್ರಿ ಬಂದ ಗಂಡ ಹೆಂಡತಿಗೆ ಗಿಫ್ಟ್ ಕೊಡುತ್ತಾನೆ. ಚಿನ್ನದ ಕಾಗದ ಸುತ್ತಿದ್ದ ಉಡುಗೊರೆ ಬಿಚ್ಚಿ ನೋಡಿದಾಗ ಅಲ್ಲೊಂದು ಪುಸ್ತಕವಿರುತ್ತದೆ. ಶೀರ್ಷಿಕೆ : 'ಕನಸುಗಳ ಅರ್ಥ ಗೊತ್ತಾ?'

ಮದುಮಗಳು ಬಿಳಿ ಬಟ್ಟೆಯೇಕೆ ಧರಿಸಿದ್ದಾಳೆ?

ಮದುಮಗಳು ಬಿಳಿ ಬಟ್ಟೆಯೇಕೆ ಧರಿಸಿದ್ದಾಳೆ?

ಪುಟ್ಟ ಹುಡುಗಿಯೊಬ್ಬಳು ಮೊದಲ ಬಾರಿ ಕ್ರಿಶ್ಚಿಯನ್ ಮದುವೆಗೆ ಬಂದಿರುತ್ತಾಳೆ. ಮದುವಣಗಿತ್ತಿ ಬಿಳಿ ಗೌನ್ ಧರಿಸಿ ಸುಂದರವಾಗಿ ಕಾಣಿಸುತ್ತಿರುತ್ತಾಳೆ. ಉಂಗುರ ಹಾಕಿ ಮುತ್ತು ನೀಡಬೇಕಾದ ವರ ಕರಿಬಣ್ಣದ ಸೂಟ್ ಧರಿಸಿರುತ್ತಾನೆ.
ಹುಡುಗಿ : ಮಮ್ಮಿ, ಹುಡುಗಿ ಬಿಳಿ ಬಟ್ಟೆಯೇಕೆ ಧರಿಸಿದ್ದಾಳೆ?
ಮಮ್ಮಿ : ಪುಟ್ಟಾ, ಬಿಳಿ ಸಂತೋಷದ ಸಂಕೇತ. ಇವತ್ತು ಆಕೆಯ ಜೀವನದಲ್ಲಿ ಅತ್ಯಂತ ಸಂತೋಷದ ಸಂಕೇತ. ಅದಕ್ಕೇ ಬಿಳಿ ಗೌನ್ ಧರಿಸಿದ್ದಾಳೆ.
ಒಂದೆರಡು ಕ್ಷಣ ಯೋಚಿಸಿದ ಹುಡುಗಿ, "ಹಾಗಾದ್ರೆ, ವರ ಏಕೆ ಕರಿ ಬಣ್ಣದ ಸೂಟ್ ಧಸಿರಿದ್ದಾನೆ? ಆತನಿಗೆ ಇವತ್ತಿನ ದಿನ ಅತ್ಯಂತ ದುಃಖದ ದಿನವೆ?"

ಸ್ವೀಟಿ, ಪ್ಲೀಸ್ ಡೋಂಟ್ ಡಿಸ್ಟರ್ಬ್ ಮಿ

ಸ್ವೀಟಿ, ಪ್ಲೀಸ್ ಡೋಂಟ್ ಡಿಸ್ಟರ್ಬ್ ಮಿ

ಹೆಂಡತಿ : ರೀ, ಹ್ಯಾಪಿ ವ್ಯಾಲಂಟೈನ್ಸ್ ಡೇ ರೀ.
ಗಂಡ : ಸ್ವೀಟಿ, ಪ್ಲೀಸ್ ಡೋಂಟ್ ಡಿಸ್ಟರ್ಬ್ ಮಿ. ನಾನು ಎರಡು ನಿಮಿಷಗಳ ಮೌನ ಆಚರಿಸುತ್ತಿದ್ದೇನೆ.
ಹೆಂಡತಿ : ಯಾಕೆ, ಡಾರ್ಲಿಂಗ್? ಯಾರಾದ್ರೂ ಹೋದ್ರಾ?
ಗಂಡ : ಇವತ್ತು ನಮ್ಮ ಮ್ಯಾರೇಜ್ ಅನಿವರ್ಸರಿ ಕೂಡ ಅಲ್ವಾ? ಅದಕ್ಕೆ.

ಮದುವೆಯಾದ ಗಂಡ ಕೊಟ್ಟ ಜಾಹೀರಾತು

ಮದುವೆಯಾದ ಗಂಡ ಕೊಟ್ಟ ಜಾಹೀರಾತು

ಮದುವೆಯಾದ ಗಂಡಸೊಬ್ಬ ಪತ್ರಿಕೆಯಲ್ಲಿ ಜಾಹೀರಾತು ಕೊಟ್ಟಿರುತ್ತಾನೆ. ಅದು ಹೀಗಿರುತ್ತದೆ...

"ಮದುವೆ ಸೂಟ್ ಮಾರಾಟಕ್ಕಿದೆ. ಒಂದೇ ಒಂದು ಬಾರಿ ಮದುವೆಯ ದಿನ ತಪ್ಪಿ ಹಾಕಿಕೊಂಡಿದ್ದು!"

ಈ ಗೀತೆ ಪ್ರೇಮಿಗಳಿಗೆ ಮುಡಿಪು

ಈ ಗೀತೆ ಪ್ರೇಮಿಗಳಿಗೆ ಮುಡಿಪು

"ನಯನ ನಿನ್ನದಾದರೆ ಕಂಬನಿ ನನ್ನದಾಗಲಿ, ಹೃದಯ ನಿನ್ನದಾದರೆ ಮಿಡಿತ ನನ್ನದಾಗಲಿ, ನನ್ನ ಸ್ನೇಹ ಎಷ್ಟು ಆಳವೆಂದರೆ, ನಿನ್ನ ಉಸಿರು ನಿಂತಾಗ, ಸಾವು ನನ್ನದಾಗಲಿ".

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+