ಹೀಗೊಂದು ಪ್ರೇಮ ಪತ್ರ., ಮೊದಲ ಪುಟ
ಹಾಯ್ ಕೃತಿ,
ಇದು ನಾನು ಬರೆಯುತ್ತಿರೋ ಮೊದಲ ಪ್ರೇಮ ಪತ್ರ. ಹೇಗೆ ಪ್ರಾರಂಭ ಮಾಡ್ಬೇಕು ಅಂತ ತಲೆಬುಡ ಗೊತ್ತಾಗ್ತಾ ಇಲ್ಲ. ಈ ಎರಡು ಸಾಲುಗಳ ಬರೆಯುವಷ್ಟರಲ್ಲಿ ನಾಲ್ಕು ಹಾಳೆಗಳನ್ನ ಹರಿದಿದ್ದೀನಿ, ಇನ್ನೆಷ್ಟೋ ಹರಿಯುತ್ತೀನೋ ಗೊತ್ತಿಲ್ಲ. ಏನ್ ಬರೆಯಬೇಕು ಅಂತ ಗೊತ್ತಾಗದೆ ತಲೆ ಕೆರೆದರೆ ಕೂದಲು ಕೈಯಲ್ಲಿ ಬಂದವೆ ಹೊರತು ಹೊಸ ವಿಚಾರ ತಲೆಯಲ್ಲಿ ಮೂಡ್ಲಿಲ್ಲ. ಈ ಪತ್ರ ಓದಿ ನೀನು ಹೇಗೆ ರಿಯಾಕ್ಟ್ ಮಾಡ್ತಿಯೋ ಅಂತ ನೆನೆದ್ರೆ ಸಾಕು ಹೃದಯ ಡಬಡಬ ಬಡ್ಕೊಳ್ಳುತ್ತೆ. ಅದರ ಶಬ್ಡಕ್ಕೆ ಪಕ್ಕದ ಅಂಗಡಿಯಲ್ಲಿ ಹಾಕಿರೋ generator ಶಬ್ಡ ಕಿವಿಗೆ ಹತ್ತಿರ ಅನ್ನಿಸೊಲ್ಲ!
Hmm...ನೆನಪಿದ್ಯಾ? ಆವತ್ತು ನಿನ್ನ birthdayಗೆ wish ಮಾಡೋಕೆ ಅಂತ ನಾನೂ ಚೆಂದಾಗಿರೋ ಹೊಸ ಹೊಸ ಬಟ್ಟೆ ಹಾಕ್ಕೊಂಡು ಬೆಳಿಗ್ಗೆ ಓಡೋಡಿ ಬಂದೆ, ಅದೇ ಆ 17ನೇ ಪ್ಲಾಟ್-ಫಾರಂಗೆ. ನೀನು ಪಿಂಕ್ ಕಲರ್ ಚೂಡಿ ಹಾಕಿದ್ದೆ. ಅದರಲ್ಲಿ ಮೈತುಂಬಾ ಚಂದ್ರನ ಬಿಂಬಗಳು ಆವರಿಸಿದ್ದವು, ಚಂದಿರ ನಿನಗೆ ಸಡ್ಡು ಹೊಡೆಯಲು ಹವಣಿಸಿದ್ದ.

ಆದರೆ ಮೊಗದಲ್ಲಿ ಮೂಡಿದ್ದ ಆ ನಿಷ್ಕಲ್ಮಷ ನಗು ಮೈಯನ್ನು ಹೊದ್ದಿದ್ದ ಆ ಚಂದಿರನನ್ನ ಸೋಲಿಸಿತ್ತು. ಸತ್ತು ಸ್ವರ್ಗದಲ್ಲಿರೋ ಆ ರವಿವರ್ಮನಿಗೂ ಹೊಟ್ಟೆಕಿಚ್ಚಾಗಿರ್ಬೇಕು ನಿನ್ನನ್ನ ನೋಡಿ,"ಛೇ ನಾನು ಬದುಕಿರುವಾಗ ಇವಳು ಹುಟ್ಟಲಿಲ್ಲ ಅಂತ". ವಿಶ್ ಮಾಡೋಕೆ ಅಂತ ಬಂದವ ನಿನ್ನ ನೋಡಿ ಹುಶ್ ಎನ್ನುತ್ತಾ ಸುಮ್ಮನಾದೆ.
ನೀ ಬಂದು ನಿಂತಾಗ
ನಿಂತು ನೀ ನಕ್ಕಾಗ
ನಕ್ಕು ನೀ ಸೆಳೆದಾಗ
ಸೋತೇ ನಾನಾಗ...
ನೀನು ಸುಂದರಿಯೇನೋ ದಿಟ, ಆದ್ರೆ ನಿನ್ನನ್ನ ಮತ್ತಷ್ಟು ಸುಂದರಿಯನ್ನಾಗಿ ಮಾಡಿರೋದು ಆ ನಿನ್ನ ವ್ಯಕ್ತಿತ್ವ. ಮೊದಲ ಬಾರಿಗೆ ನಿನ್ನನ್ನ ನೋಡಿದಾಗ ಇಂಥ ಸುಂದರಿಗೆ ಎಂಥಾ ಹೃದಯವಿದೆಯೋ ಅಂತ ಯೋಚನೆಗೀಡಾಗಿದ್ದೆ. ಆವಾಗೊಂದ್ಸಲ ನೀನು ಬಸ್-ಸ್ಟಾಪಿನಲ್ಲಿ ನಿಂತಿದ್ದಾಗ ಹಣ್ಣುಹಣ್ಣು ಮುದುಕಿ ಬಂದು "ಎರಡು ದಿನಾ ಆಯ್ತು ಏನೂ ತಿಂದಿಲ್ಲ. ಏನಾದ್ರು ಕೊಡಿ" ಅಂದಿದ್ದಕ್ಕೆ, ನಿಮ್ಮಮ್ಮ ಅಂದ್ರೆ, ನನ್ನ ಭಾವೀ ಅತ್ತೆ ಮಾಡಿದ ನಿನ್ನ ಫೇವರೀಟ್ ಬಿಸಿಬೇಳೆ ಬಾತ್, ಪಾಯಸ, ಚಪಾತಿ, ಪಲ್ಯ ಎಲ್ಲಾನೂ ಅವಳಿಗೆ ಕೊಟ್ಟೆ.
ಅದನ್ನ ತಿಂದ ಮುದುಕಿ,"ಬಂಗಾರದಂತಹ ಗಂಡ ಸಿಗಲಿ ಮಗಳೇ ನಿಂಗೆ" ಅಂತ ಹೃದಯತುಂಬಿ ಹರಸಿದಾಗ, ನೀನು ನಾಚಿಕೆಯ ವಶವಾಗಿದ್ದೆ. ಅಲ್ಲೇ...ಎರಡೇ ಎರಡು ಅಂಗುಲ ದೂರದಲ್ಲಿ ನನಗೆ ನನ್ನ ಬಸ್ ಬಂದು ಹೋಯ್ತು ಅಂತ ಸ್ನೇಹಿತ ಹೇಳೋವರೆಗೂ ಇಹದ ಪರಿವೇಯಿರಲಿಲ್ಲ.
ತುಂಬಾ ಒಳ್ಳೆಯ ಕೆಲಸ ಮಾಡಿದ್ರಿ ನೀವು ಅಂತ ಹೇಳೋಕೆ ಹತ್ತಿರ ಬಂದೆ, ಬಾಯಿಯೆಲ್ಲಾ ಒಣಗಿ ಮಾತೇ ಬಾರದಂತಾದೆ. ಹೀಗೆ ಎಷ್ಟು ಸಲ ಆಗಿದ್ಯೋ ನಾ ಕಾಣೆ. ನಿನ್ನ ಹತ್ತಿರ ಮಾತಾಡ್ಬೇಕೆಂದು ರಾತ್ರಿಯೆಲ್ಲಾ ನಿದ್ದೆಗೆಟ್ಟು ಅಭ್ಯಾಸಮಾಡಿ ಬಂದಿದ್ದರೂ ನಿನ್ನ ಎದುರು ಬಂದಾಗ ಗಾಢ ಮೌನ ಆವರಿಸುತ್ತ್ತೆ, ಹೃದಯ ತಲ್ಲಣಿಸುತ್ತೆ, ತಲೆಯೆಲ್ಲಾ ನಿಚ್ಚಳವಾಗಿ ಏನೂ ಹೊಳೆಯೋದಿಲ್ಲ. ಗಾಡಿ ಸದ್ದು, ಅಲ್ಲಿ ಗಲಾಟೆ ಏನೂ ಕೇಳಿಸದು ನನ್ನ ಹೃದಯದ ಬಡಿತವಾಗಿರೋ ನಿನ್ನನ್ನ ಬಿಟ್ಟು.
ನೀ ಇರಲು ಜೊತೆಯಲ್ಲಿ
ಬಾಳೆಲ್ಲ ಹಸಿರಾದಂತೆ
ನಗುತ ನೀ ಕರೆದರೆ
ಮನದೆ ಸಂತೋಷ ಹಾಡಾದಂತೆ
ನಾನು ನಿನ್ನ ಹಿಂದೆ ಬಿದ್ದಿರೋದು ನಿಂಗೆ ಗೊತ್ತಾಯ್ತು ಅನ್ಸುತ್ತೆ. ಆವತ್ನಿಂದ ನಾ ಬಂದ್ರೆ ಸಾಕು, ಕಾಲ್ಬೆರಳು ನೆಲ ಕೆದಕುತ್ತೆ, ದುಪ್ಪಟ್ಟ ಹಿಂದಕ್ಕೆ-ಮುಂದಕ್ಕೆ ಸುಮ್-ಸುಮ್ನೆ ಹಾಕ್ತಿಯಾ. ಬೀಸೋ ಗಾಳಿ ನಿನ್ನ ಕೆನ್ನೆಗೆ ಮುತ್ತಿಕ್ಕಿದ ಮೇಲೆ, ಕೆನ್ನೆಗೆ ಮುತ್ತಿಕ್ಕಲು ಸ್ಪರ್ಧೆಯಿಂದ ಬಾಗಿ-ಬಾಗಿ ಬಂದ ಕೂದಲುಗಳನ್ನು ಹಿಂದಕ್ಕೆ ದೂಡಿದಂತೆ ಮಾಡಿ ವಾರೆಗಣ್ಣಿನಿಂದ ನನ್ನ ನೋಡುತ್ತಿದ್ದ ನಿನ್ನ ತುಂಟ ಕಂಗಳ ನೋಡಿ ನನ್ನಲ್ಲಿ ಖುಷಿಯ ಜಲಪಾತ ಧೋ ಎಂದು ಧುಮ್ಮಿಕ್ಕುತ್ತಿತ್ತು. ಮುಂದೆ ಓದಿ...
-
Karnataka Weather Mar 12: ಬಿಸಿಲು ಹೆಚ್ಚಳದ ನಡುವೆ ಮಾರ್ಚ್ 15ರಿಂದ ಕರ್ನಾಟಕದಲ್ಲಿ ಮಳೆ, ಹೇಗಿದೆ ಇಂದಿನ ವೆದರ್ -
Gold Rate March 12: ಚಿನ್ನದ ಬೆಲೆ 10,900 ರೂ., ಬೆಳ್ಳಿ ಬೆಲೆ 10,000 ರೂ. ಭರ್ಜರಿ ಇಳಿಕೆ, ಬಂಗಾರ ಪ್ರಿಯರು ಫಿದಾ -
ಇರಾನ್ ಪರಮಾಣು ವಿಜ್ಞಾನಿ ಕಥೆ ಮುಗಿಸಿದ ಇಸ್ರೇಲ್, ಮತ್ತಷ್ಟು ತಿಕ್ಕಾಟ ಶುರು | Operation Roaring Lion -
ಹೊಸೂರು ವಿಮಾನ ನಿಲ್ದಾಣ: ಬೆಂಗಳೂರು ಸಮೀಪ 2,979 ಎಕರೆ ಭೂಮಿ ಸ್ವಾಧೀನ; ಕನ್ನಡದಲ್ಲೇ ಮಾತನಾಡಿದ ತಮಿಳುನಾಡು ಶಾಸಕ -
Bengaluru Property Sale: ಬೆಂಗಳೂರಲ್ಲಿ 50 ಆಸ್ತಿದಾರರಿಗೆ ತಮ್ಮ ಆಸ್ತಿಯನ್ನೇ ಕಳೆದುಕೊಳ್ಳುವ ಆತಂಕ: ಜಿಬಿಎ ಹೇಳಿದ್ದೇನು -
ಭಾರತೀಯ ಸೇನೆಯನ್ನ ಅಪಹಾಸ್ಯ ಮಾಡಿದ್ದ ಪಾಕ್ ಆಟಗಾರನಿಗೆ 2.34 ಕೋಟಿ ಆಫರ್; ಕಾವ್ಯಾ ಮಾರನ್ ವಿರುದ್ಧ ಭುಗಿಲೆದ್ದ ಆಕ್ರೋಶ -
ಒಣ ಮೆಣಸಿನಕಾಯಿ ಬಳಸುವ ಮುನ್ನ ಈ ಕೆಲಸ ಮಾಡಿದ್ದೀರಾ? ಆರೋಗ್ಯ ಕಾಪಾಡಲು ಇಲ್ಲಿದೆ ಸೂಪರ್ ಐಡಿಯಾ -
Rashmika Mandanna: ಆ ಆಡಿಯೋ, ವಿಷಯವನ್ನ 24 ಗಂಟೆಯೊಳಗೆ ಡಿಲೀಟ್ ಮಾಡದಿದ್ದರೆ ಕಾನೂನು ಕ್ರಮ ಎಂದ ರಶ್ಮಿಕಾ ಮಂದಣ್ಣ -
Bengaluru: ಬೆಂಗಳೂರಿನ ಹೋಟೆಲ್ಗಳಲ್ಲಿ ಗ್ರಾಹಕರಿಗೆ ಶಾಕ್: ಸಾಂಬಾರ್ ಬದಲು ಬೇರೆ ಆಯ್ಕೆ - ಪೋಸ್ಟ್ ವೈರಲ್, ಡಿಸಿ ಹೇಳಿದ್ದೇನು -
Sulekere: ಮಂಡ್ಯದಲ್ಲಿ ಸೂಳೇಕೆರೆ ಮರುನಾಮಕರಣ ಚರ್ಚೆ: ಇತಿಹಾಸಕ್ಕೆ ಮಸಿ ಬಳಿಯಬೇಡಿ ಎಂದ ಜಗದೀಶ್ ಕೊಪ್ಪ -
ವಿಶ್ವಗುರು ಬಸವಣ್ಣ ಮತ್ತು ಅಕ್ಕಮಹಾದೇವಿ ಬಗ್ಗೆ ಅವಹೇಳನಕಾರಿ ಪೋಸ್ಟ್: ಆರೋಪಿ ಬಂಧನಕ್ಕೆ ಆಗ್ರಹ -
Horoscope March 12: ಗುರುವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ, ಇಲ್ಲಿದೆ ದಿನ ಭವಿಷ್ಯ












Click it and Unblock the Notifications